Download Our App

Follow us

Home » ರಾಜ್ಯ » ರಾಜ್ಯದಲ್ಲಿ 10 ಸಾವಿರ ಗಡಿ ದಾಟಿದ ಡೆಂಘೀ ಪ್ರಕರಣ – ನಿನ್ನೆ ಒಂದೇ ದಿನ 487 ಮಂದಿಯಲ್ಲಿ ಡೆಂಘೀ ಪತ್ತೆ..!

ರಾಜ್ಯದಲ್ಲಿ 10 ಸಾವಿರ ಗಡಿ ದಾಟಿದ ಡೆಂಘೀ ಪ್ರಕರಣ – ನಿನ್ನೆ ಒಂದೇ ದಿನ 487 ಮಂದಿಯಲ್ಲಿ ಡೆಂಘೀ ಪತ್ತೆ..!

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಡೆಂಘೀಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ವರ್ಷದಲ್ಲಿ ಇಲ್ಲಿಯವರೆಗೂ 10,000 ಪ್ರಕರಣಗಳು ದೃಢಪಟ್ಟಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 487 ಡೆಂಘೀ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದರೊಂದಿಗೆ ಜನವರಿಯಿಂದ ಇಲ್ಲಿಯವರೆಗೂ ದೃಢಪಟ್ಟ ಪ್ರಕರಣಗಳ ಸಂಖ್ಯೆ 10,449ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 10,449 ಪಾಸಿಟಿವ್ ಪ್ರಕರಣಗಳ ಪೈಕಿ 358 ಸಕ್ರಿಯ ಪ್ರಕರಣಗಳಾಗಿವೆ. ಈವರೆಗೆ ರಾಜ್ಯದಲ್ಲಿ ಡೆಂಘೀಯಿಂದಾಗಿ 8 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಬಿಬಿಎಂಪಿ ವ್ಯಾಪ್ತಿಯಲ್ಲಿ 3,770 ಪ್ರಕರಣಗಳು, ಚಿಕ್ಕಮಗಳೂರಿನಲ್ಲಿ 621, ಮೈಸೂರಿನಲ್ಲಿ 562 ಪ್ರಕರಣ ವರದಿಯಾಗಿದೆ.

ಇಲ್ಲಿಯವರೆಗೂ 1 ವರ್ಷದೊಳಗಿನ 179 ಮಕ್ಕಳಲ್ಲಿ ಡೆಂಘೀ ದೃಢವಾಗಿದೆ. 18 ವರ್ಷ ಮೇಲ್ಪಟ್ಟ 6635 ಮಂದಿಗೆ ಡೆಂಘೀ ಜ್ವರ ತಗುಲಿದೆ. BBMP ವ್ಯಾಪ್ತಿಯಲ್ಲಿ ಡೆಂಘೀ ಕೇಸ್​ 3000 ಗಡಿ ದಾಟಿದ್ದು,
ಕಳೆದ 24 ಗಂಟೆಯಲ್ಲಿ ಬೆಂಗಳೂರಲ್ಲೇ 283 ಕೇಸ್ ಪತ್ತೆಯಾಗಿದೆ.

ಡೆಂಘೀ ಹರಡದಂತೆ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಮುಂಗಾರು ಅವಧಿ ಮುಗಿಯುವವರೆಗೂ ಮುಂದಿನ 2 ತಿಂಗಳ ಕಾಲ ಪ್ರತಿಯೊಬ್ಬರು ಮುಂಜಾಗ್ರತೆ ವಹಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಜನರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಭಾರೀ ವರ್ಷಧಾರೆಗೆ ಉಡುಪಿಯಲ್ಲಿ ಕೃಷಿಭೂಮಿಗಳು ಜಲಾವೃತ – ತಗ್ಗು ಪ್ರದೇಶಗಳಿಗೆ ಪ್ರವಾಹ ಭೀತಿ..!

 

 

 

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಆನ್​ಲೈನ್​ ಗೇಮ್​​ಗಾಗಿ ​​​ಅಣ್ಣನ ಮದುವೆಗಿಟ್ಟಿದ್ದ ಚಿನ್ನಾಭರಣ ಕದ್ದ ತಮ್ಮ ಅರೆಸ್ಟ್​​..!

ಬೆಂಗಳೂರು : ಆನ್​ಲೈನ್ ರಮ್ಮಿ ಗೇಮ್​​ನಿಂದ ಸೋತ ತಮ್ಮ ತನ್ನ ಅಣ್ಣನ ಮದುವೆಗಾಗಿ ಇಟ್ಟಿದ್ದ ಚಿನ್ನಾಭರಣ ಕದ್ದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ

Live Cricket

Add Your Heading Text Here