ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಸದ್ಯ ಡಿನ್ನರ್ ಪಾಲಿಟಿಕ್ಸ್ ವಿಚಾರದ್ದೇ ಸದ್ದು.. ಕೆಲವು ದಿನಗಳಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಡಿನ್ನರ್ ಮೀಟಿಂಗ್ ಸಖತ್ ಜೋರು ಮಾಡುತ್ತಿದೆ. ಒಂದು ಕಡೆ ಸಚಿವ ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿದ್ರೆ ಮತ್ತೊಂದೆಡೆ ನಾಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಡಿನ್ನರ್ ಸಭೆ ನಡೆಸಲು ತೀರ್ಮಾನಿಸಿದ್ದರು. ಇದೀಗ ಡಾ.ಜಿ.ಪರಮೇಶ್ವರ್ ಹಮ್ಮಿಕೊಂಡಿದ್ದ ಡಿನ್ನರ್ ಮೀಟಿಂಗ್ ಕ್ಯಾನ್ಸಲ್ ಆಗಿದೆ.
ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಾಳೆ ನಿಗದಿಯಾಗಿದ್ದ ಡಿನ್ನರ್ ಮೀಟಿಂಗ್ ರದ್ದಾಗಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೂಚನೆ ಮೇರೆಗೆ ನಾಳೆಯ ಡಿನ್ನರ್ ಸಭೆ ರದ್ದು ಮಾಡಿ ಮುಂದೂಡಿಕೆ ಮಾಡಲಾಗಿದೆ. ಹೈಕಮಾಂಡ್ ಸೂಚನೆ ಮೇರೆಗೆ ಗೃಹ ಸಚಿವ ಪರಮೇಶ್ವರ್ ಅವರು ಡಿನ್ನರ್ ಮೀಟಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಪರಮೇಶ್ವರ್ ಅವರು ಔತಣಕೂಟದ ನೆಪದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಕಲ ತಯಾರಿ ಮಾಡಿಕೊಂಡಿದ್ದರು.
ಸಚಿವ ಡಾ.ಜಿ.ಪರಮೇಶ್ವರ್ ಅವರು ನಾಳೆ ಡಿನ್ನರ್ ಸಭೆ ನಡೆಸುವ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬೆಂಬಲಿತ ಸಚಿವರು, ಶಾಸಕರು, ಮುಖಂಡರನ್ನು ಒಟ್ಟುಗೂಡಿಸಿ ಬಲ ಪ್ರದರ್ಶನ ಮಾಡಿ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ನೀಡಲು ಪ್ಲ್ಯಾನ್ ಮಾಡಿದ್ದರು. ಇದೀಗ ಹೈಕಮಾಂಡ್ ಮಧ್ಯ ಪ್ರವೇಶಿಸಿದ್ದು ನಾಳೆಯ ಔತಣಕೂಟದ ಮೀಟಿಂಗ್ ರದ್ದು ಮಾಡಿದ್ದಾರೆ. ಡಾ.ಜಿ.ಪರಮೇಶ್ವರ್ ಅವರು ಪತ್ರದ ಮೂಲಕ ತಮ್ಮ ಆಪ್ತರಿಗೆ, ಅಭಿಮಾನಿಗಳಿಗೆ ಸಭೆ ರದ್ದು ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಶೂಟಿಂಗ್ ವೇಳೆ ನಟಿ ದಿಢೀರ್ ದುರ್ಮರಣ – ಚೆಲುವೆಯ ದುರಂತ ಅಂತ್ಯಕ್ಕೆ ಪ್ರಿಯಕರನೇ ಸೂತ್ರಧಾರ!