Download Our App

Follow us

Home » ರಾಜ್ಯ » ನನಸಾಯಿತು ಎತ್ತಿನಹೊಳೆ ಕನಸು – ಮೊದಲ ಹಂತದ ಯೋಜನೆಗೆ ಸಿಎಂ ಸಿದ್ದು ಚಾಲನೆ..!

ನನಸಾಯಿತು ಎತ್ತಿನಹೊಳೆ ಕನಸು – ಮೊದಲ ಹಂತದ ಯೋಜನೆಗೆ ಸಿಎಂ ಸಿದ್ದು ಚಾಲನೆ..!

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಮೊದಲ ಹಂತ ಇಂದು  ಲೋಕಾರ್ಪಣೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡನಗರದ ವಿತರಣಾ ತೊಟ್ಟಿ 3ರಲ್ಲಿ ನೀರೆತ್ತುವ ಪಂಪ್ ಹಾಗೂ ಮೋಟಾರ್​ಗಳನ್ನು ಆನ್​ ಮಾಡುವ ಮೂಲಕ ಯೋಜನೆಯ ಮೊದಲ ಹಂತವನ್ನು ಲೋಕಾರ್ಪಣೆಗೊಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿಕೆಶಿ,  ಸಚಿವರಾದ ಡಾ.ಜಿ.ಪರಮೇಶ್ವರ್​​, ಎಂ.ಬಿ.ಪಾಟೀಲ್​​,ಕೆ.ಎನ್​​.ರಾಜಣ್ಣ, ಸಂಸದರು ಹಾಗೂ ಶಾಸಕರು ಸೇರಿ ಹಲವರು ಸಾಥ್​​​ ನೀಡಿದ್ದಾರೆ.

ಇದು ಬರೊಬ್ಬರಿ 23 ಸಾವಿರ ಕೋಟಿ ವೆಚ್ಚದ ಯೋಜನೆಯಾಗಿದ್ದು ಹಾಸನ ಜಿಲ್ಲೆಯ ಸಕಲೇಶಫುರ ತಾಲ್ಲೂಕಿನ ವ್ಯಾಪ್ತಿಯ ಪಶ್ಚಿಮಘಟ್ಟದಲ್ಲಿ ಹುಟ್ಟಿ ಹರಿಯುವ ಎತ್ತಿನಹೊಳೆ ಹಾಗೂ ಸುತ್ತಮುತ್ತಲ ಹಳ್ಳಗಳಿಂದ ನೀರನ್ನು ಮೆಲೆತ್ತಿ ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆಯ 7 ಜಿಲ್ಲೆಗಳಿಗೆ ಪೂರೈಸುವುದಕ್ಕೆ ಸಂಬಂಧಿಸಿದ ಯೋಜನೆ ಇದಾಗಿದೆ.

ಇದನ್ನೂ ಓದಿ : ಸ್ಯಾಂಡಲ್​​ವುಡ್​ನಲ್ಲೂ ಕಾಸ್ಟಿಂಗ್​ ಕೌಚ್​ ಸದ್ದು : ನಟ-ನಟಿಯರು ಸರ್ಕಾರಕ್ಕೆ ಮೊರೆ ಹೋದ ಬೆನ್ನಲ್ಲೇ ಮಹಿಳಾ ಆಯೋಗ ಅಲರ್ಟ್​..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here