Download Our App

Follow us

Home » ಅಪರಾಧ » ರೇಣುಕಾಸ್ವಾಮಿ‌ ಹ*ತ್ಯೆ ಬೆನ್ನಲ್ಲೇ 6 ವರ್ಷದ ಹಿಂದೆ ನಾಪತ್ತೆಯಾದ ದರ್ಶನ್​ ಮ್ಯಾನೇಜರ್​ ಮಲ್ಲಿಕಾರ್ಜುನ ಬರೆದ ಪತ್ರ ವೈರಲ್​? ಏನಿದೆ ಇದರಲ್ಲಿ?

ರೇಣುಕಾಸ್ವಾಮಿ‌ ಹ*ತ್ಯೆ ಬೆನ್ನಲ್ಲೇ 6 ವರ್ಷದ ಹಿಂದೆ ನಾಪತ್ತೆಯಾದ ದರ್ಶನ್​ ಮ್ಯಾನೇಜರ್​ ಮಲ್ಲಿಕಾರ್ಜುನ ಬರೆದ ಪತ್ರ ವೈರಲ್​? ಏನಿದೆ ಇದರಲ್ಲಿ?

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಮತ್ತವರ ಗ್ಯಾಂಗ್ ಕಂಬಿ ಹಿಂದೆ ಬಂಧಿಯಾಗಿದೆ. ಈ ಕೇಸ್ ತೀವ್ರ ಸಂಚಲನ ಸೃಷ್ಟಿಸಿರುವಾಗ ಪೊಲೀಸರ ತನಿಖೆಯು ಚುರುಕಾಗಿದ್ದು, ವಿಚಾರಣೆ ವೇಳೆ ಕೇಸ್​​ಗೆ ಸಂಬಂಧಿಸಿದಂತೆ ದಿನಕ್ಕೊಂದು ಸ್ಫೋಟಕ ಅಂಶ ಹೊರಗೆ ಬೀಳುತ್ತಿದೆ.

ಹೀಗಿರುವಾಗಲೇ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ ದರ್ಶನ್​ ಅವರ ಬಗ್ಗೆ ವಿಚಾರಿಸುವ ವೇಳೆ ಅವರ ಮ್ಯಾನೇಜರ್​ ಆಗಿದ್ದಂಥ ಮಲ್ಲಿಕಾರ್ಜುನ​ ಅವರು ನಿಗೂಢ ಕಣ್ಮರೆಯಾಗಿರುವ ವಿಷಯವೂ ಹೊರಬಂದಿದೆ. ಇದೀಗ ದರ್ಶನ್‌ ಅವರ ಹಳೇ ಮಾನ್ಯೇಜರ್‌ ನಾಪತ್ತೆ ಪ್ರಕರಣವೂ ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.

2018ರಿಂದಲೂ ನಾಪತ್ತೆಯಾಗಿರುವ ಈ ಮ್ಯಾನೇಜರ್​ಗೂ ದರ್ಶನ್​ ಮತ್ತು ಅವರ ಗ್ಯಾಂಗ್​ಗೂ ಸಂಬಂಧವಿದೆಯೇ ಎನ್ನುವ ನಿಟ್ಟಿನಲ್ಲಿ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಈ ಹೊತ್ತಿನಲ್ಲೇ, ಈ ಹಿಂದೆ ಮಲ್ಲಿಕಾರ್ಜುನ ಅವರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಈ ಪತ್ರದ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.

ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ಪತ್ರದಲ್ಲಿ,  ಪ್ರೀತಿಯ ತೇಜಸ್ವಿನಿಗೆ , ಮೊದಲನೆಯದಾಗಿ ದಯವಿಟ್ಟು ನನ್ನನ್ನು ಕ್ಷಮಿಸು.  ನಾನು ನನ್ನ ವೈಯಕ್ತಿಕ ವ್ಯವಹಾರಕ್ಕಾಗಿ ತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇನೆ. ನನ್ನ ಈ ಕೆಲಸದಿಂದ ನಾನು ಯಾರಿಗೂ ಮುಖ ತೋರಿಸದ ಪರಿಸ್ಥಿತಿಯಲ್ಲಿದ್ದೇನೆ. ಆದ ಕಾರಣ ನಾನು ಎಲ್ಲೋ ಕಷ್ಟಪಟ್ಟು ದುಡಿದು ವಾಪಸ್​ ಬಂದು ಸಾಲ ತೀರಿಸಿ ನನಗಂಟಿರೋ ಕಳಂಕನಾ ಹೋಗಲಾಡಿಸಿ ಮತ್ತೆ ಧೈರ್ಯವಾಗಿ ತಲೆಯೆತ್ತಿ ಎಲ್ಲರ ಮುಂದೆ ಜೀವನ ನಡೆಸುಬೇಕೆಂದುಕೊಂಡಿದ್ದೇನೆ. ಅಲ್ಲಿಯವರೆಗೆ ನಿಮ್ಮ ಎದುರಿಗೆ ಬರುವ ಶಕ್ತಿ ನನಗಿಲ್ಲ. ನನ್ನನ್ನು ಯಾವುದೇ ಕಾರಣಕ್ಕೂ ಹುಡುಕುವ ಪ್ರಯತ್ನ ಮಾಡಬೇಡಿ. ನನ್ನ ಈ ಸಮಸ್ಯೆಯಿಂದ ನಿನ್ನನ್ನು, ಮಗನನ್ನು ಹಾಗೂ ಮನೆಯವರನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದೊದಗಿದೆ . ದಯವಿಟ್ಟು ನನ್ನನ್ನು ಕ್ಷಮಿಸಿ. ಇಂತಿ ನಿಮ್ಮ ಪ್ರೀತಿಯ ಮಲ್ಲಿಕಾರ್ಜುನ ಎಂದು ಬರೆದು ಸಹಿ ಹಾಕಲಾಗಿದೆ.

ಆದರೆ ಈ ಪತ್ರ ಮಲ್ಲಿಕಾರ್ಜುನ ಅವರು ಬರೆದದ್ದೇ ಎಂದು ಸ್ಪಷ್ಟನೆ ಇಲ್ಲ. ಒಟ್ಟಿನಲ್ಲಿ ಈ ಪತ್ರವಂತೂ ಸೋಷಿಯಲ್​  ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ. ಮಲ್ಲಿಕಾರ್ಜುನ ಅವರು, 2011ರಿಂದಲೂ ದರ್ಶನ್ ಮ್ಯಾನೇಜರ್ ಆಗಿದ್ದರು. ಅರ್ಜುನ್ ಸರ್ಜಾ ನಿರ್ಮಾಣದ ಪ್ರೇಮಬರಹ ಚಿತ್ರದ ವಿತರಣೆಯಲ್ಲಿ ವಂಚನೆ ಆರೋಪ ಎದುರಿಸಿದ್ದರು.

ಈ ಬಗ್ಗೆ ಅರ್ಜುನ್​ ಸರ್ಜಾ ದೂರು ನೀಡಿ, ತಮಗೆ ಒಂದು ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದಿದ್ದರು. ಈ ಘಟನೆ ಬಳಿಕ ದರ್ಶನ್​ ಅವರು  ಮಲ್ಲಿಕಾರ್ಜುನ ಮೇಲೆ ಗರಂ ಆಗಿದ್ದರು ಎನ್ನಲಾಗಿದೆ. ಇದಾದ ನಂತರ  ಮಲ್ಲಿಕಾರ್ಜುನ 2018ರಲ್ಲಿ ನಾಪತ್ತೆಯಾಗಿದ್ದರು. ಅಷ್ಟೇ ಅಲ್ಲದೇ ಇವರ ಮೇಲೆ ಇನ್ನೂ ವಂಚನೆ ಆರೋಪಗಳು ಇದ್ದವು. ದರ್ಶನ್‌ಗೆ ಸೇರಿದ 10 ಕೋಟಿ ಹಣ ವಂಚನೆ ಮಾಡಿದ್ದಾಗಿಯೂ ಆರೋಪಿಸಲಾಗಿತ್ತು. ಇದೀಗ ಅವರ ನಾಪತ್ತೆ ಪ್ರಕರಣ ಮಹತ್ವ ತಿರುವು ಪಡೆದುಕೊಳ್ಳುತ್ತಿದೆ.

ಇದನ್ನು ಓದಿ : ಪವಿತ್ರಗೌಡ ಮನೆಯಲ್ಲೇ ವಾಸವಿದ್ದ ರೇಣುಕಾಸ್ವಾಮಿ ಕೊ*ಲೆ ಕೇಸ್​​ ಆರೋಪಿ ಪವನ್​​..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here