Download Our App

Follow us

Home » ಅಪರಾಧ » ನೆಲಮಂಗಲದಲ್ಲಿ ನಕಲಿ ಟೀ ಪೌಡರ್​ ಪತ್ತೆ..

ನೆಲಮಂಗಲದಲ್ಲಿ ನಕಲಿ ಟೀ ಪೌಡರ್​ ಪತ್ತೆ..

ನೆಲಮಂಗಲ : ಬೆಂಗಳೂರು ಹೊರ ವಲಯ ನೆಲಮಂಗಲದಲ್ಲಿ ನಕಲಿ ಟೀ ಪುಡಿ ಮತ್ತು ಸೋಪಿನ ಪೌಡರ್​​​​ ಫ್ಯಾಕ್ಟರಿ ಪತ್ತೆಯಾಗಿವೆ. ಬ್ರಾಂಡೆಡ್ ಆಹಾರ ಪದಾರ್ಥಗಳ ನಕಲಿ ತಯಾರಿಕೆ ಜಾಲದ ಮೇಲೆ ಮಾದನಾಯಕನಹಳ್ಳಿ ಪೊಲೀಸರು ರೇಡ್ ಮಾಡಿದ್ದಾರೆ.

3 ROSES ಟೀ ಪುಡಿ, ಸರ್ಫ್ ಎಕ್ಸೆಲ್ ಪ್ಯಾಕ್​ ಮಾಡ್ತಿದ್ದ ಫ್ಯಾಕ್ಟರಿಗಳ ಮೇಲೆ ರೇಡ್​ ಮಾಡಿ ಲಕ್ಷಾಂತರ ಮೌಲ್ಯದ ಮಾಲು ಮತ್ತು ಯಂತ್ರ ವಶಕ್ಕೆ ಪಡೆಯಲಾಗಿದೆ. ಹಿಂದೂಸ್ಥಾನ್ ಯೂನಿ‌ಲಿವರ್ ಸಂಸ್ಥೆಗೆ ಸಿಕ್ಕಿದ್ದ ಮಾಹಿತಿ ಮೇಲೆ ಗಂಗೊಂಡನಹಳ್ಳಿ, ಲಕ್ಷ್ಮೀಪುರ, ಲಕ್ಕೇನಹಳ್ಳಿ ಬಳಿ ನಕಲಿ ಫ್ಯಾಕ್ಟರಿ ಶೋಧ ಮಾಡಲಾಯ್ತು. 

ಬೂಮರಾಮ್, ಮಾಧು ಸಿಂಗ್, ವಿಕ್ರಮ್ ಸಿಂಗ್, ಶಿವಕುಮಾರ್​​​ ಬಂಧಿಸಿ ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ, ನಕಲಿ ಟೀ ಪೌಡರ್​​​, ಸೋಪಿನ ಪೌಡರ್​ನ ಪ್ಯಾಕೇಟ್​ಗಳನ್ನು ಬೆಂಗಳೂರು, ಕೋಲಾರ, ರಾಮನಗರ ಜಿಲ್ಲೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು.  ಪ್ಯಾಕಿಂಗ್ ಮಷಿನ್, ಮಿಕ್ಸಿಂಗ್ ಯಂತ್ರ ಸೇರಿ ಲಕ್ಷಾಂತರ ಮೌಲ್ಯದ ಟೀ ಪುಡಿ, ಸೋಪಿನ ಪುಡಿ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ : ಸ್ಯಾಂಡಲ್​ವುಡ್​ ಸೂಪರ್​ಸ್ಟಾರ್​ನಿಂದ ಬಿಡುಗಡೆಯಾಗಲಿದೆ ಕಾಂಗರೂ ಚಿತ್ರದ ಮೋಷನ್ ಪೋಸ್ಟರ್.

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here