Download Our App

Follow us

Home » ರಾಜಕೀಯ » ನಾವು ನಿಮ್ಮಂತೆ ಊರುಗಳನ್ನು ಹಾಳು ಮಾಡಿ ಬೆಳೆದಿಲ್ಲ – ಡಿಕೆಶಿ ವಿರುದ್ಧ ಹೆಚ್​ಡಿಕೆ ಕಿಡಿ..!

ನಾವು ನಿಮ್ಮಂತೆ ಊರುಗಳನ್ನು ಹಾಳು ಮಾಡಿ ಬೆಳೆದಿಲ್ಲ – ಡಿಕೆಶಿ ವಿರುದ್ಧ ಹೆಚ್​ಡಿಕೆ ಕಿಡಿ..!

ರಾಮನಗರ : ಮುಡಾ ನಿವೇಶನ ಹಂಚಿಕೆ ಹಗರಣ ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಭಾಗಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೂಡಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಆಗ್ರಹಿಸುತ್ತಿವೆ. ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಆಗ್ರಹಿಸಿ BJP-JDSನಾಯಕರು ​ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆಯಲ್ಲಿ ಡಿಕೆಶಿ ವಿರುದ್ಧ ಹೆಚ್​ಡಿಕೆ ಮತ್ತೆ ಕಿಡಿಕಾರಿದ್ದಾರೆ.

ಈ ಬಗ್ಗೆ ರಾಮನಗರದಲ್ಲಿ ಹೆಚ್​​ಡಿಕೆ ಮಾತನಾಡಿ, ರಾಮನಗರಕ್ಕೆ ನಮ್ಮ ಫ್ಯಾಮಿಲಿ ಈಗ ಬಂದಿದ್ದಲ್ಲ, 1983ರಿಂದಲೂ ಇಲ್ಲಿ ರಾಜಕಾರಣ ಮಾಡ್ತಿದ್ದೇವೆ. ಅವತ್ತು ನಮ್ಮ ತಂದೆಯ ಕೃಪೆಯಿಂದ ನೀವು ಗೆದ್ದಿದ್ರಿ. ಸಾತನೂರು ಎಲೆಕ್ಷನ್​​ ನೆನಪಿದೆಯಾ ಡಿಕೆಶಿ ಎಂದು ಹೆಚ್​ಡಿಕೆ ಪ್ರಶ್ನಿಸಿ, ನಮ್ಮ ಅಪ್ಪನ ಆಸ್ತಿ ಎಷ್ಟಿತ್ತು ಅಂತಾ ಕೇಳಿದ್ದೀರಿ. ನಾವು ನಿಮ್ಮಂತೆ ಊರುಗಳನ್ನು ಹಾಳು ಮಾಡಿ ಬೆಳೆದಿಲ್ಲ,
ನಾನು ಓದುವಾಗಲೇ 3 ಪಾಲಿಕೆ ಕಸದ ಲಾರಿ ಇಟ್ಟುಕೊಂಡಿದ್ದೆ ಎಂದಿದ್ದಾರೆ.

ಕೇತಗಾನಹಳ್ಳಿ ಭೂಮಿ ಸಿನಿಮಾದಿಂದ ದುಡಿದಿದ್ದು, ಕನಕಪುರದಲ್ಲಿ ಯಾವ ಗ್ರಾಮಕ್ಕೆ ಏನ್​ ಸ್ಥಿತಿ ತಂದಿದ್ದೀರಿ ನನಗೆ ಗೊತ್ತು. ನಾನು ಕೃಷಿ ಮಾಡಿಯೇ ದುಡಿಯುತ್ತಿದ್ದೇನೆ, ನನ್ನ ಆಸ್ತಿ ಬಗ್ಗೆ ಬಹಿರಂಗ ಚರ್ಚೆಗೆ ಮುಂದೆ ಬರೋಣಂತೆ. ಈಗ ಸರ್ಕಾರದ ಹಗರಣಗಳ ಬಗ್ಗೆ ಮಾತ್ನಾಡಿ ಎಂದು ಹೆಚ್​ಡಿಕೆ ಗುಡುಗಿದ್ದಾರೆ. ಹೆಚ್​ಡಿಕೆ ಜೊತೆ ಕಾಂಗ್ರೆಸ್​ ವಿರುದ್ಧ ಮಾಜಿ ಸಿಎಂ ಬಿಎಸ್​ವೈ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಜೈಲಿನಲ್ಲಿರೋ ದಾಸನನ್ನ ಎಷ್ಟು ಜನ ಭೇಟಿಯಾಗಿದ್ದಾರೆ, ಯಾರ‍್ಯಾರು ಗೊತ್ತಾ? – ಇಲ್ಲಿದೆ ಲಿಸ್ಟ್​​​..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here