Download Our App

Follow us

Home » ಅಪರಾಧ » 3 ದಿನಗಳ ಹಿಂದೆಯೇ ರೇಡ್​ಗೆ ನಡೆದಿತ್ತು ಮೆಗಾ ಪ್ಲಾನ್ – ವಾಲ್ಮೀಕಿ ಹಗರಣದ ಬಯಲಿಗೆ ED ಸೈಲೆಂಟ್ ಆಪರೇಷನ್..!

3 ದಿನಗಳ ಹಿಂದೆಯೇ ರೇಡ್​ಗೆ ನಡೆದಿತ್ತು ಮೆಗಾ ಪ್ಲಾನ್ – ವಾಲ್ಮೀಕಿ ಹಗರಣದ ಬಯಲಿಗೆ ED ಸೈಲೆಂಟ್ ಆಪರೇಷನ್..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣ ಸಂಬಂಧವಾಗಿ ರೇಡ್ ಮಾಡುವುದಾಗಿ ಮೂರು ದಿನಗಳ ಹಿಂದೆಯೇ ಮೆಗಾ ಪ್ಲಾನ್​​​ ನಡೆದಿತ್ತು. ಒಂದು ಕಡೆ SIT ತನಿಖೆ  ನಡೀತಿದ್ರೆ, ED ಅಧಿಕಾರಿಗಳು ಸೈಲೆಂಟ್ ಆಗಿ ಆಪರೇಷನ್​ ಮಾಡುತ್ತಿದ್ದರು. ಜಾರಿ ನಿರ್ದೇಶನಾಲಯ ಸದ್ದಿಲ್ಲದೇ ಹಗರಣದ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು, ಶುಕ್ರವಾರವೇ ECIR ದಾಖಲು ಮಾಡಿಕೊಂಡಿತ್ತು.

ಮಾಜಿ ಮಂತ್ರಿ ನಾಗೇಂದ್ರ ಸೇರಿ 6 ಮಂದಿ ವಿರುದ್ಧ ECIR ದಾಖಲಾಗಿದ್ದು, ನಾಗೇಂದ್ರ, ಬಸನಗೌಡ ದದ್ದಲ್​​​, ಪದ್ಮನಾಭ್​, ಪರಶುರಾಮ್​​, ನೆಕ್ಕುಂಟಿ ನಾಗರಾಜ್​​​, ನಾಗರಾಜ್​​​ ಅಳಿಯ ನಾಗೇಶ್ವರರಾವ್​ ಮನೆ ಸೇರಿ ಹಲವೆಡೆ ಶೋಧ ನಡೆಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿ ಮೇಲೂ ರೇಡ್​ – ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿ ಮೇಲೂ ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳು ರೇಡ್​ ಮಾಡಿದ್ದಾರೆ. ವಸಂತನಗರದ ವಾಲ್ಮೀಕಿ ನಿಗಮ ಕಚೇರಿಯಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ED ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎರಡು ಕಾರ್​​ಗಳಲ್ಲಿ ಬಂದಿರುವ ನಾಲ್ವರು ಇಡಿ ಅಧಿಕಾರಿಗಳಿಂದ ಕಚೇರಿ ಪರಿಶೀಲನೆ ಮಾಡಿದ್ದಾರೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಳಗ್ಗೆ 6 ಗಂಟೆಗೇ ಬಂದು ಆಫೀಸ್ ಬಳಿ ನಿಂತಿದ್ದರು.

ಶಾಸಕರ ಭವನದ ಮೇಲೂ ED ರೇಡ್ : ಶಾಸಕರ ಭವನದ ಮೇಲೂ ED ಅಧಿಕಾರಿಗಳು ರೇಡ್​ ಮಾಡಿ, ಪರಿಶೀಲನೆ ಮಾಡಿದೆ. ಬಿ.ನಾಗೇಂದ್ರ, ಬಸನಗೌಡ ದದ್ದಲ್​​ಗೆ ಸೇರಿದ ರೂಂಗಳಲ್ಲಿ ಶೋಧ ನಡೆಸಿದ್ದು, ಶಾಸಕರ ಭವನದಲ್ಲಿ ಶಾಸಕ ಬಸನಗೌಡ ದದ್ದಲ್ ಇರುವ ಶಂಕೆ ವ್ಯಕ್ತವಾಗಿದೆ. ಇದೀಗ ಪೊಲೀಸರು ಪ್ರತಿಯೊಂದು ವಾಹನ ಚೆಕ್​​​​ ಮಾಡಿ ಒಳಗಡೆ ಬಿಡ್ತಿದ್ದು, ಶಾಸಕರ ಭವನದ ಕೊಠಡಿ ನಂಬರ್ 360, 532ರ ಮೇಲೆ ರೇಡ್​ ಮಾಡಿದ್ದಾರೆ. ಮಾಜಿ ಸಚಿವ ನಾಗೇಂದ್ರ ಅವ್ರ 360ನೇ ನಂಬರ್​​​ ಕೊಠಡಿಯಾಗಿದ್ದು, ಬಸನಗೌಡ ದದ್ದಲ್ ಕೊಠಡಿ ಸಂಖ್ಯೆ 532ರಲ್ಲೂ ಶೋಧ ನಡೆಸಿದ್ದಾರೆ.

ಇದನ್ನೂ ಓದಿ : ಮಾಜಿ ಸಚಿವ ಬಿ.ನಾಗೇಂದ್ರ ಮೊಬೈಲ್ ED​​ ವಶಕ್ಕೆ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here