ಬೆಂಗಳೂರು : ಈ ಬಾರಿಯ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಏ.26 ಮತ್ತು ಮೇ.7ಕ್ಕೆ ಚುನಾವಣೆ ನಡೆಯಲಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಿಂದಾಗಿ MVD ಅಧಿಕಾರಿಗಳು ಫೀಲ್ಡಿಗಿಳಿದಿದ್ದಾರೆ. ಚುನಾವಣಾ ನಿರೀಕ್ಷಕರಿಗೆ ವಾಹನ ಒದಗಿಸಲು ಇದೀಗ ರಾಜ್ಯ ಸಾರಿಗೆ ಇಲಾಖೆ ಕಸರತ್ತು ನಡೆಸುತ್ತಿದ್ದು, ಒಟ್ಟು 1,700 ವಾಹನಗಳನ್ನು ಚುನಾವಣಾ ನಿರೀಕ್ಷಕರಿಗೆ ಒದಗಿಸುವಂತೆ ಜಿಲ್ಲಾ ಚುನಾವಣಾ ಅಧಿಕಾರಿ ಸೂಚನೆ ನೀಡಿದ್ದಾರೆ.
ಇತರೆ ರಾಜ್ಯಗಳಿಂದ ಹಿರಿಯ ಅಧಿಕಾರಿಗಳು ಲೋಕ ಚುನಾವಣೆಗೆ ನಿರೀಕ್ಷಕರಾಗಿ ಆಗಮಿಸುತ್ತಿದ್ದು, ಹಾಗಾಗಿ ಚುನಾವಣೆ ಮುಗಿಯುವವರಿಗೆ ಅವರಿಗೆ ಓಡಾಡಲು ವಾಹನ ಒದಗಿಸುವ ಹೊಣೆ ಜಿಲ್ಲಾ ಚುನಾವಣಾ ಅಧಿಕಾರಿಗಳದ್ದಾಗಿದೆ.
ಈ ಹಿನ್ನೆಲೆಯಿಂದಾಗಿ MVD ಅಧಿಕಾರಿಗಳು ಬಿಬಿಎಂಪಿ, ಬಿಡಿಎ, ಕಂದಾಯ ಇಲಾಖೆ, ಸರ್ಕಾರಿ ಅಧಿಕಾರಿಗಳ ವಾಹನಗಳನ್ನು ವಶ ಪಡಿಸಿಕೊಳ್ಳುತ್ತಿದ್ದಾರೆ. ಜಿಲ್ಲಾ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ಸೂಚನೆ ಮೇರೆಗೆ ಈ ಕಾರ್ಯಾಚರಣೆ ನಡೆದಿದ್ದು, ಒಟ್ಟು 1,700 ಅಧಿಕಾರಿಗಳ ವಾಹನಗಳನ್ನು MVD ಅಧಿಕಾರಿಗಳು ವಶಪಡಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಮೇಘನಾ ಫುಡ್ಸ್ ಗ್ರೂಪ್ ಮೇಲೆ ಐಟಿ ರೇಡ್..!