ಬೆಂಗಳೂರು : ಯಾರನ್ನು ಬೇಕಾದ್ರೂ ಹಿಡಿದು, ಬಡಿದು ತರಲಿ. ತಮ್ಮ ಬಾಯಿಗೆ ಹಾಕ್ಕೊಂಡು ನುಂಗಿಕೊಳ್ಳಲಿ. ನಾನು ಎಕ್ಸಿಬಿಟರ್ ಅಷ್ಟೆ, ಡೈರೆಕ್ಟರ್, ಪ್ರೊಡ್ಯೂಸರ್ ಅಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಮಿಂಗಿಲ ಎಂದ ಹೆಚ್ಡಿಕೆಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿದ ಡಿ.ಕೆ.ಶಿವಕುಮಾರ್ ಅವರು, ನಾನು ಕೆಟ್ಟದ್ದು ಬಯಸುವವನಲ್ಲ, ನನಗೆ ಯಾವುದೂ ಬೇಕಿಲ್ಲ. ದೊಡ್ಡ ಮನೆಗೆ ಹೀಗಾಯ್ತಲ್ಲಾ ಅನ್ನೋ ನೋವು ನನಗೂ ಇದೆ. ಇದಕ್ಕಾಗಿ ನಾನೂ ನೊಂದು ಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ನನ್ನ ಸಣ್ಣ ಪಾತ್ರವೂ ಇಲ್ಲ. ಸಣ್ಣ ಪಾತ್ರ ತೋರಿಸಿದ್ರೂ ಯಾವುದೇ ಕ್ರಮಕ್ಕೆ ರೆಡಿ ಇದ್ದೇನೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಸಂತ್ರಸ್ತೆ ಕಿಡ್ನಾಪ್ ಪ್ರಕರಣ – ಮತ್ತೊಬ್ಬ ಆರೋಪಿಯನ್ನು ಬಂಧಿಸಿದ ಪೊಲೀಸರು..!
Post Views: 106