Download Our App

Follow us

Home » ಅಪರಾಧ » ಬೆಂಗಳೂರಿನಲ್ಲಿ ಮನೆಗೆ ಎಂಟ್ರಿ ಕೊಟ್ಟು ಯುವಕನ ಮೇಲೆ ಫೈರಿಂಗ್ : ನಿವೃತ್ತ ಮಿಲಿಟರಿ ಅಧಿಕಾರಿ ಅರೆಸ್ಟ್..!

ಬೆಂಗಳೂರಿನಲ್ಲಿ ಮನೆಗೆ ಎಂಟ್ರಿ ಕೊಟ್ಟು ಯುವಕನ ಮೇಲೆ ಫೈರಿಂಗ್ : ನಿವೃತ್ತ ಮಿಲಿಟರಿ ಅಧಿಕಾರಿ ಅರೆಸ್ಟ್..!

ಬೆಂಗಳೂರು : ಏಕಾ ಏಕಿ ಮನೆಗೆ ನುಗ್ಗಿ ಯುವಕನ ಮೇಲೆ ಫೈರಿಂಗ್ ಮಾಡಿರುವ ಘಟನೆ ನಿನ್ನೆ ಮಧ್ಯರಾತ್ರಿ 12ಗಂಟೆ ಸುಮಾರಿಗೆ ಬೆಂಗಳೂರಿನ ಗಂಗಮ್ಮನ ಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪರಶುರಾಮ್ ಬಳಿ ಲೈಸೆನ್ಸ್ ಇದ್ದ ಗನ್ ಇತ್ತು. ಪರಶುರಾಮ್ ತನ್ನ ಜೊತೆ ಗನ್ ತಂದಿದ್ದರು. ಮಧ್ಯರಾತ್ರಿ ಸೂರಜ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಈ ವೇಳೆ ಸೂರಜ್ ಮನೆ ಒಳಗೆ ಬರದಂತೆ ತಡೆದಿದ್ದಾನೆ. ಈ ವೇಳೆ ಪರಶುರಾಮ್ ಹಾಗೂ ಸೂರಜ್ ನಡುವೆ ವಾಗ್ವಾದ ನಡೆದಿದೆ. ಆಗ ಕೂಡಲೇ ಪರಶುರಾಮ್ ತನ್ನ ಬಳಿ ಇದ್ದ ಗನ್ ತೆಗೆದು ಸೂರಜ್ ಮೇಲೆ ಗುಂಡು ಹಾರಿಸಿದ್ದಾರೆ.

ಪಿಸ್ತೂಲ್​ನಿಂದ ಗುಂಡು ಹಾರುತ್ತಿದ್ದಂತೆ ಸೂರಜ್ ತಪ್ಪಿಸಿಕೊಂಡಿದ್ದು ಗುಂಡು ಗೋಡೆಗೆ ಬಿದ್ದಿದೆ. ಅದೃಷ್ಟವಶಾತ್ ಸೂರಜ್ ತಪ್ಪಿಸಿಕೊಂಡಿದ್ದಾನೆ. ಗುಂಡಿನ ಸದ್ದು ಕೇಳಿ ಅಕ್ಕಪಕ್ಕದ ಮನೆಯವರೆಲ್ಲ ಓಡಿ ಬಂದು ಜಗಳ ಬಿಡಿಸಿದ್ದಾರೆ. ಗಂಗಮ್ಮನ ಗುಡಿ ಪೊಲೀಸರಿಗೆ ಸೂರಜ್​​​ ದೂರು ನೀಡಿದ್ದು, ಪೊಲೀಸರು ಪರಶುರಾಮ್ ಅವರನ್ನು​ ಬಂಧಿಸಿ ಕೇಸ್​ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಚಿತ್ರದುರ್ಗದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ : 7 ಮಂದಿ ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಕವಿತಾ ಗೌಡ – ಮಗನ ಕಾಲಿನ ವಿಡಿಯೋ ಹಂಚಿಕೊಂಡ ಚಂದನ್..!

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್​ಗೆ ಗಂಡು ಮಗು ಜನಿಸಿದೆ. ಇದೀಗ ಮಗುವಿನ ಕಾಲಿನ ಒಂದು ವಿಡಿಯೋ ಶೇರ್

Live Cricket

Add Your Heading Text Here