Download Our App

Follow us

Home » ಸಿನಿಮಾ » ಕಾಸ್ಟಿಂಗ್ ಕೌಚ್​​ಗೆ ಕೋಟಿ ಕೊಟಿ ಕುಳಗಳ ಹಿಂದೆ ಹೋಗೋರೆ ಕಾರಣ – ನಟಿ ಮೇಘನಾ ಸಾಕ್ಷಿ ಸ್ಫೋಟಕ ಹೇಳಿಕೆ..!

ಕಾಸ್ಟಿಂಗ್ ಕೌಚ್​​ಗೆ ಕೋಟಿ ಕೊಟಿ ಕುಳಗಳ ಹಿಂದೆ ಹೋಗೋರೆ ಕಾರಣ – ನಟಿ ಮೇಘನಾ ಸಾಕ್ಷಿ ಸ್ಫೋಟಕ ಹೇಳಿಕೆ..!

ಬೆಂಗಳೂರು : ಮಲಯಾಳಂ ಚಿತ್ರರಂಗದಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಸ್ಯಾಂಡಲ್​​ವುಡ್​​ನಲ್ಲೂ ಕಾಸ್ಟಿಂಗ್​ ಕೌಚ್ ನಡೆಯುತ್ತಿದೆ ಅನ್ನೊ ಸುದ್ದಿ ಹರಿದಾಡುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸಮಿತಿಯೊಂದನ್ನು ರಚಿಸಬೇಕು ಎಂದು ಚಂದನವನದ ಖ್ಯಾತ ನಟ ನಟಿಯರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು. ಈ ವೇಳೆ ನಟಿ ಮೇಘನಾ ಸಾಕ್ಷಿ ಅವರು ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್​ ಕೌಚ್​​​ ನಡೆದೇ ಇಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸಿನಿಮಾ, ಸೀರಿಯಲ್​​ಗಳಲ್ಲಿ ಕಾಂಸ್ಟಿಂಗ್ ಕೌಚ್ ನಡೆಯೋದಕ್ಕೆ ಕೋಟಿ ಕೊಟಿ ಕುಳಗಳ ಹಿಂದೆ ಹೋಗೋ ನಟಿಯರೇ ಕಾರಣ. ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್​ ಅನ್ನೋದು ಶುದ್ಧಸುಳ್ಳು, ಆ ರೀತಿ ಯಾವುದೂ ನಡೆಯೋದೇ ಇಲ್ಲ. ಕಾಸ್ಟಿಂಗ್ ಕೌಚ್​ನ್ನ ಹೀರೋಯಿನ್​​ಗಳೇ ಕ್ರಿಯೇಟ್ ಮಾಡೋದು ಎಂದು ಕನ್ನಡದ ನಟಿ ಮೇಘನಾ ಸಾಕ್ಷಿ Btvಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಂಚಕ್ಕೆ ಕರೀತಾರೆ ಅಂತಾ ಕೆಲವರು ಹೇಳೋದೆಲ್ಲಾ ಬರೀ ಬೊಗಳೆ, ಬ್ರಾಂಡೆಡ್ ಸ್ಲಿಪ್ಪರ್, ಬ್ರಾಂಡೆಡ್​​ ಬ್ಯಾಗ್ಸ್​, ಬ್ರಾಂಡ್ ನೆಕ್​ಲೆಸ್​​ ಸಿಗುತ್ತೆ. ಫಾರಿನ್ ಟ್ರಿಪ್​, ಬಾಲಿ, ಥೈಲ್ಯಾಂಡ್​, ದುಬೈಗೆ ಟ್ರಿಪ್ ಹೋಗೋದಕ್ಕೆ ರಾಜಕಾರಣಿ, ಬ್ಯುಸಿನೆಸ್​​ಮ್ಯಾನ್​​​ ಮಕ್ಕಳ ಲಿಂಕ್ ಇಟ್ಕೊಳ್ತಾರೆ ಎಂದಿದ್ದಾರೆ.

ಅಸಲಿಗೆ ಸಿನಿಮಾಗೆ ನಟಿಯರು ಸಹಿ ಹಾಕೋವಾಗ ಏನಾಗುತ್ತೆ ಗೊತ್ತಾ? ಯಾವುದೇ ನಟಿ ಸೈನ್​ ಹಾಕಬೇಕಾದ್ರೆ ಕಮಿಟ್​ಮೆಂಟ್​​ ಆಪ್ಷನ್ ಇರುತ್ತೆ. ಆ ಸಿನಿಮಾ ಪ್ರಾಜೆಕ್ಟ್​​​​​ನ ಫಾರ್ಮ್​ನಲ್ಲಿ ಎಲ್ಲವೂ ನಮೂದಾಗಿರುತ್ತೆ, ಕೆಲವರು ಕಮಿಟ್​ಮೆಂಟ್​ ಅನ್ನೋ ಕಾಲಂಗೆ ಟಿಕ್​ ಹಾಕ್ತಾರೆ. ನಾನು ಎಲ್ಲದಕ್ಕೂ ರೆಡಿ ಅಂತಾ ಸಿನಿಮಾದಲ್ಲಿ ಆಕ್ಟ್ ಮಾಡ್ತಾರೆ, ಕಮಿಟ್​ಮೆಂಟ್​ ಅನ್ನೋ ಕಾಲಂಗೆ ಟಿಕ್​ ಹಾಕ್ಲೇಬೇಕು ಅಂತಿಲ್ಲ. ಆದ್ರೆ, ಹೈಫೈ ಲೈಫ್​ಗೋಸ್ಕರ ಹೀರೋಯಿನ್​ಗಳೇ ಕಮಿಟ್ ಆಕ್ತಾರೆ, ಒಂದು ವೇಳೆ ಕಮಿಟ್​​ಗೆ ಓಕೆ ಅಂದ್ರೆ ಜಾಸ್ತಿ ಪೇಮೆಂಟ್ ಸಿಗುತ್ತೆ.

ಸ್ಯಾಂಡಲ್​ವುಡ್​ನಲ್ಲಿ ಎಲ್ಲವೂ ಅಂಡರ್​ಸ್ಟ್ಯಾಂಡಿಂಗ್​ನಲ್ಲೇ ನಡೆಯೋದು, ಈಗಿರೋ ಎಲ್ಲಾ ಹೀರೋಯಿನ್​ಗಳು ಕಮಿಟ್​ ಆಗಿಯೇ ನಟಿಸೋದಾ..? ಇಲ್ಲವಾದ್ರೆ ದಿನದ ಕೂಲಿ ಅಷ್ಟೆ ಸಿಗೋದು. ಸೀರಿಯಲ್​ಗಳಾದ್ರೆ ದಿನಕ್ಕೆ 5 ಸಾವಿರವಷ್ಟೇ, ಫಿಲ್ಮ್ ಆದ್ರೆ 25 ಸಾವಿರವಷ್ಟೇ ಸಿಗುತ್ತೆ. ಆದ್ರಿಲ್ಲಿ ಕಮಿಟ್​ ಆದ ನಟಿಯರಿಗೆ ಎಲ್ಲವೂ ಡಬ್ಕಿಡಬಲ್ ಸಿಗುತ್ತೆ. ಕಾಸ್ಟಿಂಗ್ ಕೌಚ್​ ನಡೆಯೋಕೆ ಮುಖ್ಯ ಕಾರಣವೇ ಮೀಡಿಯೇಟರ್​, ಕಾಸ್ಟಿಂಗ್ ಮೀಡಿಯಟರ್​​​​ನಿಂದಲೇ ಡೈರೆಕ್ಟರ್, ಪ್ರೊಡ್ಯೂಸರ್​ ಲಿಂಕ್​ ಆಗೋದು. ಇವರೇ ಹೀರೋಯಿನ್​ಗಳನ್ನ ಕಮಿಟ್​ಮೆಂಟ್​ಗೆ ಒಪ್ಪಿಸೋದು, ಕನ್ನಡ ಚಿತ್ರರಂಗದಲ್ಲಿ ಈ ಮೀಡಿಯೇಟರ್​ಗಳನ್ನ ಬ್ಯಾನ್ ಮಾಡಬೇಕು ಎಂದು ನಟಿ ಮೇಘನಾ ಸಾಕ್ಷಿ ಆಕ್ರೋಶ ಹೊರಹಾಕಿದ್ದಾರೆ.

ಹೈಫೈ ನಟಿಯರು ರಾಜಕಾರಣಿಗಳು, ಬ್ಯುಸಿನೆಸ್​​ಮ್ಯಾನ್​​​ ಮಕ್ಕಳ ಲಿಂಕ್​​ ಇಟ್ಕೊಳ್ತಾರೆ, ಬೇಕಾದ್ರೆ ಆ ನಟಿಯರ ಕಾಲ್ ಲಿಸ್ಟ್​ ನೋಡಿದ್ರೆ ಗೊತ್ತಾಗುತ್ತೆ. ಸೀರಿಯಲ್​, ಫಿಲ್ಮ್​​​ಗೆ ಇಂತಿಷ್ಟೇ ಅಂತಾ ರೆಮ್ಯುನರೇಷನ್​ ಇರುತ್ತೆ. ಅಷ್ಟು ಪಡೆದ್ರೂ ಮಾಮೂಲಿ ಲೈಫ್ ಲೀಡ್ ಮಾಡೋಕ್ಕಾಗಲ್ಲ, ಆದ್ರೆ, ಅವರೆಲ್ಲ ಎಲ್ಲದಕ್ಕೂ ಕಮಿಟ್ ಆಗಿ ಹೈಫೈ ಲೀಡ್ ಮಾಡ್ತಾರೆ. ಇಂಥಾ ಹೀರೋಯಿನ್​ಗಳಿಂದಲೇ ನಮ್ಮಂಥವರಿಗೆ ಕೆಟ್ಟ ಹೆಸರು ಎಂದು ನಟಿ ಮೇಘನಾ ಸಾಕ್ಷಿ Btvಗೆ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ : ಕೈಮುಗಿದು ಕೇಳ್ಕೋತೀನಿ ಮಹದಾಯಿಗೆ ಅನುಮತಿ ಕೊಡಿಸಿ – ಪ್ರಹ್ಲಾದ್ ಜೋಶಿಗೆ ಡಿಸಿಎಂ ಡಿಕೆಶಿ ಮನವಿ..!

Leave a Comment

DG Ad

RELATED LATEST NEWS

Top Headlines

ಸಿ.ಟಿ ರವಿ ಅದ್ಧೂರಿ ಸ್ವಾಗತ ವೇಳೆ ಆ್ಯಂಬುಲೆನ್ಸ್​ಗಳ ದುರ್ಬಳಕೆ – ಚಾಲಕರು & ಮಾಲೀಕರ ಮೇಲೆ FIR ದಾಖಲು..!

ಚಿಕ್ಕಮಗಳೂರು : ಸಿ.ಟಿ ರವಿ ಅದ್ಧೂರಿ ಸ್ವಾಗತ ವೇಳೆ ಆ್ಯಂಬುಲೆನ್ಸ್​ಗಳ ದುರ್ಬಳಕೆ ಮಾಡಿದ ಸಂಬಂಧ ಆ್ಯಂಬುಲೆನ್ಸ್​​ ಚಾಲಕರು ಮತ್ತು ಮಾಲೀಕರ ಮೇಲೆ FIR ದಾಖಲಾಗಿದೆ. 7 ಆ್ಯಂಬುಲೆನ್ಸ್​​

Live Cricket

Add Your Heading Text Here