Download Our App

Follow us

Home » ಅಪರಾಧ » ಬೆಳಗಾವಿ : ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಕಲ್ಲು ತೂರಾಡಿದ ಪಾಗಲ್​ ಪ್ರೇಮಿ..!

ಬೆಳಗಾವಿ : ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಕಲ್ಲು ತೂರಾಡಿದ ಪಾಗಲ್​ ಪ್ರೇಮಿ..!

ಬೆಳಗಾವಿ : ಬೆಳಗಾವಿಯಲ್ಲಿ ಪಾಗಲ್​ ಪ್ರೇಮಿ ಕಾಟಕ್ಕೆ ಯುವತಿಯೊಬ್ದಳು ಬೇಸತ್ತಿದ್ದಾಳೆ. ಪ್ರೀತ್ಸೆ ಪ್ರೀತ್ಸೇ ಅಂತಾ ಯುವತಿಯ ಹಿಂದೆ ಬಿದ್ದಿದ್ದ ಯುವಕನ ಹುಚ್ಚಾಟಕ್ಕೆ ಯುವತಿ ಕಂಗಾಲ್​ ಆಗಿದ್ದಾಳೆ. ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಆಕೆಯ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಹುಬ್ಬಳಿ ನೇಹಾಳಂತೆ ಕೊಲೆ ಮಾಡುವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಪ್ರೀತಿಸು, ಮದ್ವೆಯಾಗು ಅಂತಾ 3 ವರ್ಷದಿಂದ ಕಿಣಿ ಗ್ರಾಮದ ತಿಪ್ಪಣ್ಣ ಡೋಕರೆ ಎಂಬಾತ ಕಾಡಿಸುತ್ತಿದ್ದ.

ಕಾಲೇಜ್​​ಗೆ ಹೋಗುವಾಗ ಯುವಕ ಮದ್ವೆಯಾಗು ಎಂದ ಪೀಡಿಸುತ್ತಿದ್ದ, ಸೈಕೋ ಕಾಟಕ್ಕೆ ಬೇಸತ್ತು ಕಾಲೇಜ್​​ಗೆ ಹೋಗಲು ಯುವತಿ ಹಿಂದೇಟು ಹಾಕಿದ್ದಳು. ಯುವತಿ ತಾಯಿಗೂ ಕೂಡಾ ಧಮ್ಕಿ ಹಾಕಿದ್ದ. ಕೆಲ ತಿಂಗಳ ಹಿಂದೆ ಯುವಕ ಯುವತಿಯ ಮನೆ ಹಿಂಬಾಗಿಲಿಗೆ ಬೆಂಕಿ ಹಚ್ಚಿದ್ದ. ಇದಾದ ಬಳಿಕ 3 ದಿನಗಳ ಹಿಂದೆಯೂ ಮನೆಗೆ ಬಂದು ಗಲಾಟೆ ಮಾಡಿದ್ದ, ಮನೆಯಲ್ಲಿ ಯಾರು ಇಲ್ಲದಿರುವಾಗ ಕಿಟಕಿ ಗ್ಲಾಸ್ ಒಡೆದು ಪುಂಡಾಟ ನಡೆಸಿದ್ದಾನೆ.

ಮನೆಯ ಪಕ್ಕದಲ್ಲಿಯೇ ಜಮೀನಿಗೆ ಬರುವ ನೆಪವೊಡ್ಡಿ ಕಿರುಕುಳ ನೀಡಿದ್ದಾನೆ. ತಿಪ್ಪಣ್ಣ ಡೋಕರೆ ಯಾವುದೇ ಕೆಲಸ ಮಾಡದೇ ಊರಲ್ಲಿ ಸುತ್ತಾಡುತ್ತಿದ್ದ. ಈ ಕಾರಣಕ್ಕೆ ಒಂದೇ ಸಮುದಾಯ ಆದರೂ ಪುತ್ರಿಯನ್ನು ಕೊಡಲು ನಿರಾಕರಿಸಿದ್ದರು, ತಿಪ್ಪಣ್ಣನ ಕಿರಿಕಿರಿಗೆ ಬೇಸತ್ತು ಕುಟುಂಬ ಠಾಣೆ ಮೆಟ್ಟಿಲೇರಿತ್ತು. 3 ವರ್ಷಗಳ ಹಿಂದೆಯೇ ತಿಪ್ಪಣ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು, ಆಗ ತಿಪ್ಪಣ್ಣಗೆ ಪೊಲೀಸರು ವಾರ್ನ್​ ಮಾಡಿ ಕಳಿಸಿದ್ದರು.

ಇದನ್ನೂ ಓದಿ : ಉಡುಪಿ : ನಡುರಸ್ತೆಯಲ್ಲೇ ಗ್ಯಾಂಗ್​ ವಾರ್ – ವಿಡಿಯೋ ವೈರಲ್​..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here