ಬೆಂಗಳೂರು : ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಅತ್ಯಂತ ಹುಮ್ಮಸ್ಸಿನಿಂದ ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದಾರೆ. ತಪ್ಪದೇ ಮತದಾನ ಮಾಡಿ ಎಂದು ಈವರೆಗೂ ಪ್ರಚಾರ ಮಾಡುತ್ತಿದ್ದ ಸ್ಯಾಂಡಲ್ವುಡ್ ನಟ ನಟಿಯರು ತಮ್ಮ ಜವಾಬ್ದಾರಿಯನ್ನು ಬೆಳ್ಳಂಬೆಳಗ್ಗೆ ನಿಭಾಯಿಸಿ ಮಾದರಿಯಾಗಿದ್ದಾರೆ. ಬೆಂಗಳೂರಿನಲ್ಲೂ ಇಂದು ಮತದಾನ ನಡೆಯುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ಮತದಾನ ಮಾಡಿದ್ದಾರೆ.
ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಮತ ಹಾಕೋದು ನನ್ನ ಜವಾಬ್ದಾರಿ. ನನ್ನ ಹಕ್ಕನ್ನು ಚಲಾಯಿಸಿದ್ದೀನಿ. ನಿಮಗೆ ಯಾರು ಒಳ್ಳೆಯವರು ಅನಿಸುತ್ತದೆಯೋ ಅವರಿಗೆ ವೋಟ್ ಮಾಡಿ. ಎಲ್ಲರೂ ವೋಟ್ ಹಾಕಿ. ಯಾವುದಾದರೂ ಕೆಲಸ ಆಗಿಲ್ಲ ಎಂದು ಕೇಳಬೇಕು ಎಂದರೆ ವೋಟ್ ಹಾಕಬೇಕು, ವೋಟ್ ಹಾಕಿ ಕೇಳಿದರೆ ಅದರ ಬೆಲೆ ಜಾಸ್ತಿ ಇರುತ್ತದೆ’ ಎಂದಿದ್ದಾರೆ
ಇದನ್ನೂ ಓದಿ : ಬೆಂಗಳೂರು : ಮಹಿಳೆಯರ ಮತದಾನಕ್ಕೆ ಉತ್ತೇಜನ ನೀಡಲು ಸಿದ್ದಗೊಂಡಿವೆ ಪಿಂಕ್ ಬೂತ್ಗಳು..!
Post Views: 56