Download Our App

Follow us

Home » ಸಿನಿಮಾ » ರಾಜಕಾರಣ ನನಗೆ ಗೊತ್ತಿಲ್ಲ, ರಾಜಕೀಯಕ್ಕೆ ನಾನು ಹೋಗುವುದಿಲ್ಲ : ನಟ ಡಾಲಿ ಧನಂಜಯ್​ ಸ್ಪಷ್ಟನೆ..!

ರಾಜಕಾರಣ ನನಗೆ ಗೊತ್ತಿಲ್ಲ, ರಾಜಕೀಯಕ್ಕೆ ನಾನು ಹೋಗುವುದಿಲ್ಲ : ನಟ ಡಾಲಿ ಧನಂಜಯ್​ ಸ್ಪಷ್ಟನೆ..!

ಮೈಸೂರು : ನಟ ಡಾಲಿ ಧನಂಜಯ್ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಪ್ರವೇಶಿಸುತ್ತಾರೆ, ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಈ ವದಂತಿಗಳಿಗೆ ಡಾಲಿ ಧನಂಜಯ್ ಬ್ರೇಕ್ ಹಾಕಿದ್ದಾರೆ.

ಈ ಬಗ್ಗೆ ನಟ ಡಾಲಿ ಧನಂಜಯ್ ಶ್ರೀರಂಗಪಟ್ಟಣದಲ್ಲಿ​ ಪ್ರತಿಕ್ರಿಯಿಸಿ, ನನಗೆ ರಾಜಕಾರಣ ಗೊತ್ತಿಲ್ಲ, ರಾಜಕಾರಣಕ್ಕೆ ಸದ್ಯ ಬರಲ್ಲ. ಸಿನಿಮಾ ರಂಗದಲ್ಲಿ ಸಾಕಷ್ಟು ಕನಸು ಇದೆ.. ಕೆಲಸ ಮಾಡ್ತೇನೆ ಎಂದು ಹೇಳಿದ್ದಾರೆ.

ಯಾವುದೇ ಕೆಲಸ ಮಾಡಬೇಕಾದ್ರೂ 100% ಎಫರ್ಟ್ ಹಾಕಬೇಕು, ನನಗೆ ಸಿನಿಮಾ, ಜನರ ಪ್ರೀತಿ ಸಿಕ್ಕಿರುವುದು ದೊಡ್ಡದು. ಸಿನಿಮಾದಲ್ಲೇ ಇನ್ನು ತುಂಬಾ ಕೆಲಸ ಮಾಡುವುದಿದೆ, ನನಗೆ ಎಲೆಕ್ಷನ್​​ಗೆ ನಿಲ್ಲಲು ಆಹ್ವಾನ ಬಂದಿಲ್ಲ. ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ಹೋಗಿದ್ದೇನೆ, ಎಲ್ಲಾ ಪಕ್ಷದಲ್ಲೂ ಸ್ನೇಹಿತರಿದ್ದಾರೆ ಕರೆದರೂ ಕ್ಯಾಂಪೇನ್​ಗೆ ಹೋಗಿಲ್ಲ. ತಳ ವರ್ಗದ ಪರ ಕೆಲಸ ಮಾಡುವವರೇ ನನಗೆ ಗುಡ್ ಲೀಡರ್​​ ಎಂದು ನಟ ಡಾಲಿ ಧನಂಜಯ್​ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಹಫ್ತಾ ವಸೂಲಿಗಾಗಿ ವೃದ್ಧನ ಮುಂದೆ ಯುವಕನ ಹುಚ್ಚಾಟ : ವಿಡಿಯೋ ವೈರಲ್..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಖಾಕಿ ಕೋಟಿ ದಂಧೆ : ಮೆಜೆಸ್ಟಿಕ್​ನಲ್ಲಿ ಖಾಸಗಿ ಬಸ್​ಗೆ ಬೆಂಕಿ ಬಿದ್ದಿರೋ ಹಿಂದಿದೆ ಮಹಾ ಭ್ರಷ್ಟಾಚಾರ – ಪೊಲೀಸರ ಲಂಚದ ವಿಡಿಯೋ ಲೀಕ್..!

ಬೆಂಗಳೂರು : ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್​ನಲ್ಲಿ ದಿನ ನಿತ್ಯ ಸಾವಿರಾರು ಜನರು ಒಡಾಡ್ತಾರೆ. ಕಾಲಿಡಲು ಜಾಗವಿಲ್ಲದಷ್ಟು ಬ್ಯುಸಿ ಏರಿಯಾದಲ್ಲಿ ನಿನ್ನೆ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರೂ

Live Cricket

Add Your Heading Text Here