Download Our App

Follow us

Home » ಸಿನಿಮಾ » ಇನ್​ಸ್ಟಾದಲ್ಲಿ ಪ್ರೊಫೈಲ್ ​ಪಿಕ್ಚರ್​ ಡಿಲೀಟ್ ಮಾಡಿ, ದರ್ಶನ್​ನ​ ಅನ್​ಫಾಲೋ ಮಾಡಿದ ಪತ್ನಿ ವಿಜಯಲಕ್ಷ್ಮಿ..!

ಇನ್​ಸ್ಟಾದಲ್ಲಿ ಪ್ರೊಫೈಲ್ ​ಪಿಕ್ಚರ್​ ಡಿಲೀಟ್ ಮಾಡಿ, ದರ್ಶನ್​ನ​ ಅನ್​ಫಾಲೋ ಮಾಡಿದ ಪತ್ನಿ ವಿಜಯಲಕ್ಷ್ಮಿ..!

ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಅನ್ನೋ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕರೆಸಿ ಹಲ್ಲೆ ಮಾಡಿ ಹತ್ಯೆಗೈದಿರೋ ಆರೋಪ ಕೇಳಿಬಂದಿದೆ. ಈ ಕೇಸ್‌ನಲ್ಲಿ ನಟ ದರ್ಶನ್ ಸೇರಿ 13 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಪೊಲೀಸರು ಟೆಕ್ನಿಕಲ್ ಎವೆಡೆನ್ಸ್ ಕಲೆ ಹಾಕ್ತಿದ್ದು ಅದರ ಆಧಾರದಲ್ಲಿ ಪ್ರಕರಣದ ತನಿಖೆ ಶುರು ಮಾಡಿದ್ದಾರೆ.

ಈ ಬೆನ್ನಲ್ಲೇ ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮೌನ ವಹಿಸಿದ್ದಾರೆ. ಈ ಘಟನೆ ಬಳಿಕ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ. ಹೀಗಿರುವಾಗಲೇ ವಿಜಯಲಕ್ಷ್ಮಿ ಅವರು ಇನ್​ಸ್ಟಾಗ್ರಾಮ್​ ಪ್ರೊಫೈಲ್​​​ ​ಫೋಟೋನ ಡಿಲೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ನಟ ದರ್ಶನ್  ಅವರನ್ನು ಅನ್​ಫಾಲೋ ಮಾಡಿದ್ದಾರೆ. ಈ ನಡೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ.

ನಿನ್ನೆ ದರ್ಶನ್ ಸುದ್ದಿ ಕೇಳಿ ವಿಜಯಲಕ್ಷ್ಮಿ ಮನಸ್ಸಿಗೆ ತುಂಬಾ ಅಘಾತವಾಗಿತ್ತು. ಪದೇ ಪದೇ ಏನಾಗ್ತಿದೆ ಅಂತ ಟಿವಿ ನೋಡಿ ವಿಜಯಲಕ್ಷ್ಮಿ ಅಪ್ ಡೇಟ್ ತೆಗೆದುಕೊಳ್ತಿದ್ರಂತೆ. ಮಗನಿಗೆ ಈ ವಿಷಯ ಗೊತ್ತಾಗಬಾರದು ಅಂತಾ ಕ್ಲೋಸ್ ಸರ್ಕಲ್​ನಲ್ಲಿ ಹೇಳಿದ್ರು. ವಿಜಯ ಲಕ್ಷ್ಮಿ ನಿನ್ನೆಯಿಂದ ಅಳುತ್ತಾ ಕುಳಿತ್ತಿದ್ದರು. ಮಗನಿಗೋಸ್ಕರ ಬದುಕುತ್ತೇನೆ ಅಂತ ಹೇಳಿಕೊಂಡಿದ್ದಾರಂತೆ. ಇದೀಗ ಪವಿತ್ರಾಗಾಗಿ ದರ್ಶನ್​​​ ಕೊಲೆ ಮಾಡಿದರು ಎನ್ನುವ ಕಾರಣಕ್ಕೆ ವಿಜಯಲಕ್ಷ್ಮಿ ಬೇಸರಗೊಂಡಿದ್ದಾರೆ. ಇದೇ ಕಾರಣಕ್ಕೆ ಇನ್​ಸ್ಟಾಗ್ರಾಮ್​ನಲ್ಲಿ ಪತಿ ದರ್ಶನ್ ಸೇರಿ ಎಲ್ಲರೂನ್ನು ಅನ್​ಫಾಲೋ ಮಾಡಿದ್ದಾರೆ.

ಇದನ್ನೂ ಓದಿ : ನನ್ನ ಮಗನನ್ನು ಕೊಂದ ದರ್ಶನ್​​ ಕೂಡಾ ಸಾಯಬೇಕು : ರೇಣುಕಾಸ್ವಾಮಿ ತಾಯಿ ಹಿಡಿಶಾಪ..!

 

 

 

 

 

Leave a Comment

DG Ad

RELATED LATEST NEWS

Top Headlines

ಬೇನಾಮಿ, ನಕಲಿ ವ್ಯಕ್ತಿಗಳ ಹೆಸರಲ್ಲಿ ಮುಡಾ ಸೈಟ್ ಹಂಚಿಕೆ.. 300 ಕೋಟಿ ಆಸ್ತಿ ಜಪ್ತಿ – ಇಡಿ ಹೇಳಿದ್ದೇನು?

ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನ ಜಪ್ತಿ ಮಾಡಿದೆ. ಮೈಸೂರು ಲೋಕಾಯುಕ್ತ ದಾಖಲಿಸಿದ FIR

Live Cricket

Add Your Heading Text Here