Download Our App

Follow us

Home » ಅಪರಾಧ » ಮಂಡ್ಯ : ಮನೆಗಳ್ಳರಿಗೆ ಸಾಥ್​​ ಕೊಡ್ತಿದ್ದ ಕಾನ್ಸ್‌ಟೇಬಲ್ ಸೇರಿ 8 ಮಂದಿ ಆರೋಪಿಗಳು​​ ಅರೆಸ್ಟ್..!

ಮಂಡ್ಯ : ಮನೆಗಳ್ಳರಿಗೆ ಸಾಥ್​​ ಕೊಡ್ತಿದ್ದ ಕಾನ್ಸ್‌ಟೇಬಲ್ ಸೇರಿ 8 ಮಂದಿ ಆರೋಪಿಗಳು​​ ಅರೆಸ್ಟ್..!

ಮಂಡ್ಯ : ಮನೆಗಳ್ಳರಿಗೆ ಸಾಥ್​​ ಕೊಡ್ತಿದ್ದ ಪೊಲೀಸ್ ಕಾನ್ಸ್​​ಟೇಬಲ್​ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು ಜಿಲ್ಲೆಯ ಮದ್ದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದ್ದೂರು ತಾಲೂಕಿನ ಕೊಪ್ಪ ಠಾಣೆಯ ಕಾನ್ಸ್​ಟೇಬಲ್ ಕೆಂಡಗಣ್ಣಯ್ಯ, ಡಾಲಿ, ಭವನ್, ಸಾದನ್, ಅಯೂಬ್, ಮುನ್ನಾ, ಪ್ರಸಾದ್, ಫಯಾಜ್ ಅರೆಸ್ಟ್​ ಮಾಡಲಾಗಿದೆ.

ಬಂಧಿತರಿಂದ 1 ಕೆಜಿ 486 ಗ್ರಾಂ ಚಿನ್ನಾಭರಣ, 1.70 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ. ಮನೆಗಳ್ಳತನ ಆರೋಪಿಗಳಿಗೆ ಕಾನ್ಸ್​ಟೇಬಲ್ ಕೆಂಡಗಣ್ಣಯ್ಯ ಸಹಾಯ ಮಾಡುತ್ತಿದ್ದರು. ಕಳೆದ ತಿಂಗಳು ಮದ್ದೂರು ತಾಲೂಕಿನ ಹಲವೆಡೆ ದೋಚಿದ್ದ ಗ್ಯಾಂಗ್, ಮದ್ದೂರಿನಲ್ಲಿ ವೈದ್ಯ ಚಂದ್ರು ಮನೆಯಲ್ಲಿ ಕೂಡ ಕಳ್ಳತನ ಮಾಡಿದ್ದರು. ಆರೋಪಿಗಳು 1 ಕೆಜಿ ಚಿನ್ನಾಭರಣ ಹಾಗೂ 8 ಲಕ್ಷ ರೂ. ನಗದು ದೋಚಿದ್ದರು.

ಇದೀಗ ಬಂಧಿತ 8 ಆರೋಪಿಗಳಿಂದ 5 ಮನೆಗಳ್ಳತನ ಪ್ರಕರಣಗಳು ಬಯಲಾಗಿದ್ದು, ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳಿಗೆ ಕಾನ್ಸ್​ಟೇಬಲ್ ಕೆಂಡಗಣ್ಣಯ್ಯ ಸಾಥ್ ನೀಡುತ್ತಿದ್ದರು ಎನ್ನುವ ವಿಚಾರ ಬಯಲಾಗಿದೆ. ಆರೋಪಿಗಳು ಕದ್ದ ಚಿನ್ನಾಭರಣವನ್ನು ಕೆಂಡಗಣ್ಣಯ್ಯ ಅಡವಿಟ್ಟು ಕೊಡುತ್ತಿದ್ದರು ಎನ್ನಲಾಗಿದೆ. ಈ ಆರೋಪಿಗಳ ಬಂಧನಕ್ಕೆ ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡಿತ್ತು. ಸದ್ಯ ಪೊಲೀಸರು 7 ಆರೋಪಿಗಳ ಜತೆ ಕಾನ್ಸ್​ಟೇಬಲ್ ಕೆಂಡಗಣ್ಣಯ್ಯ ಅವರನ್ನು ​ಬಂಧಿಸಿದ್ದಾರೆ.

ಇದನ್ನೂ ಓದಿ : ಒಟಿಟಿಗೆ ಕಾಯ್ಬೇಡಿ, ‘ಶಾಖಾಹಾರಿ’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬನ್ನಿ – ರಂಗಾಯಣ ರಘು..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಉಡುಪಿ : ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆ ಸಾ*ವು..!

ಉಡುಪಿ : 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ಹಾಗಾಗಿ ಮನೆಯಲ್ಲಿ ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಪಿ.ಯಶೋಧಾ ನಾರಾಯಣ ಉಪಾಧ್ಯ

Live Cricket

Add Your Heading Text Here