Download Our App

Follow us

Home » ಸಿನಿಮಾ » ಇಂದು ದ್ವಾರಕೀಶ್​​ ಅಂತ್ಯಕ್ರಿಯೆ – ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ..!

ಇಂದು ದ್ವಾರಕೀಶ್​​ ಅಂತ್ಯಕ್ರಿಯೆ – ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ..!

ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್​ ಅವರ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ದ್ವಾರಕೀಶ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗದಲ್ಲಿ ಈಗ ನೀರವ ಮೌನ ಆವರಿಸಿದೆ. ದ್ವಾರಕೀಶ್ ಮೃತದೇಹವನ್ನು ಇಲೆಕ್ಟ್ರಾನಿಕ್ ಸಿಟಿಯ ಗುಳಿಮಂಗಳದಲ್ಲಿರುವ ಅವರ ನಿವಾಸದಲ್ಲಿ ಇಡಲಾಗಿದೆ. ಇಂದು ಅಂತ್ಯಕ್ರಿಯೆ ನಡೆಯಲಿದೆ. ಎಲ್ಲಿ, ಯಾವಾಗ ಅಂತ್ಯಕ್ರಿಯೆ ನಡೆಯಲಿದೆ, ಸಾರ್ವಜನಿಕರು ಎಷ್ಟು ಗಂಟೆಯವರೆಗೆ ಬಂದು ಅಂತಿಮ ದರ್ಶನಕ್ಕೆ ಪಡೆಯಬಹುದು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಬೆಳಿಗ್ಗೆ 7:30 ನಂತರ ಬೆಂಗಳೂರಿನ ಟೌನ್​ಹಾಲ್ ಬಳಿ ಇರುವ ರವೀಂದ್ರ ಕಲಾಕ್ಷೇತ್ರಕ್ಕೆ ದ್ವಾರಕೀಶ್ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ. 11:30ರವೆರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದರ್ಶನದ ಬಳಿಕ ಮಧ್ಯಾಹ್ನ 2 ಗಂಟೆಯ ನಂತರ ಬೆಂಗಳೂರಿನ ಚಾಮರಾಜಪೇಟೆ ಟಿಆರ್​ಮಿಲ್​ ರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

ಚಿರನಿದ್ರೆಗೆ ಜಾರಿದ ಪ್ರಚಂಡ ಕುಳ್ಳನಿಗೆ ನಿನ್ನೆ ಮಧ್ಯಾಹ್ನದಿಂದ ಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ನಿವಾಸಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. ದ್ವಾರಕೀಶ್ ಪಾರ್ಥೀವ ಶರೀರಕ್ಕೆ ನಮಿಸಿ ಸಾಧನೆ ಸ್ಮರಿಸುತ್ತಿದ್ದು, ಐದು ದಶಕಗಳ ಕಾಲ ಚಿತ್ರರಂಗವನ್ನು ಆಳಿದ್ದ ಆಪ್ತ ಮಿತ್ರ, ಭಾಗ್ಯವಂತನ ಕಳೆದುಕೊಂಡ ಸ್ಯಾಂಡಲ್​ವುಡ್​ನಲ್ಲಿ ನೀರವಮೌನ ಆವರಿಸಿದೆ. ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್​ವೈ, ಹೆಚ್​ಡಿಕೆ, ಬೊಮ್ಮಾಯಿ ಹಾಗೂ ನಟ ಶಿವರಾಜ್​ಕುಮಾರ್, ಸುದೀಪ್, ದರ್ಶನ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ದ್ವಾರಕೀಶ್ ಗೌರವಾರ್ಥ ಇಂದು ಚಿತ್ರರಂಗ ಬಂದ್ : ದ್ವಾರಕೀಶ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಹೀಗಾಗಿ, ಅವರಿಗೆ ಗೌರವ ಸಲ್ಲಿಕೆ ಮಾಡಲಾಗುತ್ತಿದೆ.

  • ಚಿತ್ರರಂಗದ ಚಟುವಟಿಕೆ ಸ್ಥಗಿತಗೊಳಿಸಿ ಗೌರವ ಸಲ್ಲಿಕೆ
  • ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದವರೆಗೂ ಯಾವುದೇ ಶೂಟಿಂಗ್ ಇರಲ್ಲ.
  • ರಾಜ್ಯಾದ್ಯಂತ ಚಲನಚಿತ್ರ ಪ್ರದರ್ಶನವೂ ರದ್ದು.
  • ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಥಿಯೇಟರ್ಗಳಲ್ಲೂ ಪ್ರದರ್ಶನ ಇರಲ್ಲ.
  • ದ್ವಾರಕೀಶ್ ಅಂತ್ಯ ಸಂಸ್ಕಾರ ಮುಗಿಯೋವರೆಗೂ ಚಟುವಟಿಕೆ ಬಂದ್.
  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ತೀರ್ಮಾನ.
  • ಮೇರು ನಟನಿಗಾಗಿ ಸಂಪೂರ್ಣ ಸ್ತಬ್ಧವಾಗಲಿರುವ ಕನ್ನಡ ಚಿತ್ರರಂಗ

ಇದನ್ನೂ ಓದಿ : ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್ ಕೊಡುಗೆ ಅಪಾರ : ಪ್ರಧಾನಿ ನರೇಂದ್ರ ಮೋದಿ ಸಂತಾಪ..! 

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here