Download Our App

Follow us

Home » ಅಪರಾಧ » ಇಲ್ಲೀಗಲ್ ಆಗಿ IAS ಅಧಿಕಾರಿ ಕಾಲ್ ಡೀಟೇಲ್ಸ್​​ ತೆಗೆದ ಕೇಸ್​​ : ನಿವೃತ್ತ IPS ಅಧಿಕಾರಿ ಸುರೇಶ್ ವಿರುದ್ದ FIR ದಾಖಲು..!

ಇಲ್ಲೀಗಲ್ ಆಗಿ IAS ಅಧಿಕಾರಿ ಕಾಲ್ ಡೀಟೇಲ್ಸ್​​ ತೆಗೆದ ಕೇಸ್​​ : ನಿವೃತ್ತ IPS ಅಧಿಕಾರಿ ಸುರೇಶ್ ವಿರುದ್ದ FIR ದಾಖಲು..!

ಬೆಂಗಳೂರು : ಇಲ್ಲೀಗಲ್ ಆಗಿ IAS ಅಧಿಕಾರಿ ಕಾಲ್ ಡೀಟೇಲ್ಸ್​​ ತೆಗೆದ ಕೇಸ್​​ ಸಂಬಂಧ ನಿವೃತ್ತ IPS ಅಧಿಕಾರಿ ಸುರೇಶ್ ಅವರ ವಿರುದ್ದ FIR ದಾಖಲಾಗಿದೆ. IAS ಅಧಿಕಾರಿ ಆಕಾಶ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸ್ ಇನ್ಸ್​​​ಪೆಕ್ಟರ್ ಐಯ್ಯಣ್ಣ ರೆಡ್ಡಿ ವಿರುದ್ಧವೂ FIR ದಾಖಲಾಗಿದೆ. IAS ಅಧಿಕಾರಿ ಆಕಾಶ್ ಅವರು ನಿವೃತ್ತ IPS ಸುರೇಶ್ ಅಳಿಯ ಆಗಿದ್ದು, ಸುರೇಶ್​ ಅವರ ಮಗಳನ್ನ IAS ಅಧಿಕಾರಿ ಆಕಾಶ್ ಅವರು ಮದ್ವೆಯಾಗಿದ್ದಾನೆ.

ಐಯ್ಯಣ್ಣ ರೆಡ್ಡಿ ಅವರು ಆಕಾಶ್​​ ಅವರ ಮೊಬೈಲ್ ಕಾಲ್ ಡೀಟೇಲ್ಸ್​ ತೆಗೆದಿದ್ದರು. 2 ವರ್ಷದ ಹಿಂದೆ IAS ಅಧಿಕಾರಿ ಆಕಾಶ್ ವಿರುದ್ದ ವರದಕ್ಷಿಣೆ ಕೇಸ್ ದಾಖಲಾಗಿತ್ತು, ಕೌಟುಂಬಿಕ ಜಗಳದ ಹಿನ್ನೆಲೆ ವರದಕ್ಷಿಣೆ ಕಿರುಕುಳ ಕೇಸ್​​ ದಾಖಲಾಗಿತ್ತು. ತಮ್ಮ ಅಳಿಯನ ಮಾಹಿತಿ ಪಡೆಯಲು ಇನ್ಸ್​​ಪೆಕ್ಟರ್ ಐಯ್ಯಣ್ಣಗೆ ಹೇಳಿ ಸುರೇಶ್ ಕಾನೂನು ಬಾಹಿರವಾಗಿ ಕಾಲ್​​ ಡೀಟೇಲ್ಸ್​​​ ತೆಗೆಸಿದ್ದರು. ​​ಬಳಿಕ ಆಕಾಶ್​​​ ಅವರು ಸುರೇಶ್ ಕುಟುಂಬ​​​​​​, ಐಯಣ್ಣ ರೆಡ್ಡಿ ವಿರುದ್ಧ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಸೆನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಐಯ್ಯಣ್ಣ ರೆಡ್ಡಿ ಪೀಣ್ಯ ಇನ್ಸ್ ಪೆಕ್ಟರ್ ಆಗಿದ್ದ ವೇಳೆ ಕಾಲ್ ಡೀಟೇಲ್ಸ್​ ತೆಗೆಸಿದ್ದರು. ಇದೀಗ FIR ಹಿನ್ನಲೆಯಲ್ಲಿ ಐಯಣ್ಣ ರೆಡ್ಡಿ, ಸುರೇಶ್​ ಅವರಿಗೆ ಸಂಕಷ್ಟ ಶುರುವಾಗಿದೆ. ಇಲ್ಲೀಗಲ್​ ಆಗಿ ಸಿಡಿಆರ್ ತೆಗೆದ ಹಿನ್ನೆಲೆ ಐಯಣ್ಣ ರೆಡ್ಡಿ ಅವರನ್ನು ಸಸ್ಪೆಂಡ್ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ : ಬೆಳಗಾವಿ : ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಕಲ್ಲು ತೂರಾಡಿದ ಪಾಗಲ್​ ಪ್ರೇಮಿ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here