ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಲಾಕ್ ಆಗಿದ್ದ ನಟ ದರ್ಶನ್ ಈಗ ಆಸ್ಪತ್ರೆ ಪಾಲಾಗಿದ್ದಾರೆ. ಬೆನ್ನುನೋವು ಅಂತ ಮಧ್ಯಂತರ ಜಾಮೀನು ಪಡೆದು ಅದರ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದರ್ಶನ್ಗೆ ಬೆನ್ನುನೋವು ಹೆಚ್ಚಾಗಿರುವುದರಿಂದ ವೈದ್ಯರು ಸಾಲುಸಾಲು ಟೆಸ್ಟ್ಗಳನ್ನು ಮಾಡಿದ್ದಾರೆ. ಅದರ ರಿಪೋರ್ಟ್ಗಳು ಒಂದೊಂದಾಗಿ ವೈದ್ಯರ ಕೈ ಸೇರ್ತಿದೆ. ಎಲ್ಲದರ ರಿಪೋರ್ಟ್ ಇಂದು ಸಂಜೆ ಒಳಗೆ ಡಾ.ನವೀನ್ ಅಪ್ಪಾಜಿ ಗೌಡ ನೇತೃತ್ವದ ತಜ್ಞ ವೈದ್ಯರ ತಂಡದ ಕೈ ಸೇರಲಿದೆ.
ಆ ಬಳಿಕವೇ ದರ್ಶನ್ ಅವರಿಗೆ ಯಾವ ರೀತಿ ಚಿಕಿತ್ಸೆ ಕೊಡ್ಬೇಕು ಎಂದು ತೀರ್ಮಾನಿಸಲಾಗುತ್ತದೆ. ನಂತರ ವಿಶ್ರಾಂತಿ ಎಷ್ಟು ದಿನ ಬೇಕೆಂದು ವೈದ್ಯರು ತಯಾರಿಸೋ ವರದಿಯನ್ನ ಕೋರ್ಟ್ಗೆ ದರ್ಶನ್ ಪರ ವಕೀಲರು ಸಲ್ಲಿಸಲಿದ್ದಾರೆ.
ಸದ್ಯ ದರ್ಶನ್ ಅವರನ್ನ ನೋಡಲು ಏಳು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ನಿನ್ನೆ ದರ್ಶನ್ ಆಪ್ತರಾದ ನಟ ಧನ್ವಿರ್ ಹಾಗೂ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವ್ರ ಆರೋಗ್ಯ ವಿಚಾರಿಸಿದ್ದಾರೆ. ಅಲ್ದೇ ವೈದ್ಯರ ಜೊತೆ ಚರ್ಚೆ ಕೂಡ ಮಾಡಿದ್ದಾರೆ.
ಇದನ್ನೂ ಓದಿ : ಇಂದು ಹಾಸನಾಂಬೆ ದೇವಿ ದರ್ಶನಕ್ಕೆ ವಿದ್ಯುಕ್ತ ತೆರೆ.. ಮಧ್ಯಾಹ್ನ ದೇಗುಲದ ಬಾಗಿಲು ಬಂದ್..!