Download Our App

Follow us

Home » ರಾಷ್ಟ್ರೀಯ » ಇಂದು ವರ್ಷದ ಮೊದಲ ಸೂರ್ಯ ಗ್ರಹಣ – ಎಲ್ಲಿ, ಯಾವಾಗ ಗೋಚರ? ಇಲ್ಲಿದೆ ಮಾಹಿತಿ..!

ಇಂದು ವರ್ಷದ ಮೊದಲ ಸೂರ್ಯ ಗ್ರಹಣ – ಎಲ್ಲಿ, ಯಾವಾಗ ಗೋಚರ? ಇಲ್ಲಿದೆ ಮಾಹಿತಿ..!

ವರ್ಷದ ಮೊದಲ ಸೂರ್ಯ ಗ್ರಹಣ ಯುಗಾದಿಯ ಅಮಾವಾಸ್ಯೆ ದಿನವಾದ ಇಂದು ಗೋಚರಿಸಲಿದೆ. ಸುಮಾರು 50 ವರ್ಷಗಳ ಹಿಂದೆ ಇಂತಹ ಸೂರ್ಯಗ್ರಹಣ ಸಂಭವಿಸಿತ್ತು. ಇದೀಗ ಖಗ್ರಾಸ ಸೂರ್ಯಗ್ರಹಣವು 5 ಗಂಟೆ 25 ನಿಮಿಷಗಳ ಕಾಲ ಸಂಭವಿಸಲಿದೆ.

ಸುಮಾರು ಏಳೂವರೆ ನಿಮಿಷಗಳ ಕಾಲ ಭೂಮಿಯನ್ನು ಕತ್ತಲು ಆವರಿಸಲಿದೆ. ಈ ಗ್ರಹಣ ಅತ್ಯಂತ ವಿಶೇಷ. ಯಾಕೆಂದ್ರೆ ಹಿಂದೂ ಸಂಪ್ರದಾಯದಂತೆ ಹೊಸ ವರ್ಷ ಶುರುವಾಗುವ ಮುನ್ನಾದಿನ ಸೂರ್ಯ ಗ್ರಹಣ ಆವರಿಸುತ್ತಿದೆ. ಭಾರತದಲ್ಲಿ ಈ ಗ್ರಹಣ ಗೋಚರ ಆಗುವುದಿಲ್ಲ.

ಉತ್ತರ ಅಮೇರಿಕದಲ್ಲಿ ಮಾತ್ರ ಗೋಚರಿಸುತ್ತದೆ ಎಂದು ನಾಸಾ ತಿಳಿಸಿದೆ. ಭಾರತದ ಕಾಲಮಾನ ಇಂದು ರಾತ್ರಿ 9 ಗಂಟೆ 12 ನಿಮಿಷಕ್ಕೆ ಗ್ರಹಣ ಆರಂಭವಾಗಿ ತಡರಾತ್ರಿ 2.22ಕ್ಕೆ ಕೊನೆ ಗೊಳ್ಳಲಿದೆ. ಕ್ರೋದಿ ನಾಮ ಸಂವತ್ಸರದ ಯುಗಾದಿ ಮುನ್ನಾ ದಿನ ಗ್ರಹಣ ಘಟಿಸುತ್ತಿರೋದು ಕೆಲವರಲ್ಲಿ ಆತಂಕಕ್ಕೂ ಕಾರಣವಾಗಿದೆ.

  • ಎಲ್ಲಿ, ಯಾವಾಗ ಗೋಚರ? ಇಲ್ಲಿದೆ ಮಾಹಿತಿ

– ಇಂದು ವರ್ಷದ ಮೊದಲ ಖಗ್ರಾಸ ಸೂರ್ಯ ಗ್ರಹಣ
– 50 ವರ್ಷಗಳ ನಂತರ ಅತ್ಯಂತ ದೀರ್ಘಾವಧಿಯ ಗ್ರಹಣ
– ಗ್ರಹಣದ ನೆರಳು ದಕ್ಷಿಣ ಪೆಸಿಫಿಕ್ ಸಮುದ್ರದ ಮೇಲೆ ಬೀಳುತ್ತೆ
– ಉತ್ತರ ಅಮೆರಿಕದಲ್ಲಿ ಬೆಳಗ್ಗೆ 11. 07ಕ್ಕೆ ಗೋಚರ
– ಸೂರ್ಯನ ಬೆಳಕು ಭೂಮಿಗೆ ಬರದೆ ಕತ್ತಲು ಆವರಿಸುತ್ತೆ
– ಚಂದ್ರನ ಸಂಪೂರ್ಣ ನೆರಳು ಭೂಮಿಯ ಮೇಲೆ ಬೀಳುತ್ತೆ
-ಇಂತಹ ಪರಿಸ್ಥಿತಿಯಲ್ಲಿ ಸಂಪೂರ್ಣ ಸೂರ್ಯಗ್ರಹಣದಂತೆ ಗೋಚರ
– ಭಾರತದ ಮೇಲೆ ಈ ಗ್ರಹಣ ಪ್ರಭಾವ ಬೀರಲ್ಲ
– ಸೂರ್ಯಗ್ರಹಣದ ಒಟ್ಟು ಅವಧಿ 5 ಗಂಟೆ 10 ನಿಮಿಷ
– ಅಮೆರಿಕ, ಮೆಕ್ಸಿಕೊ, ಕೆನಡಾ, ಐರ್ಲೆಂಡ್, ಇಂಗ್ಲೆಂಡ್​​​ನಲ್ಲಿ ಗೋಚರ
– ಭಾರತೀಯ ಕಾಲಮಾನ ರಾತ್ರಿ 2.15 ರಿಂದ ಗ್ರಹಣ ಆರಂಭ

ದನ್ನೂ ಓದಿ : ಅಕ್ಟೋಬರ್​​ನಲ್ಲಿ ಬಿಡುಗಡೆಯಾಗಲಿದೆ ರಜನಿಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾ..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here