ಬೆಂಗಳೂರು : ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ನಟಿಯರು, ಯಂಗ್ ಹೀರೋಯಿನ್ಗಳಿಂದ ಹಿಡಿದು ಸೀನಿಯರ್ ಹೀರೋಯಿನ್ಗಳವರೆಗೆ ಎಲ್ಲರೂ ತಮಗಾದ ಕಹಿ ಅನುಭವಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಸ್ಯಾಂಡಲ್ವುಡ್ನಲ್ಲೂ ಕಾಸ್ಟಿಂಗ್ ಕೌಚ್ ಬಿರುಗಾಳಿ ಎದಿದ್ದು, ಮಾಲಿವುಡ್ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ ಈ ರೀತಿಯ ಸಮಿತಿ ಕನ್ನಡ ಚಿತ್ರರಂಗಕ್ಕೂ ಅಗತ್ಯವಿದೆ ಎಂದು ಕನ್ನಡದ 153 ಹೆಚ್ಚೂ ನಟ, ನಟಿಯರು ಸರ್ಕಾರದ ಮೊರೆ ಹೋಗಿದ್ದಾರೆ.
ಇದೀಗ ಸರ್ಕಾರಕ್ಕೆ ಮೊರೆ ಹೋದ ನಂತರ ಮಹಿಳಾ ಆಯೋಗ ಅಲರ್ಟ್ ಆಗಿದೆ. ಅಲರ್ಟ್ ಆಗಿರುವ ಮಹಿಳಾ ಅಯೋಗ ಚಲನಚಿತ್ರ ಮಂಡಳಿಗೆ ಪತ್ರ ಬರೆದಿದೆ. ಸೆಪ್ಟೆಂಬರ್ 13ರಂದು ಮಹಿಳಾ ಆಯೋಗ ಚಲನಚಿತ್ರ ಮಂಡಳಿಗೆ ಎಂಟ್ರಿ ಕೊಟ್ಟು ಮಹತ್ವದ ಮೀಟಿಂಗ್ ನಡೆಸಲಿದೆ. ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆಯುವಂತೆ ಪತ್ರ ಬರೆದಿರುವ ಮಹಿಳಾ ಆಯೋಗ, ಸ್ಯಾಂಡಲ್ವುಡ್ನ ಮಹಿಳಾ ಕಲಾವಿದರ ಜೊತೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಈಗಾಗಲೇ 153ಕ್ಕೂ ಹೆಚ್ಚು ಮಂದಿ ಸಹಿ ಮಾಡಿ ಕಾಸ್ಟಿಂಗ್ ಕೌಚ್ ಸೇರಿ ಎಲ್ಲಾ ವಿಚಾರ ತನಿಖೆಗೆ ಆಗ್ರಹಿಸಿದ್ದಾರೆ. ಕೇರಳದ ಹೇಮಾ ಆಯೋಗದಂತೆ ಇಲ್ಲೂ ಆಯೋಗ ರಚನೆಗೆ ಶೃತಿ ಹರಿಹರನ್, ಪೂಜಾ ಗಾಂಧಿ, ಸಂಜನಾ ಗಲ್ರಾನಿ, ನೀತು, ಐಂದ್ರಿತಾ ರೇ ಸೇರಿದಂತೆ ಹಲವರು ಪತ್ರ ಬರೆದಿದ್ದಾರೆ. ಇನ್ನು ಫೈರ್ ಸಂಘಟನೆ ನೇತೃತ್ವದಲ್ಲಿ ಕಲಾವಿದರು ಹಾಗೂ ಸಿನಿಮಾ ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಲಿವಿಂಗ್ ಟುಗೆದರ್ನಲ್ಲಿದ್ರು ದರ್ಶನ್-ಪವಿತ್ರಾ.. ವಿಚಾರಣೆ ವೇಳೆ ಲಿವಿಂಗ್ ಇನ್ ರಹಸ್ಯ ಬಿಚ್ಚಿಟ್ಟಿರೋ ದಾಸ..!