ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿರುವ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರು ಸುಮಾರು ಐದು ವರ್ಷಗಳ ದಾಂಪತ್ಯದ ನಂತರ ಬೇರ್ಪಡುತ್ತಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಈ ಸುದ್ದಿ ಬೆನ್ನಲ್ಲೇ ಚಹಲ್ ಕಂಠಪೂರ್ತಿ ಕುಡಿದಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದಾರೆ. ಅಲ್ಲದೇ ಫೋಟೋಗಳನ್ನೂ ಡಿಲೀಟ್ ಸಹ ಮಾಡಿದ್ದಾರೆ. ಇದು ಅವರ ವಿಚ್ಛೇದನ ವಂದತಿಗೆ ಮತ್ತಷ್ಟು ಜೀವ ತುಂಬಿದಂತಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಯುಜ್ವೇಂದ್ರ ಚಹಲ್ ಅವರ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ, ಅವರು ಕಂಠಪೂರ್ತಿ ಮದ್ಯಪಾನ ಮಾಡಿರುವುದು ನಿಜ. ಹೀಗಾಗಿ ನಡೆಯಲು ಕಷ್ಟಪಡುತ್ತಿದ್ದಾರೆ. ಅಲ್ಲದೆ ಒಬ್ಬ ವ್ಯಕ್ತಿಯೊಬ್ಬರ ಆಸರೆಯೊಂದಿಗೆ ಅವರನ್ನು ಕಾರಿನಲ್ಲಿ ಕೂರಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಅದು ಪ್ರಸ್ತುತ ವಿಡಿಯೋ ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ. ಅಲ್ಲದೆ ವೈಯುಕ್ತಿಕ ಜೀವನದ ಏರಿಳಿತದಿಂದಾಗಿ ಅವರು ಹೀಗೆ ಕಾಣಿಸಿಕೊಂಡಿದ್ದಾರೆ ಎಂಬುದನ್ನು ದೃಢೀಕರಿಸಲಾಗಿಲ್ಲ.
ಇದನ್ನೂ ಓದಿ : ಆತಂಕ ಶುರುವಾಗುವ ಮೊದಲೇ ಬೆಂಗಳೂರಿಗೆ ವಕ್ಕರಿಸಿದ HMPV – 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆ..!