Download Our App

Follow us

Home » ರಾಜಕೀಯ » ಸಚಿವ ಕೆ.ಎನ್ ರಾಜಣ್ಣಗೆ ದೇವೇಗೌಡರ ಕುಟುಂಬ ವಾಮಾಚಾರ ಮಾಡಿಸಿತ್ತಾ…?

ಸಚಿವ ಕೆ.ಎನ್ ರಾಜಣ್ಣಗೆ ದೇವೇಗೌಡರ ಕುಟುಂಬ ವಾಮಾಚಾರ ಮಾಡಿಸಿತ್ತಾ…?

ತುಮಕೂರು : ನನಗೆ ಹಾಸನ ಉಸ್ತುವಾರಿ ಕೊಟ್ಟಾಗ ನನ್ನ ಅಭಿಮಾನಿಗಳು ಹೆದರಿದ್ದರು, ಸಾರ್ ಹಾಸನಕ್ಕೆ ಹೋಗ್ಬೇಡಿ.. ವಾಮಾಚಾರ ಮಾಡ್ತಾರೆ ಅಂದ್ರು. ಸ್ವತಃ ನಾನೇ ಕೂತ್ಕೊಳ್ತೀನಿ ನನ್ನ ಮೇಲೆ ವಾಮಾಚಾರ ಮಾಡ್ಲಿ ಎಂದೆ, ನಾವು ಉಗ್ರ ನರಸಿಂಹನ ಭಕ್ತರು ವಾಮಾಚಾರ ತಟ್ಟಲ್ಲ ಅಂದ್ಕೊಂಡಿದ್ದೆ ಎಂದು ಸಚಿವ ಕೆ.ಎನ್​​​.ರಾಜಣ್ಣ ಹೇಳಿದ್ದಾರೆ.

ಸಚಿವ ಕೆ.ಎನ್​​​.ರಾಜಣ್ಣ ಆಡಿರೋ ಮಾತಿನಿಂದ ಇದೀಗ, ದೇವೇಗೌಡರ ಕುಟುಂಬ ರಾಜಣ್ಣ ವಿರುದ್ಧ ವಾಮಾಚಾರ ಮಾಡಿಸಿತ್ತಾ..? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಈ ಬಗ್ಗೆ ತುಮಕೂರಿನಲ್ಲಿ ಕೆ.ಎನ್​​​.ರಾಜಣ್ಣ ಮಾತನಾಡಿ, ಕುಣಿಗಲ್ ಮೂಲಕ ಮೊದಲ ದಿನ ಹಾಸನಕ್ಕೆ ಹೋಗ್ತಾ ಇದ್ದೆ. ಪಟಾಕಿ ಸಿಡಿದು, ಕಣ್ಣಿಗೆ ಏಟಾಗಿತ್ತು.  ಡಾಕ್ಟರ್​​​​ ಹಾಸನಕ್ಕೆ ಹೋಗ್ಬೇಡಿ ಅಂದ್ರು, ಎರಡೂ ಕಣ್ಣು ಹೋದರೂ ಪರವಾಗಿಲ್ಲ ಅಂತಾ ಧೈರ್ಯವಾಗಿ ಹೋದೆ. ಇಲ್ಲಾಂದ್ರೆ ಹೆದರಿ ಹಾಸನಕ್ಕೆ ಬಂದಿಲ್ಲ ಅನ್ನೋ ಸಂದೇಶ ಹೋಗ್ತಿತ್ತು ಎಂದಿದ್ದಾರೆ.

ಹಾಗೆಯೇ ತಮ್ಮ ಜನಾಂಗದ ಬಗ್ಗೆ ಪರ ಹಾಗೂ ವಿರೋಧವಾಗಿ ಮಾತನಾಡಿದ್ದಾರೆ. ನಾವು ಹುಟ್ಟುತ್ತಲೇ ನಾಯಕರು, ಹಾಗಾಗಿ ಬೇರೆಯವರನ್ನು ನಾವು ನಾಯಕರು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ, ಹಾಗಾಗಿ ನಾವು ಅಭಿವೃದ್ಧಿಯಾಗುತ್ತಿಲ್ಲ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಆಸ್ತಿಯಾಗಿಸಬೇಕು, ಮಧುಗಿರಿಯಲ್ಲಿ ನಮ್ಮ ಜಾತಿಯವರಿಂದಲೇ ನಮಗೆ ಗೂಟ ಬೀಳ್ತಾ ಇದೆ, ಬೇರೆ ಸಮುದಾಯದವರು ನನ್ನ ಕೈ ಹಿಡಿಯುತ್ತಿದ್ದಾರೆ. ಯಾಕೆಂದರೆ ನಾನು ಎಲ್ಲಾ ವರ್ಗದ ಬಡ ಜನರ ಪರವಾಗಿದ್ದವನು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಆಸ್ಟ್ರೇಲಿಯಾ ಪ್ರಜೆಯ ಕಿಡ್ನಾಪ್ ಪ್ರಕರಣ : 6 ಮಂದಿ ಆರೋಪಿಗಳು ಅರೆಸ್ಟ್..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಬೈಕ್ ಸವಾರನ ಶವವನ್ನು 18 ಕಿ.ಮೀ​ ಎಳೆದೊಯ್ದು ಪರಾರಿಯಾದ ಕಾರು ಚಾಲಕ..!

ಕಾರು ಚಾಲಕನೊಬ್ಬ ಬೈಕ್​ಗೆ ಡಿಕ್ಕಿ ಹೊಡೆದು ಸವಾರನನ್ನು ಬರೋಬ್ಬರಿ 18 ಕಿಲೋ. ಮೀಟರ್​ ದೂರಕ್ಕೆ ಎಳೆದೊಯ್ದು ಪರಾರಿಯಾಗಿರುವ ಘಟನೆ ಅನಂತಪುರದಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ

Live Cricket

Add Your Heading Text Here