Download Our App

Follow us

Home » ಸಿನಿಮಾ » ದರ್ಶನ್ ಸರ್ಜರಿ ಭವಿಷ್ಯ ಇಂದೇ ನಿರ್ಧಾರ.. ದಾಸನ​ ಆರೋಗ್ಯ ಸ್ಥಿತಿ ಈಗ ಹೇಗಿದೆ?

ದರ್ಶನ್ ಸರ್ಜರಿ ಭವಿಷ್ಯ ಇಂದೇ ನಿರ್ಧಾರ.. ದಾಸನ​ ಆರೋಗ್ಯ ಸ್ಥಿತಿ ಈಗ ಹೇಗಿದೆ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಲಾಕ್ ಆಗಿದ್ದ ನಟ ದರ್ಶನ್ ಈಗ ಆಸ್ಪತ್ರೆ ಪಾಲಾಗಿದ್ದಾರೆ. ಬೆನ್ನುನೋವು ಅಂತ ಮಧ್ಯಂತರ ಜಾಮೀನು ಪಡೆದು ಅದರ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದರ್ಶನ್​​ಗೆ ಬೆನ್ನುನೋವು ಹೆಚ್ಚಾಗಿರುವುದರಿಂದ ವೈದ್ಯರು ಸಾಲುಸಾಲು ಟೆಸ್ಟ್​​ಗಳನ್ನು​ ಮಾಡಿದ್ದಾರೆ. ಅದರ ರಿಪೋರ್ಟ್​ಗಳು ಒಂದೊಂದಾಗಿ ವೈದ್ಯರ ಕೈ ಸೇರ್ತಿದೆ. ಎಲ್ಲದರ ರಿಪೋರ್ಟ್ ಇಂದು ಸಂಜೆ ಒಳಗೆ ಡಾ.ನವೀನ್ ಅಪ್ಪಾಜಿ ಗೌಡ ನೇತೃತ್ವದ ತಜ್ಞ ವೈದ್ಯರ ತಂಡದ ಕೈ ಸೇರಲಿದೆ.

ಆ ಬಳಿಕವೇ ದರ್ಶನ್​ ಅವರಿಗೆ ಯಾವ ರೀತಿ ಚಿಕಿತ್ಸೆ ಕೊಡ್ಬೇಕು ಎಂದು ತೀರ್ಮಾನಿಸಲಾಗುತ್ತದೆ. ನಂತರ ವಿಶ್ರಾಂತಿ ಎಷ್ಟು ದಿನ ಬೇಕೆಂದು ವೈದ್ಯರು ತಯಾರಿಸೋ ವರದಿಯನ್ನ ಕೋರ್ಟ್​ಗೆ ದರ್ಶನ್​ ಪರ ವಕೀಲರು ಸಲ್ಲಿಸಲಿದ್ದಾರೆ.

ಸದ್ಯ ದರ್ಶನ್ ಅವರನ್ನ ನೋಡಲು ಏಳು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ನಿನ್ನೆ ದರ್ಶನ್​ ಆಪ್ತರಾದ ನಟ ಧನ್ವಿರ್​ ಹಾಗೂ ಪತ್ನಿ ವಿಜಯಲಕ್ಷ್ಮೀ ದರ್ಶನ್​ ಅವ್ರ ಆರೋಗ್ಯ ವಿಚಾರಿಸಿದ್ದಾರೆ. ಅಲ್ದೇ ವೈದ್ಯರ ಜೊತೆ ಚರ್ಚೆ ಕೂಡ ಮಾಡಿದ್ದಾರೆ.

ಇದನ್ನೂ ಓದಿ : ಇಂದು ಹಾಸನಾಂಬೆ ದೇವಿ ದರ್ಶನಕ್ಕೆ ವಿದ್ಯುಕ್ತ ತೆರೆ.. ಮಧ್ಯಾಹ್ನ ದೇಗುಲದ ಬಾಗಿಲು ಬಂದ್..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here