Download Our App

Follow us

Home » Uncategorized » ಲೋಕಸಮರಕ್ಕೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ತಯಾರಿ.. ಆ ಮೂರು ಕ್ಷೇತ್ರಗಳ ಮೇಲೆ ಹೆಚ್​ಡಿಕೆ ಕಣ್ಣು..!

ಲೋಕಸಮರಕ್ಕೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ತಯಾರಿ.. ಆ ಮೂರು ಕ್ಷೇತ್ರಗಳ ಮೇಲೆ ಹೆಚ್​ಡಿಕೆ ಕಣ್ಣು..!

ಬೆಂಗಳೂರು :   ಈಗಾಗಲೇ ಲೋಕಸಮರಕ್ಕೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ತಯಾರಿ ನಡೆಸಿದ್ದು, ಆ ಮೂರು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೆಚ್​ಡಿಕೆ ಜನರ ಒಲವು ಅರಿಯಲು ಮುಂದಾಗಿ, ಸರ್ವೆ ಮಾಡಿಸಲಿದ್ದಾರೆ. ಯಾವುದು ಆ ಮೂರು ಕ್ಷೇತ್ರ ಅಂತೀರಾ ಈ ಸ್ಟೋರಿ ಓದಿ..

HD Kumaraswamy - hd kumaraswamy profile | Vijay Karnataka

ಹೆಚ್​ಡಿಕೆ ದೇವೇಗೌಡರನ್ನು ಸೋಲಿಸಿದ್ದ ತುಮಕೂರಿನಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟಿದ್ದು, ನಿಖಿಲ್​​ ಕುಮಾರಸ್ವಾಮಿ ನಿಂತು ಸೋತ ಮಂಡ್ಯ ಕ್ಷೇತ್ರ  ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರ, ಚಿಕ್ಕಬಳ್ಳಾಪುರದ ಮೇಲೆ ಕಣ್ಣಿಟ್ಟಿದ್ದಾರೆ. 3 ಕ್ಷೇತ್ರಗಳಲ್ಲಿ ಸರ್ವೆ ಮಾಡಿ ಒಂದು ಕ್ಷೇತ್ರ ಆಯ್ಕೆ ಮಾಡುವ ಸಾಧ್ಯತೆಗಳಿವೆ.

ಮಂಡ್ಯ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರದಲ್ಲಿ ದಳಪತಿ ಆಂತರಿಕ ಸಮೀಕ್ಷೆ ನಡೆಸಲಿದ್ದಾರೆ. ಎಲ್ಲಿ ಸ್ಪರ್ಧೆ ಮಾಡಿದ್ರೆ ಗೆಲ್ಲುವ ಚಾನ್ಸ್​ ಎಷ್ಟು ಪರ್ಸೆಂಟೇಜ್​ ಎಂದು ಸರ್ವೆ ಮಾಡಲಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಸೋತ ಬಳಿಕ ಜನರ ಅಭಿಪ್ರಾಯ ಹೇಗಿದೆ..? ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಬಲ ಸಿಕ್ಕರೇ ತಾವು ಗೆಲ್ಲಬಹುದೇ..? ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ವಿರುದ್ಧ ಗೆಲ್ಲಬಹುದಾ..?
ಆಂತರಿಕ ಸಮೀಕ್ಷೆ ಆಧರಿಸಿ ಲೋಕಸಭೆಗೆ ಸ್ಪರ್ಧೆ ಬಗ್ಗೆ ಹೆಚ್​ಡಿಕೆ ನಿರ್ಧರಿಸಿದ್ದಾರೆ. ಪಾಸಿಟಿವ್ ರೆಸ್ಪಾನ್ಸ್ ಬಂದ ಕಡೆ ಹೆಚ್​ಡಿಕೆ ಮೈತ್ರಿ ಅಭ್ಯರ್ಥಿಯಾಗೋ ಸಾಧ್ಯತೆಗಳಿವೆ.

Leave a Comment

DG Ad

RELATED LATEST NEWS

Top Headlines

ಸ್ಟಾರ್ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧ ನಡೆಯುತ್ತಿದ್ಯಾ ಪಿತೂರಿ?

ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದದಲ್ಲಿ ಸಿಲುಕಿದೆ. ನಿರ್ಮಾಪಕರಿಂದ 2.5 ಕೋಟಿ ರೂಪಾಯಿ ಪಡೆದು ಡಿಜಿಟಲ್ ಟೆರೆನ್ ಸಂಸ್ಥೆ ಗ್ರಾಫಿಕ್ಸ್

Live Cricket

Add Your Heading Text Here