Download Our App

Follow us

Home » ರಾಜ್ಯ » 15 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯುತ್‌ ದರ ಇಳಿಕೆ – ಇಂದಿನಿಂದಲೇ ಜಾರಿ..!

15 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯುತ್‌ ದರ ಇಳಿಕೆ – ಇಂದಿನಿಂದಲೇ ಜಾರಿ..!

ಲೋಕ ಕದನದ ಸಮಯದಲ್ಲಿ ಎಲ್ಲಾ ವರ್ಗದ ವಿದ್ಯುತ್​ ಬಳಕೆದಾರರಿಗೆ ಕರ್ನಾಟಕ ರಾಜ್ಯ ವಿದ್ಯುತ್​ಚ್ಛಕ್ತಿ ನಿಯಂತ್ರಣ ಆಯೋಗವು (KERC) ಗುಡ್​ ನ್ಯೂಸ್​ ನೀಡಿದೆ. ಇಂದಿನಿಂದ KSRC ನೂತನ ವಿದ್ಯುತ್​​​ ದರ ಜಾರಿಯಾಗಲಿದೆ. ರಾಜ್ಯದಲ್ಲಿ ಸುಮಾರು 15 ವರ್ಷಗಳ ಬಳಿಕ ವಿದ್ಯುತ್​​ ದರದಲ್ಲಿ ಇಳಿಕೆಯಾಗಿದ್ದು, 100 ಯೂನಿಟ್​​ಗಿಂತ ಹೆಚ್ಚು ಬಳಕೆ ಮಾಡುವ ಗ್ರಾಹಕರಿಗೆ ಯೂನಿಟ್​​ಗೆ 1 ರೂಪಾಯಿ 10 ಪೈಸೆ ಕಡಿತಗೊಳಿಸಲಾಗಿದೆ.

2024-25ನೇ ಸಾಲಿಗೆ ಈ ವಿದ್ಯುತ್​ ದರ ಅನ್ವಯವಾಗಲಿದೆ ಎಂದು KSRC ಆದೇಶ ಹೊರಡಿಸಿದೆ. ಮುಂದಿನ ತಿಂಗಳಿನ ಬಿಲ್​ನಲ್ಲಿ ಈ ಹೊಸ ದರ ಪರಿಷ್ಕರಣೆಯಾಗಲಿದೆ. ಈ ಹಿಂದೆ ಪ್ರತಿ ಯೂನಿಟ್​​ಗೆ 0ಯಿಂದ 100ರವರೆಗೆ 4.75 ಪೈಸೆ ಇತ್ತು. 100 ಮೇಲಿನ ಬಳಕೆಯ ಪ್ರತಿ ಯೂನಿಟ್​​ಗೆ 7 ರೂಪಾಯಿ ಇತ್ತು.

ಆದ್ರೆ, ಇಂದಿನಿಂದ 100 ಯೂನಿಟ್​​ ಮೇಲಿನ ಬಳಕೆದಾರರು ಪ್ರತಿ ಯೂನಿಟ್​​​ಗೆ 5.90ರೂಪಾಯಿ ಮಾತ್ರ ಪಾವತಿ ಮಾಡ್ಬೇಕು. ಈಗಾಗ್ಲೇ 100 ಯೂನಿಟ್​​​ಗಿಂತ ಕಡಿಮೆ ಬಳಕೆ ಮಾಡುವ ಗ್ರಾಹಕರಿಗೆ ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್​ ನೀಡಲಾಗ್ತಿದೆ.

ಗೃಹ ಬಳಕೆ ವಿದ್ಯುತ್‌ ದರ

ಹಿಂದಿನ ದರ
0-100 ಯುನಿಟ್‌ – 4.75 ರೂ
100ಕ್ಕಿಂತ ಹೆಚ್ಚು – 7.00 ರೂ
ಪರಿಷ್ಕೃತ ದರ
ಎಲ್ಲಾ ಯುನಿಟ್ – 5.90 ರೂ

ಇದನ್ನೂ ಓದಿ :  ಸಂಧಾನ ಯಶಸ್ವಿ- ಸುಮಲತಾ ಅಂಬರೀಶ್ ಬೆಂಬಲ ಬೆನ್ನಲ್ಲೇ ಹೆಚ್​ಡಿಕೆ ಫುಲ್ ಆ್ಯಕ್ಟೀವ್..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಬೈಕ್ ಸವಾರನ ಶವವನ್ನು 18 ಕಿ.ಮೀ​ ಎಳೆದೊಯ್ದು ಪರಾರಿಯಾದ ಕಾರು ಚಾಲಕ..!

ಕಾರು ಚಾಲಕನೊಬ್ಬ ಬೈಕ್​ಗೆ ಡಿಕ್ಕಿ ಹೊಡೆದು ಸವಾರನನ್ನು ಬರೋಬ್ಬರಿ 18 ಕಿಲೋ. ಮೀಟರ್​ ದೂರಕ್ಕೆ ಎಳೆದೊಯ್ದು ಪರಾರಿಯಾಗಿರುವ ಘಟನೆ ಅನಂತಪುರದಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ

Live Cricket

Add Your Heading Text Here