ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಸತತ ಮೂರನೇ ಬಾರಿ ಮೋದಿ ಅವರು ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಮೋದಿ ಪ್ರಮಾನ ವಚನ ಸ್ವೀಕರಿಸುವ ಹೊತ್ತಲ್ಲೇ ಮೋದಿ ಸಂಪುಟದಲ್ಲಿ ರಾಜ್ಯದಿಂದ ಯಾರಿಗೆಲ್ಲಾ ಅವಕಾಶ, ಸ್ಥಾನಮಾನ ಸಿಗಲಿದೆ ಅನ್ನೋ ಚರ್ಚೆ ದಟ್ಟವಾಗಿ ಹಬ್ಬಿತ್ತು. ಇದೀಗ ಕೆಲವರ ಹೆಸರು ಹೊರಬಿದ್ದಿದೆ.
ಮೋದಿ ಕ್ಯಾಬಿನೆಟ್ನಲ್ಲಿ ಕರ್ನಾಟಕದ ಐವರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದೆ. ಮಾಜಿ ಸಿಎಂ ಕುಮಾರಸ್ವಾಮಿ, ಹಾಲಿ ಸಚಿವ ಪ್ರಲ್ಹಾದ್ ಜೋಶಿ, ಹಾಲಿ ಸಂಪುಟದಲ್ಲಿದ್ದ ಶೋಭಾ ಕರಂದ್ಲಾಜೆ, ತುಮಕೂರು ಸಂಸದ ವಿ. ಸೋಮಣ್ಣಗೆ ಸಚಿವ ಸ್ಥಾನ ಸಿಕ್ಕಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಂಟಿನ್ಯೂ ಆಗಿದ್ದಾರೆ. ಶೆಟ್ಟರ್, ಬೊಮ್ಮಾಯಿ ಫೈಟ್ನಲ್ಲಿ ವಿ.ಸೋಮಣ್ಣಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆ.
ಪಕ್ಷಕ್ಕಾಗಿ ಸೋಮಣ್ಣ ತಮ್ಮ ಭವಿಷ್ಯವನ್ನೇ ತ್ಯಾಗ ಮಾಡಿದ್ದರು. ಅಮಿತ್ ಶಾ ಹೇಳಿದ್ದಕ್ಕೆ ಗೋವಿಂದರಾಜನಗರ ಬಿಟ್ಟು ವರುಣಾಗೆ ಹೋಗಿದ್ದರು. ಚಾಮರಾಜನಗರ, ವರುಣಾ ಎರಡೂ ಕ್ಷೇತ್ರಗಳಲ್ಲಿ ಸೋಮಣ್ಣ ನಿಂತಿದ್ದರು. ಎರಡು ಕ್ಷೇತ್ರದಲ್ಲಿ ಸೋತರೂ ಕುಗ್ಗದೇ ತುಮಕೂರಿನಲ್ಲಿ ಸ್ಪರ್ಧಿಸಿದ್ದರು. ಪ್ರತಿಷ್ಠೆಯ ತುಮಕೂರು ಕ್ಷೇತ್ರದಲ್ಲಿ ಗೆದ್ದು ಸೋಮಣ್ಣ ಇದೀಗ ಮಂತ್ರಿಯಾಗ್ತಿದ್ದಾರೆ.
ಇದನ್ನೂ ಓದಿ : ಬೆಳಗಾವಿ : ತುಂಬಿ ಹರಿಯುತ್ತಿದ್ದ ನದಿಗೆ 13 ಜನರಿದ್ದ ಟ್ರ್ಯಾಕರ್ ಪಲ್ಟಿ..!