Download Our App

Follow us

Home » ಅಪರಾಧ » ದರ್ಶನ್​​​ ಅಂಡ್​ ಗ್ಯಾಂಗ್​​ಗೆ ಬಿಗ್​ ಶಾಕ್ – ಚಾರ್ಜ್​ ಶೀಟ್​ ಸಲ್ಲಿಕೆಗೆ ಮುಹೂರ್ತ ಫಿಕ್ಸ್..!

ದರ್ಶನ್​​​ ಅಂಡ್​ ಗ್ಯಾಂಗ್​​ಗೆ ಬಿಗ್​ ಶಾಕ್ – ಚಾರ್ಜ್​ ಶೀಟ್​ ಸಲ್ಲಿಕೆಗೆ ಮುಹೂರ್ತ ಫಿಕ್ಸ್..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್​​ಗೆ ದಿನದಿಂದ ದಿನಕ್ಕೆ ಸಂಕಷ್ಟ ಹೆಚ್ಚಾಗುತ್ತಿದೆ. ದರ್ಶನ್ ವಿರುದ್ಧ ಪೊಲೀಸರು 4600 ಪುಟಗಳ ಅತಿದೊಡ್ಡ ಚಾರ್ಜ್​​ಶೀಟ್​ ರೆಡಿ ಮಾಡಿದ್ದು, ಇದೀಗ ಚಾರ್ಜ್​ಶೀಟ್​ ಸಲ್ಲಿಕೆಗೆ ಮುಹೂರ್ತ ಫಿಕ್ಸ್ ಆಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​ನ ಮೆಗಾ ಚಾರ್ಟ್​ಶೀಟ್​​ನ್ನು ಕಾಮಾಕ್ಷಿಪಾಳ್ಯ ಪೊಲೀಸರು ಗುರುವಾರ 24ನೇ ಎಸಿಎಂಎಂ ಕೋರ್ಟ್​ಗೆ ಸಲ್ಲಿಕೆ ಮಾಡಲಿದ್ದಾರೆ. ಸೆ.5ರಂದು ಚಾರ್ಜ್​​​​​ಶೀಟ್ ಸಲ್ಲಿಸಿದ ಕೂಡ್ಲೇ ACMM ಕೋರ್ಟ್​ನಿಂದ ಸಿಟಿ ಸಿವಿಲ್ ಕೋರ್ಟ್​ಗೆ ಕೇಸ್ ವರ್ಗಾವಣೆ ಆಗಲಿದೆ. 7 ವರ್ಷ ಮೇಲ್ಪಟ್ಟು ಅಥವಾ ಜೀವಾವಧಿ ಶಿಕ್ಷೆ ಕೇಸ್​ FTC ಕೋರ್ಟ್​ಗೆ ಶಿಫ್ಟ್ ಆಗ್ಬೇಕು, ಚಾರ್ಜ್​​​ಶೀಟ್ ಸಲ್ಲಿಸಿದ ನಂತ್ರ 2 ವರ್ಷದೊಳಗೆ ಜಡ್ಜ್​​ಮೆಂಟ್ ಬರೋ ಸಾಧ್ಯತೆಯಿದೆ.

ದರ್ಶನ್, ಪವಿತ್ರಾಗೌಡ ಸೇರಿ 19 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ದರ್ಶನ್ ದೋಸ್ತ್​​​ಗಳೇ ಪ್ರಮುಖ ಸಾಕ್ಷಿಗಳಾಗಿದ್ದಾರೆ. ನಟ ಚಿಕ್ಕಣ್ಣ ಸೇರಿ 11 ಮಂದಿ ಕೇಸ್​ನಲ್ಲಿ ಪ್ರಮುಖ ಸಾಕ್ಷಿಗಳಿದ್ದು, FSL ರಿಪೋರ್ಟ್, ರಕ್ತದ ಮಾದರಿ, ಪೋಸ್ಟ್ ಮಾರ್ಟಂ ರಿಪೋರ್ಟ್ ಕೂಡ ಇದೆ. ಟೆಕ್ನಿಕಲ್ ಎವಿಡೆನ್ಸ್​ ಸೇರಿ 100ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳಿದೆ. ಹಾಗಾಗಿ A-1 ಪವಿತ್ರಾಗೌಡ ಹಾಗೂ A-2 ಆರೋಪಿ ದರ್ಶನ್ ಸಂಕಷ್ಟ ಫಿಕ್ಸ್ ಆಗಿದೆ.

ಇದನ್ನೂ ಓದಿ : ಇಂದು ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ – ಏನಾಗುತ್ತೆ ಸಿಎಂ ಪ್ರಾಸಿಕ್ಯೂಷನ್​​ ಭವಿಷ್ಯ?

Leave a Comment

DG Ad

RELATED LATEST NEWS

Top Headlines

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಕವಿತಾ ಗೌಡ – ಮಗನ ಕಾಲಿನ ವಿಡಿಯೋ ಹಂಚಿಕೊಂಡ ಚಂದನ್..!

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್​ಗೆ ಗಂಡು ಮಗು ಜನಿಸಿದೆ. ಇದೀಗ ಮಗುವಿನ ಕಾಲಿನ ಒಂದು ವಿಡಿಯೋ ಶೇರ್

Live Cricket

Add Your Heading Text Here