Download Our App

Follow us

Home » ಅಪರಾಧ » ಬೀದರ್ : ನಕಲಿ ಪೊಲೀಸರ ಸೋಗಿನಲ್ಲಿ ಹಣ ದೋಚಿದ ಚಾಲಾಕಿ ಕಳ್ಳರು – 21ಲಕ್ಷ ರೂ.ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ..!

ಬೀದರ್ : ನಕಲಿ ಪೊಲೀಸರ ಸೋಗಿನಲ್ಲಿ ಹಣ ದೋಚಿದ ಚಾಲಾಕಿ ಕಳ್ಳರು – 21ಲಕ್ಷ ರೂ.ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ..!

ಬೀದರ್​ : ನಕಲಿ ಪೊಲೀಸರ ಸೋಗಿನಲ್ಲಿ ಬಂದು ಕಳ್ಳತನ ಮಾಡಿದ್ದ ಮೂವರನ್ನು ಬೀದರ್​ನ ಬಸವಕಲ್ಯಾಣ ನಗರ ಠಾಣೆ ಪೋಲಿಸರು ಬಂಧಿಸಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಚಿನ್ನದ ವ್ಯಾಪಾರಿಯೋರ್ವ ತನ್ನ ಸಿಬ್ಬಂದಿ ಬಳಿ 21 ಲಕ್ಷ ರೂಪಾಯಿ ‌ಮೌಲ್ಯದ 80 ಸಾವಿರ ವಿದೇಶಿ ಕರೆನ್ಸಿ ಕೊಟ್ಟು ಚಿನ್ನ ತರಲು ಕಳುಹಿಸಿದ್ದ. ಸಿಬ್ಬಂದಿ ವಿದೇಶಿ ಕರೆನ್ಸಿಯನ್ನು ತೆಗೆದುಕೊಂಡು ಬಸ್​ನಲ್ಲಿ ಹೋಗುತ್ತಿದ್ದನು.

ಈ ಮಾಹಿತಿಯನ್ನು ತಿಳಿದಿದ್ದ ಚಾಲಾಕಿ ಕದೀಮರು, ಪೊಲೀಸರ ಸೋಗಿನಲ್ಲಿ ಹೋಗಿ ಬಸ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಬಳಿಕ ಕಳ್ಳರು ಅಗತ್ಯಕಿಂತ ಹೆಚ್ಚಿನ‌ ಹಣ ತೆಗೆದುಕೊಂಡು ಹೋಗುತ್ತಿದ್ದೀಯಾ ಎಂದು ಸಿಬ್ಬಂದಿ ಬಳಿ ಇದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

ಇನ್ನು ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಮೂವರು ಆರೋಪಿಗಳನ್ನು ಹೈದರಾಬಾದ್​ನಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 21ಲಕ್ಷ ರೂ.ಮೌಲ್ಯದ ಅಮೇರಿಕನ್ ಡಾಲರ್ ಸೇರಿದಂತೆ ಇನ್ನಿತರ ವಿದೇಶಿ ಕರೆನ್ಸಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ರಾಜ್ಯದ ಸಮಸ್ತ ಪೊಲೀಸ್ ಸಿಬ್ಬಂದಿಗಳಿಗೆ “ಪೊಲೀಸ್ ಧ್ವಜ ದಿನದ” ಶುಭಾಶಯ ತಿಳಿಸಿದ ಲಾಫಿಂಗ್ ಬುದ್ಧ ಚಿತ್ರತಂಡ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಚಾಲಕ ದುರ್ಮರಣ..!

ಬೆಂಗಳೂರು : ನಗರದಲ್ಲಿ ಸೆ.6ರ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್(32) ಅಪಘಾತದಲ್ಲಿ ಮೃತನಾದ

Live Cricket

Add Your Heading Text Here