ಬೆಂಗಳೂರು : ಆನ್ಲೈನ್ ರಮ್ಮಿ ಗೇಮ್ನಿಂದ ಸೋತ ತಮ್ಮ ತನ್ನ ಅಣ್ಣನ ಮದುವೆಗಾಗಿ ಇಟ್ಟಿದ್ದ ಚಿನ್ನಾಭರಣ ಕದ್ದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದಿತ್ಯ ಬಂಧಿತ ಆರೋಪಿ.
ಊಬರ್ ಚಾಲಕನಾಗಿದ್ದ ಆದಿತ್ಯ ವಿಪರೀತ ಆನ್ಲೈನ್ ಗೇಮ್ ಚಟಕ್ಕೆ ಬಿದ್ದಿದ್ದನು. ಮನೆಯಲ್ಲಿದ್ದ ಎಲ್ಲರೂ ಮದುವೆ ಕಾರ್ಡ್ ಹಂಚಲು ಕೋಲಾರ ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ಕದ್ದ ತಮ್ಮ ಆದಿತ್ಯ ಆಂಧ್ರಪ್ರದೇಶಕ್ಕೆ ಟ್ರೈನ್ ಹತ್ತಿದ್ದಾನೆ.
ಇನ್ನು ಮನೆಗೆ ಬಂದ ಅಣ್ಣನಿಗೆ ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ ಮತ್ತು ಹಣ ಕಣ್ಮರೆಯಾಗಿರೋದನ್ನು ಕಂಡು ಅನುಮಾನ ಬಂದಿದೆ. ಕೊನೆಗೆ ಪೋಷಕರು ಆದಿತ್ಯನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸರು ಕೂಡಲೇ ಟವರ್ ಡಂಪ್ ಲೊಕೇಷನ್ ಆಧರಿಸಿ ಆರೋಪಿ ಬಂಧಿಸಿದ್ದಾರೆ. ಇನ್ನು ಬಂಧಿತ ಆರೋಪಿಯಿಂದ ಪೊಲೀಸರು 7 ಲಕ್ಷ ಬೆಲೆ ಬಾಳುವ 100 ಗ್ರಾಂ ಬೆಳ್ಳಿ 102 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಕೃತಿ ಶೆಟ್ಟಿಗೆ ರಕ್ಷಿತ್ ಶೆಟ್ಟಿ ಮೇಲೆ ಕ್ರಶ್ ಆಯ್ತಾ? ಶೆಟ್ರ ಸ್ಟೈಲ್ ಆಫ್ ಆ್ಯಕ್ಟಿಂಗ್ ಇಷ್ಟ ಎಂದ ನಟಿ..!