Download Our App

Follow us

Home » ಅಪರಾಧ » ಕಲಬುರಗಿ : ಹಣಕ್ಕೆ ಬೇಡಿಕೆ ಇಟ್ಟು ಬೆತ್ತಲೆ ಮಾಡಿ ಹ*ಲ್ಲೆಗೈದ ಪಾಪಿಗಳು ಅರೆಸ್ಟ್..!

ಕಲಬುರಗಿ : ಹಣಕ್ಕೆ ಬೇಡಿಕೆ ಇಟ್ಟು ಬೆತ್ತಲೆ ಮಾಡಿ ಹ*ಲ್ಲೆಗೈದ ಪಾಪಿಗಳು ಅರೆಸ್ಟ್..!

ಕಲಬುರಗಿ : ಹಣಕ್ಕಾಗಿ ಬೇಡಿಕೆ ಇಟ್ಟು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿಯ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮಾಡಿ ಘನಘೋರವಾಗಿ ಚಿತ್ರಹಿಂಸೆ ನೀಡಿರುವ ಘಟನೆ ಕಲಬುರ್ಗಿ ನಗರದ ಹಾಗರಗಾ ಕ್ರಾಸ್​ ಬಳಿಯ ಮನೆಯೊಂದರಲ್ಲಿ ನಡೆದಿದೆ.

ಜಿಲ್ಲೆಯ ಸೇಡಂ ತಾಲೂಕಿನ ದೇವನೂರು ನಿವಾಸಿ ಅರ್ಜುನ್​​ ಮಡಿವಾಳ ಸೇರಿದಂತೆ ಮೂವರ ಮೇಲೆ ಇಮ್ರಾನ್​ ಪಟೇಲ್​, ಮಹಮ್ಮದ್ ಮತೀನ್​ ಸೇರಿ ಹಲವು ದುಷ್ಕರ್ಮಿಗಳು ಹಲ್ಲೆ ಮಾಡಿ ಹಣ ಹಾಕಿಸಿಕೊಂಡು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಕಲಬುರಗಿ ನಗರದ ಹಾಗರಹಾ ಕ್ರಾಸ್​ ಬಳಿಯ ಮನೆಯ ಬಳಿ ರಮೇಶ್​ ಎಂಬಾತನಿಗೆ ಸೆಕೆಂಡ್​ ಹ್ಯಾಂಡ್​ ಕಾರು ತೋರಿಸಲು ಬಂದಾಗ ಈ ಮೂವರನ್ನು ಕೂಡಿಹಾಕಿದ ಇಮ್ರಾನ್​ ಪಟೇಲ್​, ಮಹಮ್ಮದ್ ಮತೀನ್​ ಗ್ಯಾಂಗ್​ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿ ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟು ಹಣಪಡೆದಿದ್ದಾರೆ. ಬಳಿಕ ಮತ್ತಷ್ಟು ಹಣ ನೀಡುವಂತೆ ಒತ್ತಡಹಾಕಿ ಮರ್ಮಾಂಗಕ್ಕೆ ವಿದ್ಯುತ್​ ಶಾಕ್​ ಕೊಟ್ಟು, ಉಲ್ಟಾ ಮಲಗಿಸಿ ದೊಣ್ಣೆಯಿಂದ ಹೊಡೆದು, ಕುತ್ತಿಗೆ ಮೇಲೆ ಕಾಲಿಟ್ಟು ಟಾರ್ಚರ್ ನೀಡಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಕಲಬುರ್ಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ಟೀಸರ್​​​​ನಲ್ಲಿಯೇ ಕುತೂಹಲ ಕೆರಳಿಸಿದ ರೂಪೇಶ್ ಶೆಟ್ಟಿ ನಟನೆಯ ‘ಅಧಿಪತ್ರ’ ಸಿನಿಮಾ..!

Leave a Comment

RELATED LATEST NEWS

Top Headlines

Live Cricket

Add Your Heading Text Here