ಬೆಂಗಳೂರು : ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮೋದಿಯವರ ಅದ್ಧೂರಿ ಪ್ರಮಾಣವಚನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ 9,000 ಅತಿಥಿಗಳಿಗೆ ಆಹ್ವಾನಿಸಿದ್ದು, ಈ ಐಸಿಹಾಸಿಕ ಕ್ಷಣಕ್ಕೆ ಗಣ್ಯಾತೀಗಣ್ಯರು ಸಾಕ್ಷಿಯಾಗ್ತಿದ್ದಾರೆ. ಆದರೆ ಈ ಸಮಾರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪಾಲ್ಗೊಳುತ್ತಿಲ್ಲ ಎಂದು ತಿಳಿದು ಬಂದಿದೆ.
ಸಮಾರಂಭಕ್ಕೆ ತೆರಳಲು ದೇವೇಗೌಡರು ಸಜ್ಜಾಗಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಬೆಂಗಳೂರಲ್ಲೇ ಉಳಿಯಲು ತೀರ್ಮಾನ ಅವರು ನರೇಂದ್ರ ಮೋದಿಗೆ ಪತ್ರ ಮುಖೇನ ಶುಭಕೋರಿದ್ದಾರೆ. ಪತ್ರದ ಮೂಲಕ ಶುಭಕೋರಿದ ಮಾಜಿ ಪ್ರಧಾನಿ, ಆರೋಗ್ಯ ಸಮಸ್ಯೆಯಿಂದ ನಾನು ಸಮಾರಂಭಕ್ಕೆ ಬರಲು ಆಗ್ತಿಲ್ಲ. ನಾನು ಮನೆಯಿಂದಲೇ ಟಿವಿಯಲ್ಲಿ ಪದಗ್ರಹಣ ಕಾರ್ಯಕ್ರಮ ನೋಡ್ತೇನೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಏನೇ ಹೇಳಲಿ ಭಾರತದ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗ್ತಿದೆ. ನೀವು ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸುವ ವಿಶ್ವಾಸ ನನ್ನಲ್ಲಿದೆ. ಕರ್ನಾಟಕ, ತೆಲಂಗಾಣ, ಹಿಮಾಚಲದಲ್ಲಿ ಕಾಂಗ್ರೆಸ್ ಪೆಟ್ಟು ತಿಂದಿದೆ. ನಿಮ್ಮ ಪ್ರಬಲ ಆಡಳಿತವು ದೇಶವನ್ನು ಇನ್ನೆಷ್ಟು ಎತ್ತರಕ್ಕೆ ಒಯ್ಯಲಿದೆ. ನಾವೆಲ್ಲರೂ ಸೇರಿ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಏರಿಸೋಣ ಎಂದು ಹೇಳಿದ್ದಾರೆ.
ನಾವು ಸದಾ ನಿಮ್ಮೊಂದಿಗೆ ನಂಬಿಕೆ, ವಿಶ್ವಾಸದ ಹೆಜ್ಜೆ ಹಾಕುತ್ತೇವೆ. JDS ನಿಮ್ಮ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಒಂದು ಪುಟದ ಸುದೀರ್ಘ ಪತ್ರ ಕಳುಹಿಸಿದ್ದಾರೆ.
ಇದನ್ನೂ ಓದಿ : ದೇಶ ಮತ್ತು ಕರ್ನಾಟಕದ ಏಳಿಗೆಗಾಗಿ ನಾವೆಲ್ಲಾ ಕೆಲಸ ಮಾಡ್ತೇವೆ – ಸಚಿವ ಸ್ಥಾನ ಕನ್ಫರ್ಮ್ ಆಗ್ತಿದ್ದಂತೆ ವಿ.ಸೋಮಣ್ಣ ರಿಯಾಕ್ಷನ್..!