Download Our App

Follow us

Home » ರಾಷ್ಟ್ರೀಯ » 75 ವರ್ಷದ ದಾಖಲೆ ಮಳೆಗೆ ಮುಳುಗಿದ ದುಬಾರಿ ದುಬೈ – ನಾಲ್ಕು ದಿನ ಕಳೆದ್ರೂ ಸಹಜ ಸ್ಥಿತಿಗೆ ಬಾರದ ಮಾಯಾಲೋಕ..!

75 ವರ್ಷದ ದಾಖಲೆ ಮಳೆಗೆ ಮುಳುಗಿದ ದುಬಾರಿ ದುಬೈ – ನಾಲ್ಕು ದಿನ ಕಳೆದ್ರೂ ಸಹಜ ಸ್ಥಿತಿಗೆ ಬಾರದ ಮಾಯಾಲೋಕ..!

ಜಗತ್ತಿನ ಪ್ರವಾಸಿಗರ ಹಾಟ್​ಸ್ಪಾಟ್​ ಆಗಿರೋ ದುಬೈ ಕಳೆದೆರಡು ದಿನಗಳಿಂದ ಜಲಾವೃತವಾಗಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ನಲುಗಿ ಹೋಗಿದೆ. ಬಿಟ್ಟು ಬಿಡದೇ ಕಾಡುತ್ತಿರೋ ಮಹಾಮಳೆಗೆ ಅರಬ್​​ ರಾಷ್ಟ್ರಗಳು ಕಕ್ಕಾಬಿಕ್ಕಿಯಾಗಿವೆ. ಏಪ್ರಿಲ್‌ 15ರ ರಾತ್ರಿ ದುಬೈ ಮೇಲೆ ಮೋಡದ ದೊಡ್ಡ ದೊಡ್ಡ ಮೂಟೆಗಳು ಬಾಯ್ತೆರೆದು ಘೋರ ಮಳೆಯನ್ನೇ ಸುರಿಸಿದೆ. ಎರಡು ವರ್ಷದಲ್ಲಿ ಬೀಳುವಷ್ಟು ಮಳೆ ಒಂದೇ ದಿನದಲ್ಲಿ ಸುರಿದಿದೆ.

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣಗಳು, ಮಾಲ್‌ಗಳು, ರಸ್ತೆಗಳು, ಅಂಗಡಿ, ರೆಸ್ಟೊರೆಂಟ್‌ಗಳಿಗೆ ಪ್ರವಾಹದ ನೀರು ನುಗ್ಗಿದ್ದು, ಬೀದಿಗಳಲ್ಲಿ ಕಾರುಗಳು ತೇಲುವ ದೃಶ್ಯದ ವಿಡಿಯೊಗಳು ಕ್ಷಣಮಾತ್ರದಲ್ಲಿ ಜಗತ್ತಿನ ತುದಿಗೆ ತಲುಪಿದ್ದವು. 75 ವರ್ಷದಲ್ಲಿ ಹಿಂದೆ ಎಂದೂ ಕಂಡು ಕೇಳರಿಯದ ಮಳೆಯಿಂದಾಗಿ ದುಬೈ ಜನರ ಬದುಕು ಈಗ ಅಯೋಮಯವಾಗಿದೆ. ಹಾಗಾದ್ರೆ, ದಾಖಲೆಯ ಮಳೆಗೆ ಅಸಲಿ ಕಾರಣವೇನು.? ದುಬಾರಿ ರಾಷ್ಟ್ರಗಳೆಲ್ಲಾ ಮುಳುಗಿದ್ವಾ? ಇನ್ಮುಂದೆ ದುಬೈಗೆ ಹೋಗೊದು ಸೇಫ್ ಅಲ್ವಾ? ಅಲ್ಲಿನ ಜನರ ಪರಿಸ್ಥಿತಿ ಹೇಗಿದೆ? ಈ ಇವೆಲ್ಲವುದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

24 ಗಂಟೆಯಲ್ಲಿ 2 ವರ್ಷದ ಮಳೆ.. 75 ವರ್ಷದ ದಾಖಲೆ : ಮರಳುಗಾಡು ಹಾಗೂ ಹೆಚ್ಚಾಗಿ ಮಳೆಯನ್ನೇ ಕಾಣದ ಗಲ್ಫ್​​​ನ ಪ್ರಮುಖ ರಾಷ್ಟ್ರವಾದ UAEಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. UAE ಯಲ್ಲಿ ಸೋಮವಾರ ಹಾಗೂ ಮಂಗಳ ವಾರ ಸುರಿದ ಮಳೆ 75 ವರ್ಷದಲ್ಲಿ ಹಿಂದೆಂದೂ ಕಂಡಿರ್ಲಿಲ್ಲ. 24 ಗಂಟೆಯಲ್ಲಿ 94.7 ಮಿಲಿ ಮೀಟರ್​ನಷ್ಟು ಮಳೆಯಾಗಿದೆ. ಅಂದ್ರೆ ಮರಳುಗಾಡಲ್ಲಿ 2 ವರ್ಷ ಸುರಿಯುತ್ತಿದ್ದ ಮಳೆ ಕೇವಲ 24 ಗಂಟೆ ಯಲ್ಲೇ ಸುರಿದಿದೆ. ಅರಬ್ಬರು ಇಂತಹ ಭೀಕರ ಮಳೆಯನ್ನ ಕೊನೆದಾಗಿ ಕಂಡಿದ್ದು 1949ರಲ್ಲಿ. ಅಲ್ಲಿಂದಾಚೆಗೆ ಮಳೆ ಸುರಿ ದಿದೆ. 1975, 1977, 1981ರಲ್ಲಿ ಭಯಾನಕ ಮಳೆಯಾಗಿತ್ತು. ಆದರೆ 1949ರ ನಂತರ ಮಂಗಳವಾರ ಸುರಿದ ಮಳೆ ದಾಖಲೆ ಬರೆದಿದೆ.

ಸದ್ಯ, ಜನರ ಸಂಚಾರ ಅಸ್ತವ್ಯಸ್ಥ ಆಗ್ತಿರೋದ್ರಿಂದ ಅಲ್ಲಿನ ಸರ್ಕಾರ ಒಂದು ವಾರ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ. ಶಾಲೆಗಳು ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಗಳಿಂದಲೇ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಸೇನಾ ತುಕಡಿಗಳನ್ನು ತುರ್ತು ಪರಿಹಾರ ಕಾರ್ಯಾಚರಣೆ ಮಾಡ್ತಿದ್ದಾರೆ. ದೈತ್ಯ ಪಂಪ್​​​ಗಳನ್ನ ತರಿಸಿ, ತಗ್ಗುಪ್ರದೇಶಗಳಲ್ಲಿ, ಹೈವೇ ಹಾಗೂ ರಸ್ತೆಗಳಲ್ಲಿ ನಿಂತಿರೋ ನೀರನ್ನು ಬೇರೆಡೆಗೆ ಪಂಪಿಂಗ್ ಮಾಡ್ತಿದ್ದಾರೆ.

ಮೋಡಗಳ ಬಿತ್ತನೆ ಅತಿಯಾಗಿದ್ದರಿಂದ ದುಬೈಗೆ ಈ ಸಂಕಷ್ಟ ಎದುರಾಯಿತಾ? : ಈ ಮಹಾಮಳೆಗೆ ಮೋಡ ಬಿತ್ತನೆ ಕಾರ್ಯವೇ ಕಾರಣ ಅಂತ ಸೋಷಿಯಲ್​ ಮೀಡಿಯಾದಲ್ಲಿ ಸುದ್ದಿಗಳು ವೈರಲ್​ ಆಗಿದೆ. ಅಲ್ಲಿನ ಕೆಲ ಸುದ್ದಿ ಸಂಸ್ಥೆಗಳೂ ಮೋಡ ಬಿತ್ತನೆಯೇ ಕಾರಣ ಅಂತ ಅಂದಾಜಿಸಿದೆ. ಈ ವಿಚಾರವಾಗಿ ಮೋಡ ಬಿತ್ತನೆ ಕೆಲಸ ಮಾಡ್ತಿರೋರು ಹಾಗೂ ವಿಜ್ಞಾನಿಗಳು ಇದು ಮೋಡ ಬಿತ್ತನೆಯಿಂದ ಆದ ಮಳೆಯಲ್ಲ ಅಂತಿದ್ದಾರೆ. UAEನ ಹವಾಮಾನ ಇಲಾಖೆಯೇ ಹೇಳುವಂತೆ ಮೋಡ ಬಿತ್ತನೆ ಕಾರ್ಯದಿಂದ ಮಳೆ ಬರುತ್ತೆ ನಿಜ. ಆದ್ರೆ ಇಷ್ಟೇ ಪ್ರಮಾಣ ದಲ್ಲಿ ಮಳೆ ಸುರಿಯುತ್ತೆ ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ. ಮೋಡ ಬಿತ್ತನೆಯಿಂದ ಮಳೆ ಪ್ರಮಾಣದಲ್ಲಿ ಶೇಕಡ 10 ರಿಂದ ಶೇ ಕಡ 30ರಷ್ಟಕ್ಕೆ ಏರಿಕೆಯಾಗುತ್ತೆ. ಆದರೆ ಮೋಡ ಬಿತ್ತನೆಯ ಅಂದಾಜಿಗಿಂತಲೂ ಮಂಗಳವಾರ ಜಾಸ್ತಿ ಮಳೆಯಾಗಿದೆ ಎಂದು ಹೇಳಲಾಗುತ್ತಿದೆ.

ವಿಜ್ಞಾನಿಗಳ ಪ್ರಕಾರ ಅರಬ್ ರಾಷ್ಟ್ರಗಳಲ್ಲಿನ ಮಹಾಮಳೆಗೆ 3 ಕಾರಣಗಳನ್ನ ಹೇಳಿದ್ದಾರೆ. ಏಷ್ಯಾದತ್ತ ಬೀಸುವ ಹವಾ ಮಾರುತಗಳು, ಶೀತಮಾರುತಗಳು ಮತ್ತು ಜಾಗತಿಕ ತಾಪಮಾನ ಏರಿಕೆಯ ಕಾರಣಗಳಿಂದಾಗಿ ಮಹಾಮಳೆಯಾಗುತ್ತೆ ಅಂತ ತಿಳಿಸಿದ್ದಾರೆ. ಹವಾ ಮಾರುತಗಳು ಆಫ್ರಿಕಾದ ಈಶಾನ್ಯ ಭಾಗದಿಂದ ಅರೇಬಿಯಾ ಉಪಕಂಡ ಮತ್ತು ಪಶ್ಚಿಮ ಏಷ್ಯಾದತ್ತ ಬೀಸುತ್ತವೆ. ಅಕ್ಟೋಬರ್‌ನಿಂದ ಜೂನ್‌ ವರೆಗು ಹೆಚ್ಚು ಸಕ್ರಿಯವಾಗಿರುತ್ತವೆ. ಈ ಹವಾ ಮಾರುಗಳಿಂದಾಗಿ ಮಧ್ಯಪ್ರಾಚ್ಯದ ದೇಶಗಳಿಗೆ ವರ್ಷದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗ್ತಿದೆ. ಭೂ ಮೇಲ್ಮೈನಲ್ಲಿ ಬದಲಾಗೋ ಹವಮಾನ ಕಾರಣದಿಂದಾಗಿ ಯಾವಾಗಾದ್ರು ಒಮ್ಮೆ ಜೋರಾಗಿ ಮಳೆ ಸುರಿಸುತ್ತೆ.

ವಾತಾವರಣದಲ್ಲಿ ಹವಾ ಮಾರುಗಳಿಂದ ಮಾತ್ರ ಮಳೆಯಾಗೋದಿಲ್ಲ. ಮಳೆಯಾದ್ರು ಅತಿಯಾದ ಮಳೆಯಾಗಲ್ಲ. ಇದಕ್ಕೆ ಶೀತ ಮಾರುತಗಳು ಕೂಡ ಸಾಥ್ ಕೊಡ್ಬೇಕು. ಉತ್ತರ ಧ್ರುವದಿಂದ ದಕ್ಷಿಣ ಭಾಗಕ್ಕೆ ಬೀಸುವ ಶೀತ ಮಾರುತಗಳೂ ಮಧ್ಯಪ್ರಾಚ್ಯವನ್ನು ತಲುಪಬೇಕು. ಹೀಗೆ ಪೂರ್ವದಿಂದ ಬರುವ ಹವಾ ಮಾರುತ, ಅರಬ್ಬಿ ಸಮುದ್ರದಿಂದ ವಾಯವ್ಯ ದಿಕ್ಕಿಗೆ ಚಲಿಸುವ ವಾಯುಭಾರ ಕುಸಿತದ ಸ್ಥಿತಿ ಮತ್ತು ಉತ್ತರದಿಂದ ದಕ್ಷಿಣದತ್ತ ಬೀಸುವ ಶೀತ ಮಾರುತ, ಈ ಮೂರೂ ಮಧ್ಯಪ್ರಾಚ್ಯದಲ್ಲಿ ಒಗ್ಗೂಡಬೇಕು. ಅವು ಪರಸ್ಪರ ಸಂಘರ್ಷಕ್ಕೆ ಈಡಾದಾಗ ಅಲ್ಲಿನ ನೀರಾವಿಯ ಸಾಂದ್ರತೆ ಹೆಚ್ಚಾಗುತ್ತೆ. ಇದ್ರಿಂದ ಅಪಾರವಾದ ಮಳೆಯಾಗುತ್ತೆ. ಅದ್ಯಾವ ಮಟ್ಟಿಗೆ ಅಂದ್ರೆ ಒಂದು ವರ್ಷದಲ್ಲಿ ಸುರಿಯೋ ಮಳೆ ಕೆಲವೇ ಗಂಟೆಗಳಲ್ಲೇ ಸುರಿದಿದೆ.

ಇದನ್ನೂ ಓದಿ : ಡಾಲಿ ಅಭಿನಯದ “ಉತ್ತರಕಾಂಡ”ಕ್ಕೆ ಎಂಟ್ರಿ ಕೊಟ್ಟ ಯೋಗರಾಜ್ ಭಟ್ – ಯಾವ ಪಾತ್ರ?

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here