ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನೋತ್ಸವಕ್ಕೆ ಇಂದು ಮುಂಜಾನೆ ತೆರೆಬಿದ್ದಿದೆ. ಅಶ್ವೀಜ ಮಾಸದ ಮೊದಲನೇ ಗುರುವಾರ ಹಾಸನಾಂಬೆ ಗರ್ಭಗುಡಿಯ ಬಾಗಿಲು ತೆರೆದ್ರೆ, ನಂತರ ಬಲಿಪಾಡ್ಯಮಿಯ ಮಾರನೇಯ ದಿನ ದೇಗುಲವನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಗುತ್ತೆ. ನೂರಾರು ವರ್ಷಗಳ ಇತಿಹಾಸವಿರೋ ಹಾಸನಾಂಬೆ ದೇಗುಲದ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಬಂದ್ ಆಗಲಿದೆ.
ಕಳೆದ 10 ದಿನಗಳಿಂದ ನಡೆದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿದೆ. ಅಕ್ಟೋಬರ್ 24ರಂದು ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿತ್ತು. 2ನೇ ದಿನದಿಂದ ಅಂದ್ರೆ ಅಕ್ಟೋಬರ್ 25ರಿಂದ ಇವತ್ತು ಮುಂಜಾನೆ 4 ಗಂಟೆವರೆಗೂ ಭಕ್ತರು ಹಾನಸಾಂಬೆಯ ದರ್ಶನ ಪಡೆದಿದ್ದಾರೆ. ಕೇಂದ್ರ, ರಾಜ್ಯ ನಾಯಕರು ಹಾಗೂ ಹೊರ ರಾಜ್ಯಗಳ ಭಕ್ತರೂ ದೇವಿಯ ದರ್ಶನಕ್ಕೆ ಬಂದಿದ್ದರು.
ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ 11 ಲಕ್ಷಕ್ಕೂ ಅಧಿಕ ಭಕ್ತರು ಭಾಗಿಯಾಗಿ ದೇವಿಯ ದರ್ಶನ ಪಡೆದಿದ್ದಾರೆ. ಒಂದಷ್ಟು ಗೊಂದಲಗಳನ್ನು ಬಿಟ್ಟರೆ ಹಾಸನಾಂಬೆಯ ಜಾತ್ರೋತ್ಸವ ಅದ್ಧೂರಿಯಾಗಿ ನಡೆದಿದೆ. ತಾಯಿಯ ಗರ್ಭಗುಡಿ ಬಾಗಿಲು ಹಾಕಲು ಕ್ಷಣಗಣನೆ ಆರಂಭವಾಗಿದ್ದು, ಹಾಸನಾಂಬೆ ನಾಡಿಗೆ ಒಳಿತು ಮಾಡಲಿ ಅನ್ನೋದು ಅಸಂಖ್ಯ ಭಕ್ತರ ಕೋರಿಕೆ.
ಇದನ್ನೂ ಓದಿ : ಕೈ-ಕಮಲದ ನಡುವೆ ಮುಂದುವರೆದ ವಕ್ಫ್ ವಾರ್ - ಚಾರ್ಜ್ಶೀಟ್ ಬಿಟ್ಟ ವಿಜಯೇಂದ್ರಗೆ ಸಿದ್ದು ಸರಣಿ ಗುದ್ದು..!