ಶ್ರೀವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ ಚೋಳದಗುಡ್ಡ ಕಥೆ ಬರೆದು ನಿರ್ಮಿಸಿರುವ, ನಾಗಿರೆಡ್ಡಿ ಭಡ ನಿರ್ದೇಶನದ ಹಾಗೂ “ಲವ್ 360” ಖ್ಯಾತಿಯ ಪ್ರವೀಣ್ ಕುಮಾರ್ ನಾಯಕನಾಗಿ ನಟಿಸಿರುವ “ದೇಸಾಯಿ” ಚಿತ್ರದ “ಒಲವು ಮೂಡುವ ಕಾಲವು” ಹಾಡನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ, ಚಿತ್ರದ ಟೀಸರ್ ಹಾಗೂ ಹಾಡು ತುಂಬಾ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ವಿಜಯ್ ಪ್ರಕಾಶ್ ಹಾಗೂ ಅನುರಾಧ ಭಟ್ ಈ ಹಾಡನ್ನು ಹಾಡಿದ್ದಾರೆ .
ಈ ವೇಳೆ ನಿರ್ಮಾಪಕ ಮಹಾಂತೇಶ್ ವಿ ಚೋಳಚಗುಡ್ಡ ಅವರು, “ಮೇಡಂ ಪುನೀತ್ ರಾಜಕುಮಾರ್ ಅವರನ್ನು ಈ ಚಿತ್ರದ ನಾಯಕರಾಗಿ ಮಾಡಬೇಕೆಂದು ನನಗೆ ಆಸೆಯಿತ್ತು” ಎಂಬ ವಿಷಯವನ್ನು ತಿಳಿಸಿದರು. ಚಿತ್ರದ ನಾಯಕ ಪ್ರವೀಣ್ ಕುಮಾರ್, ನಾಯಕಿ ರಾಧ್ಯ, ನಿರ್ದೇಶಕ ನಾಗಿರೆಡ್ಡಿ ಭಡ ಹಾಗೂ ಶೋಭಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಲವ್ 360″ ಖ್ಯಾತಿಯ ಪ್ರವೀಣ್ ಕುಮಾರ್, ರಾಧ್ಯ, “ಒರಟ” ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ : ರಾಜ್ಕುಮಾರ್ ಫ್ಯಾಮಿಲಿಯಲ್ಲಿ ಡಿವೋರ್ಸ್ ಬಿರುಗಾಳಿ – ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಯುವರಾಜ್ಕುಮಾರ್..!