Download Our App

Follow us

Home » ಸಿನಿಮಾ » ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ ದ್ವಾರಕೀಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ : ಮಧ್ಯಾಹ್ನದ ನಂತರ ಅಂತ್ಯಸಂಸ್ಕಾರ..!

ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ ದ್ವಾರಕೀಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ : ಮಧ್ಯಾಹ್ನದ ನಂತರ ಅಂತ್ಯಸಂಸ್ಕಾರ..!

ಬೆಂಗಳೂರು : ಸ್ಯಾಂಡಲ್​​ವುಡ್​​ನ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ವಯೋಸಹಜ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. 81 ವರ್ಷದ ದ್ವಾರಕೀಶ್ ಬೆಂಗಳೂರಿನ ನಿವಾಸಲ್ಲಿ ಇಹಲೋಕ ತ್ಯಜಿಸಿದ್ದಾರೆ.

ನಾಳೆಯೇ ನಟ ದ್ವಾರಕೀಶ್​ ಅಂತ್ಯ ಸಂಸ್ಕಾರ ನಡೆಯಲಿದೆ. ಚಾಮರಾಜಪೇಟೆಯ ಟಿ.ಆರ್​​.ಮಿಲ್​​ನಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ದ್ವಾರಕೀಶ್​ ಕುಟುಂಬ ಸದಸ್ಯರಿಂದ ನಿರ್ಧಾರವಾಗಿದೆ.
ದ್ವಾರಕೀಶ್​ ನಿವಾಸದಲ್ಲಿ ಕುಟುಂಬ ಸದಸ್ಯರು ಈ ಸಂಬಂಧ ಚರ್ಚಿಸಿದ್ದು, ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಿದ್ದಾರೆ. ನಾಳೆ ಬೆಳಗ್ಗೆಯಿಂದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಇದ್ದು, ಮಧ್ಯಾಹ್ನದ ನಂತರ ದ್ವಾರಕೀಶ್​ ಅಂತ್ಯ ಸಂಸ್ಕಾರ ನೆರವೇರಲಿದೆ.

1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ಇವರು ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಖ್ಯಾತಿಯಲ್ಲಿದ್ದರು. ಡಾ. ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಉತ್ತಮ ಸ್ನೇಹಿತರಾಗಿದ್ದು, ದ್ವಾರಕೀಶ್ ವಿಷ್ಣು ಅಭಿನಯದ ಬಹುತೇಕ ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದರು.

ನಟನೆ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕನಾಗಿಯೂ ಚಿತ್ರರಂಗದಲ್ಲಿ ಮೋಡಿ ಮಾಡಿದ್ದರು. ಒಟ್ಟು 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದರು. ಡಾ. ರಾಜ್​​ಕುಮಾರ್, ಡಾ. ವಿಷ್ಣುವರ್ಧನ್ ರಂತಹ ದಿಗ್ಗಜರ ಚಿತ್ರಗಳನ್ನು ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಇದನ್ನೂ ಓದಿ : ಸ್ಯಾಂಡಲ್​​ವುಡ್​ನ ಪ್ರಚಂಡ ಕುಳ್ಳ ವಿಧಿವಶ : ದ್ವಾರಕೀಶ್​ ಅವರ ಕೊನೆಯ ಕ್ಷಣ ಹೇಗಿತ್ತು..?

Leave a Comment

DG Ad

RELATED LATEST NEWS

Top Headlines

ಬಸ್ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ – 7 ಮಂದಿ ದಾರುಣ ಸಾವು..!

ಮುಂಬೈ : ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರೋ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಬಸ್

Live Cricket

Add Your Heading Text Here