ಬೆಂಗಳೂರು : ರೇಣುಕಾಸ್ವಾಮಿ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರು ಮಹಜರು ನಡೆಸುತ್ತಿದ್ದಾರೆ. ಇದೀಗ ಪವಿತ್ರಗೌಡ ಮನೆಯಲ್ಲೇ ಪವನ್ ವಾಸವಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಪವಿತ್ರಗೌಡ ಸುಮಾರು 10 ವರ್ಷದಿಂದ ಮೂರು ಫ್ಲೋರ್ನ ಡುಪ್ಲೆಕ್ಸ್ ಮನೆಯಲ್ಲಿ ವಾಸವಿದ್ದರು. ಕೆಳಗೆ ಪಾರ್ಕಿಂಗ್ ಜಾಗ, ಅಲ್ಲೇ ವಾಸವಿದ್ದ ಪವನ್ ಪವಿತ್ರ ಗೌಡ ಮನೆಯ ನಾಯಿಯನ್ನು ನೋಡಿಕೊಳ್ತಿದ್ದನು.
ಕಟ್ಟಿರುವ ಮನೆಯನ್ನೇ ಪವಿತ್ರಗೆ ಖರೀದಿಸಿ ನೀಡಿದ್ದ ದರ್ಶನ್ ಆಗಾಗ ಫಾರ್ಚುನರ್ ಕಾರಿನಲ್ಲಿ ಹೋಗ್ತಿದ್ದರಂತೆ. ಆದರೆ ಪವಿತ್ರಗೆ ಅಕ್ಕ-ಪಕ್ಕ ಮನೆಯವರ ಜೊತೆ ಸಂಪರ್ಕವೇ ಇರಲಿಲ್ಲ.
ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರಿನಲ್ಲಿ ಪವಿತ್ರ ಓಡಾಡ್ತಿದ್ದರು. ಹಾಸ್ಟೆಲ್ನಲ್ಲಿದ್ದ ಪವಿತ್ರ ಪುತ್ರಿ ಆಗಾಗ ಬಂದು ಹೋಗ್ತಿದ್ದರು ಎಂದು ಪೊಲೀಸ್ ಸ್ಥಳ ಮಹಜರ್ ವೇಳೆ ಸ್ಥಳೀಯರು ಮಾತ್ನಾಡಿಕೊಳ್ತಿದ್ದರು ಎನ್ನಲಾಗಿದೆ.
ಇನ್ನು ರೇಣುಕಾಸ್ವಾಮಿ ಮರ್ಡರ್ ಕೇಸ್ಗೆ ಸಂಬಂಧಿಸಿದ್ದಂತೆ ಪೊಲೀಸರು ಪವಿತ್ರಾ ಗೌಡ ಮನೆಯ ಇಂಚಿಂಚೂ ಪರಿಶೀಲನೆ ಮಾಡಿದ್ದಾರೆ. FSL ಟೀಂ ಸಮೇತ ಪವಿತ್ರ ಮನೆಯಲ್ಲಿ ಸ್ಪಾಟ್ ಮಹಜರ್ ಮಾಡಿದ್ದು, ಪವಿತ್ರ ಮನೆಗೆ ಪೊಲೀಸರು ಬರ್ತಿದ್ದಂತೆ ಮನೆಯ ಬಳಿ ನೂರಾರು ಜನರು ಜಮಾಯಿಸಿದ್ದರು.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಒಂದು ವರ್ಷದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ – ಆರ್.ಅಶೋಕ್ ಕಿಡಿ..!