ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಅವರ ರಾಜಕೀಯ ಪ್ರವೇಶ ಹಾಗೂ ಇದೀಗ ಅವರಿಗೆ ಸಿಕ್ಕಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಲೋಕ ಸಭಾ ಚುನಾವಣೆ ಟಿಕೆಟ್ ಸಂಬಂಧ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯಿಸಿ, ಡಾಕ್ಟರ್ ಮಂಜುನಾಥ್ ನಿಮಗೆ ಇದು ಬೇಕಿತ್ತಾ? ಎಂದು ಕೆಂಡಾಮಂಡಲವಾಗಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರು ಈ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ “ನಮ್ಮ ಪ್ರೀತಿಯ ವೈದ್ಯ, ಡಾ. ಸಿ.ಎನ್. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ. ಕಾರಣ ಏನೇ ಇರಲಿ. ಇಲ್ಲಿ ಪಡೆದುದನ್ನು ಅಲ್ಲಿ ಕಳೆದುಕೊಳ್ಳಬಹುದೇನೋ. ಜನರ ಸೇವೆ ಮಾಡಲು ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ? ಸಮಾಜವನ್ನು ಕಟ್ಟಲು ಸಾವಿರ ದಾರಿಗಳಿವೆ. ಮಂಜುನಾಥ್ ಇದು ನಿಮಗೆ ಬೇಕಿತ್ತೆ? ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಸದ್ಯ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಮತ್ತೆ ಹೈವೋಲ್ಟೇಜ್ ಅಖಾಡವಾಗಿ ಬದಲಾಗಿದೆ. ಡಿ.ಕೆ.ಸುರೇಶ್ ಅವರ ಕ್ಷೇತ್ರವಾಗಿರೋದ್ರಿಂದ ಒನ್ಸೈಡ್ ಮ್ಯಾಚ್, ಅವರೇ ಗೆಲುವಿನ ಫೆವರಿಟ್ ಅನ್ನೋ ಮಾತು ಈ ಬಾರಿ ಕೊಂಚ ಬದಲಾಗ್ತಿದೆ. ಅದಕ್ಕೆ ಕಾರಣ, ಈ ಬಾರಿ ಡಿ.ಕೆ.ಸುರೇಶ್ ವಿರುದ್ಧ ಡಾಕ್ಟರ್ ಮಂಜುನಾಥ್ ಸ್ಪರ್ಧೆ ಮಾಡುತ್ತಿರುವುದು ಎನ್ನಲಾಗಿದೆ.
ಇದನ್ನೂ ಓದಿ : ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ – ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲು..!