Download Our App

Follow us

Home » ಅಪರಾಧ » ಬೆಂಗಳೂರು : ಸಿನಿಮಾದಲ್ಲಿ ಚಾನ್ಸ್​ ಕೊಡಿಸೋದಾಗಿ ನಂಬಿಸಿ ಯುವತಿಗೆ ಲೈಂಗಿಕ ದೌರ್ಜನ್ಯ – ನಟ ಸಂತೋಷ್​ ವಿರುದ್ಧ FIR..!

ಬೆಂಗಳೂರು : ಸಿನಿಮಾದಲ್ಲಿ ಚಾನ್ಸ್​ ಕೊಡಿಸೋದಾಗಿ ನಂಬಿಸಿ ಯುವತಿಗೆ ಲೈಂಗಿಕ ದೌರ್ಜನ್ಯ – ನಟ ಸಂತೋಷ್​ ವಿರುದ್ಧ FIR..!

ಬೆಂಗಳೂರು : ಬೆಂಗಳೂರಿನ ಸಲೂನ್ ಶಾಪ್ ವೊಂದರಲ್ಲಿ‌ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ನಟ ಸಂತೋಷ್ ವಿರುದ್ದ ಕೇಳಿ ಬಂದಿದೆ.

2019ರಲ್ಲಿ ಯುವತಿಗೆ ಪರಿಚಯ ಆಗಿದ್ದ ನಟ ಸಂತೋಷ್, ಸಿನಿಮಾದಲ್ಲಿ ಅವಕಾಶ ಕೊಡಿಸ್ತೀನಿ ಅಂತಾ ಪರಿಚಯ ಮಾಡಿಕೊಂಡಿದ್ದ.  ಇದೀಗ ನಟ ಸಂತೋಷ್​ ಲೈಂಗಿಕವಾಗಿ ನನ್ನನ್ನು ಬಳಸಿಕೊಂಡಿದ್ದಾನೆ ಎಂದು ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ. ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿ‌ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದ ನಟ ಸಂತೋಷ್ ಆ ಹುಡುಗಿಗೆ ಪ್ರೀತಿಯ ನಾಟಕವಾಡಿ, ಚಿತ್ರದಲ್ಲಿ ನಾಯಕಿಯನ್ನಾಗಿ ಮಾಡುತ್ತೇನೆ ಎಂದು ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ಕೈಕೊಟ್ಟು ಪರಾರಿ ಆಗಿದ್ದಾನೆ ಎಂದು ಹುಡುಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ನಟ ಸಂತೋಷ್​ ಏಕಾಂತದ ವಿಡಿಯೋ ಮಾಡಿಕೊಂಡು ಯುವತಿಗೆ ಬೆದರಿಸಿದ್ದು, ಕರೆದಾಗ ಬರಬೇಕು, ಇಲ್ಲದಿದ್ರೆ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಆಗಾಗ ಮನೆ ಬಳಿ ಬಂದು ತನ್ನ ಜೊತೆ ಬರುವಂತೆ ಚಿತ್ರಹಿಂಸೆ ಕೋಡುತ್ತಾನೆ ಎಂದು ಜ್ಞಾನಭಾರತಿ‌ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಳು. ಪೊಲೀಸರು ಕೃತ್ಯ‌ ನಡೆದ‌‌ ಜಾಗದ ಆಧಾರದ ಮೇಲೆ ಅತ್ತಿಬೆಲೆಗೆ ಕೇಸ್ ವರ್ಗಾವಣೆ ಮಾಡಿದ್ದರು.

ಪೊಲೀಸರಿಗೆ ದೂರು ಕೊಟ್ಟ ನಂತರವೂ ನಟ ಸಂತೋಷ್ ಹಲ್ಲೆ ಮಾಡಿದ್ದು, ಈ ಹಿನ್ನೆಲೆ ಜ್ಞಾನಭಾರತಿ ಪೊಲೀಸ್​ ಠಾಣೆಗೆ ಮತ್ತೆ ಸಂತ್ರಸ್ತೆ ದೂರು ನೀಡಿದ್ದಾಳೆ. ಬೇರೊಬ್ಬಳ ಜತೆ ಸಂತೋಷ್ ಮದ್ವೆ ಆಗಿ ನನಗೆ ಮೋಸ ಮಾಡಿದ್ದಾನೆ. ಇದೇ ರೀತಿ ಹಲವು ಯುವತಿಯರಿಗೆ ವಂಚನೆ ಆಗಿದೆ ಎಂದು ದೂರು ನೀಡಿದ್ದಾಳೆ.

ಇದನ್ನೂ ಓದಿ : ಮಂಗಳೂರಲ್ಲಿ ಶಿಕ್ಷಕಿ ವಿರುದ್ಧದ ಪ್ರತಿಭಟನೆ ಕೇಸ್ : ಶಾಸಕರ ವಿರುದ್ಧದ FIR​ ರದ್ದು ಮಾಡುವಂತೆ ಆಗ್ರಹಿಸಿ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆ..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here