ಬೆಂಗಳೂರು : ಮಾಜಿ ಸಂಸದ ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ವಂಚನೆ ಮಾಡಿದ್ದ ಐನಾತಿ ಐಶ್ವರ್ಯ ಗೌಡ ಹಾಗೂ ಈಕೆಯ ಪತಿ ಹರೀಶ್ ಎಂಬಾತನನ್ನು ಆರ್.ಆರ್ ನಗರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.
ವಂಚಕಿ ಐಶ್ವರ್ಯ ಗೌಡ ಹಾಗೂ ಪತಿ ಹರೀಶ್ಗೆ ತಮ್ಮ ಎದುರು ವಿಚಾರಣೆಗೆ ಹಾಜರಾಗುವಂತೆ ಆರ್.ಆರ್ ನಗರ ಪೊಲೀಸರು ಎರಡು ಬಾರಿ ನೋಟಿಸ್ ನೀಡಿದ್ದರು. ಪೊಲೀಸರು ನೋಟಿಸ್ ನೀಡಿದ್ದರೂ ಕ್ಯಾರೇ ಎನ್ನದೇ ತನ್ನ ಪಾಡಿಗೆ ತಾನಿದ್ದ ಐಶ್ವರ್ಯ ಗೌಡ ಹಾಗೂ ಹರೀಶ್ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಿಲ್ಪಾಗೌಡ ಎಂಬುವವರು ನೀಡಿದ ದೂರಿನ ಮೇರೆಗೆ ಖತರ್ನಾಕ್ ದಂಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರ್.ಆರ್ ನಗರ ಪೊಲೀಸರು ಇಬ್ಬರನ್ನೂ ಬಂಧಿಸಿ 4ನೇ ACMM ಕೋರ್ಟ್ಗೆ ಹಾಜರುಪಡಿಸಿದ್ದಾರೆ. ಇನ್ನು ಶಿಲ್ಪಾಗೌಡ ಅವರಿಗೆ 3.5 ಕೋಟಿ ಮೌಲ್ಯದ ಚಿನ್ನಾಭರಣ ವಂಚನೆ ಮಾಡಿದ್ದರು.
ಇದನ್ನೂ ಓದಿ : ನಟ ದರ್ಶನ್ಗೆ ಬಿಗ್ ಶಾಕ್.. ಶುರುವಾಯ್ತು ‘ಜಾಮೀನು’ ಸಂಕಷ್ಟ – ಬೇಲ್ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಪೊಲೀಸರು!