ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ಗೆ ದಿನದಿಂದ ದಿನಕ್ಕೆ ಸಂಕಷ್ಟ ಹೆಚ್ಚಾಗುತ್ತಿದೆ. ದರ್ಶನ್ ವಿರುದ್ಧ ಪೊಲೀಸರು 4600 ಪುಟಗಳ ಅತಿದೊಡ್ಡ ಚಾರ್ಜ್ಶೀಟ್ ರೆಡಿ ಮಾಡಿದ್ದು, ಇದೀಗ ಚಾರ್ಜ್ಶೀಟ್ ಸಲ್ಲಿಕೆಗೆ ಮುಹೂರ್ತ ಫಿಕ್ಸ್ ಆಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನ ಮೆಗಾ ಚಾರ್ಟ್ಶೀಟ್ನ್ನು ಕಾಮಾಕ್ಷಿಪಾಳ್ಯ ಪೊಲೀಸರು ಗುರುವಾರ 24ನೇ ಎಸಿಎಂಎಂ ಕೋರ್ಟ್ಗೆ ಸಲ್ಲಿಕೆ ಮಾಡಲಿದ್ದಾರೆ. ಸೆ.5ರಂದು ಚಾರ್ಜ್ಶೀಟ್ ಸಲ್ಲಿಸಿದ ಕೂಡ್ಲೇ ACMM ಕೋರ್ಟ್ನಿಂದ ಸಿಟಿ ಸಿವಿಲ್ ಕೋರ್ಟ್ಗೆ ಕೇಸ್ ವರ್ಗಾವಣೆ ಆಗಲಿದೆ. 7 ವರ್ಷ ಮೇಲ್ಪಟ್ಟು ಅಥವಾ ಜೀವಾವಧಿ ಶಿಕ್ಷೆ ಕೇಸ್ FTC ಕೋರ್ಟ್ಗೆ ಶಿಫ್ಟ್ ಆಗ್ಬೇಕು, ಚಾರ್ಜ್ಶೀಟ್ ಸಲ್ಲಿಸಿದ ನಂತ್ರ 2 ವರ್ಷದೊಳಗೆ ಜಡ್ಜ್ಮೆಂಟ್ ಬರೋ ಸಾಧ್ಯತೆಯಿದೆ.
ದರ್ಶನ್, ಪವಿತ್ರಾಗೌಡ ಸೇರಿ 19 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ದರ್ಶನ್ ದೋಸ್ತ್ಗಳೇ ಪ್ರಮುಖ ಸಾಕ್ಷಿಗಳಾಗಿದ್ದಾರೆ. ನಟ ಚಿಕ್ಕಣ್ಣ ಸೇರಿ 11 ಮಂದಿ ಕೇಸ್ನಲ್ಲಿ ಪ್ರಮುಖ ಸಾಕ್ಷಿಗಳಿದ್ದು, FSL ರಿಪೋರ್ಟ್, ರಕ್ತದ ಮಾದರಿ, ಪೋಸ್ಟ್ ಮಾರ್ಟಂ ರಿಪೋರ್ಟ್ ಕೂಡ ಇದೆ. ಟೆಕ್ನಿಕಲ್ ಎವಿಡೆನ್ಸ್ ಸೇರಿ 100ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳಿದೆ. ಹಾಗಾಗಿ A-1 ಪವಿತ್ರಾಗೌಡ ಹಾಗೂ A-2 ಆರೋಪಿ ದರ್ಶನ್ ಸಂಕಷ್ಟ ಫಿಕ್ಸ್ ಆಗಿದೆ.
ಇದನ್ನೂ ಓದಿ : ಇಂದು ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ – ಏನಾಗುತ್ತೆ ಸಿಎಂ ಪ್ರಾಸಿಕ್ಯೂಷನ್ ಭವಿಷ್ಯ?