ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದಾರೆ. 24ನೇ ಎಸಿಎಂಎಂ ನ್ಯಾಯಾಲಯ ಆಗಸ್ಟ್ 14ರ ವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿದ್ದು, ಈ ಹಿನ್ನೆಯಲ್ಲಿ ನಟ ದಿ ಗ್ಯಾಂಗ್ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ. ಸೆರೆಮನೆಯಲ್ಲಿರುವ ನಟ ದರ್ಶನ್ರನ್ನು ಕುಟುಂಬಸ್ಥರು, ಆಪ್ತರು, ಸ್ನೇಹಿತರು ಹಾಗೂ ನಟ -ನಟಿಯರು ಬಂದು ಭೇಟಿಯಾಗುತ್ತಿದ್ದಾರೆ.
ಜಸ್ಟ್ ಒಂದು ತಿಂಗಳಲ್ಲಿ ಜೈಲಿನಲ್ಲಿ ದರ್ಶನ್ ಎಷ್ಟು ಜನ ಭೇಟಿಯಾಗಿದ್ದಾರೆ ಗೊತ್ತಾ.? ಜೂನ್ 25 ರಿಂದ ಜುಲೈ 26ರ ಅವಧಿಯಲ್ಲಿ 30 ಜನ ಭೇಟಿಯಾಗಿದ್ದಾರೆ. ಆಗಾಗ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಒಟ್ಟು 30 ಮಂದಿಯನ್ನ ಬೇಟಿಯಾಗಿದ್ದಾರೆ. ಇದರಲ್ಲಿ ಪತ್ನಿ ವಿಜಯಲಕ್ಷ್ಮಿ ನಾಲ್ಕು ಬಾರಿ, ದರ್ಶನ್ ತಮ್ಮ ದಿನಕರ್ 3 ಸಲ, ತಾಯಿ ಮೀನಾ ಜುಲೈ 1 ರಂದು ದರ್ಶನ್ರನ್ನು ಭೇಟಿ ಮಾಡಿದ್ದಾರೆ. ದರ್ಶನ್ ಭೇಟಿ ಲಿಸ್ಟ್ ಆರ್ಟಿಐ ಅರ್ಜಿಯಲ್ಲಿ ಬೆಳಕಿಗೆ ಬಂದಿದೆ.
RTI ಅರ್ಜಿಯಲ್ಲಿ ದರ್ಶನ್ ಭೇಟಿ ಲಿಸ್ಟ್ ಬಹಿರಂಗ :
- ಜೂನ್ 24 ರಂದು ಪತ್ನಿ ವಿಜಯಲಕ್ಷ್ಮಿ ಭೇಟಿ.
- ಜೂನ್ 29 ನಟಿ ರಕ್ಷಿತಾ ಭೇಟಿ, ಸ್ನೇಹಿತೆ ಎಂದು ನಮೂದಿಸಿ ಭೇಟಿ.
- ಜುಲೈ 1ರಂದು ದರ್ಶನ್ ತಾಯಿ ಹಾಗೂ ತಮ್ಮ ದಿನಕರ್ ಭೇಟಿ.
- ಜುಲೈ 2 ರಂದು ಸಮತಾ ಭೇಟಿ, ಪುಸ್ತಕದಲ್ಲಿ ತಂಗಿ ಎಂದು ನಮೂದಿಸಿ ಭೇಟಿಯಾದ ಸಮತಾ.
- ಜುಲೈ 10 ರಂದು ಪತ್ನಿ ವಿಜಯಲಕ್ಷ್ಮಿ, ಮಗ, ಸುಶಾಂತ( co-brother), ಚಂದ್ರಶೇಖರ್ ಅಳಿಯ ಭೇಟಿ.
- ಜುಲೈ 11 ರಂದು ನಟ ಧನ್ವಿರ್, ಚಂದ್ರಶೇಖರ್, ನಾಗೇಶ್, ಸುನೀಲ್, ಶಿವಕುಮಾರ ಭೇಟಿ.
- ಜುಲೈ15 ರಂದು ಪತ್ನಿ ವಿಜಯಲಕ್ಷ್ಮಿ, ನಿತೀನ್, ದಿನಕರ್, ಅನುಶ್ ಶೆಟ್ಟಿ.
- ಜುಲೈ19 ರಂದು ದರ್ಶನ್ ಪುಟ್ಣಣ್ಣಯ್ಯ, ರಾಘವ, ತರುಣ್ ಕಿಶೋರ್, ಹೇಮಂತ, ನವೀನ, ಕಿರ್ತನ್, ಕುಮಾರ್ ಭೇಟಿ.
- ಜುಲೈ 22 ರಂದು ವಿನೋದ್, ದಿನಕರ್, ಸುಶಾಂತ ನಾಯ್ಡು, ಶ್ರೀನಿವಾಸ್, ವಿಜಯಲಕ್ಷ್ಮಿ ಭೇಟಿ.
- ಜುಲೈ 25 ರಂದು ಸಾಧುಕೋಕಿಲ, ಸಚ್ಚಿದಾನಂದ, ಹರಿಕೃಷ್ಣ, ರಾಮಮೂರ್ತಿ, ಭೋಜರಾಜ ಭೇಟಿ.
- ಒಟ್ಟು 30 ಮಂದಿಯಿಂದ ದರ್ಶನ್ ಭೇಟಿ.
- ಜೂನ್ -24 ರಿಂದ ಜುಲೈ 25ರ ಒಂದು ತಿಂಗಳ ಅವಧಿಯಲ್ಲಿ ಭೇಟಿ.
ಇದನ್ನೂ ಓದಿ : ‘ಡಬಲ್ ಇಸ್ಮಾರ್ಟ್’ ಚಿತ್ರದ ಟ್ರೇಲರ್ ಔಟ್ – ತೊಡೆ ತಟ್ಟಿದ ರಾಮ್ ಪೋತಿನೇನಿ, ಸಂಜಯ್ ದತ್..!