Download Our App

Follow us

Home » ರಾಜಕೀಯ » ಸಿದ್ದು ಸಂಪುಟದ ಮತ್ತೊಬ್ಬ ಮಿನಿಸ್ಟರ್​​ಗೆ ಕಂಟಕ – ಪ್ರಿಯಾಂಕ್​​ ಖರ್ಗೆ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ..!

ಸಿದ್ದು ಸಂಪುಟದ ಮತ್ತೊಬ್ಬ ಮಿನಿಸ್ಟರ್​​ಗೆ ಕಂಟಕ – ಪ್ರಿಯಾಂಕ್​​ ಖರ್ಗೆ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆ..!

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಹಗರಣ ಆರೋಪವೊಂದು ಕೇಳಿ ಬಂದಿದ್ದು, ಈ ಸಂಬಂಧ ಪ್ರಿಯಾಂಕ್ ಖರ್ಗೆಯವರ ವಿರುದ್ಧ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ.

ಈ ದೂರಿನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಫ್ಯಾಮಿಲಿಗೆ ದೊಡ್ಡ ಶಾಕ್​​​ ಎದುರಾಗಿದ್ದು, ಖರ್ಗೆ ಕುಟುಂಬದವರು KIADBಯಿಂದ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ 5 ಎಕರೆ ಜಾಗ ಪಡೆದ ಆರೋಪ ಗಂಬೀರ ಆರೋಪ ಕೇಳಿಬಂದಿದೆ.

ಸಚಿವರಾಗಿ ಪ್ರಿಯಾಂಕ್‌ ಖರ್ಗೆ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರು ಸಲ್ಲಿಸಲಾಗಿದ್ದು, ಸಚಿವ ಸಂಪುಟದಿಂದ ಪ್ರಿಯಾಂಕ್​ ಖರ್ಗೆ ವಜಾ ಮಾಡಬೇಕು, ಸಿದ್ದಾರ್ಥ ವಿಹಾರ ಟ್ರಸ್ಟ್​ಗೆ ನೀಡಿರುವ ಜಮೀನು ವಾಪಸ್‌ ಪಡೆಯಬೇಕು ಎಂದು ರಾಜ್ಯಪಾಲರ ಭೇಟಿ ಮಾಡಿ ಮನವಿ ಸಮೇತ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರು ಸಲ್ಲಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಕುಟುಂಬ ನಡೆಸುತ್ತಿರುವ ಸಿದ್ದಾರ್ಥ ವಿಹಾರ ಟ್ರಸ್ಟ್​ಗೆ ಪರಿಶಿಷ್ಟ ಕೋಟಾದ ಅಡಿಯಲ್ಲಿ ಹೈಟೆಕ್​​ ಡಿಫೆನ್ಸ್​ ಫೋರ್ಸ್​ಗಾಗಿ ಮೀಸಲಿಟ್ಟ 49 ಎಕರೆಯಲ್ಲಿ 5 ಎಕರೆ ಜಮೀನು  ಕಾನೂನು ಬಾಹಿರವಾಗಿ ಭೂಮಿ ಹಂಚಿಕೆಯಾಗಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಸಿಎ(ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಜಾಗ) ಸೈಟ್​ ಮಂಜೂರಾಗಿದೆ. ಒಂದು ಮನೆಗೆ ಸೀಮಿತವಾದ ಟ್ರಸ್ಟ್​ಗೆ ಜಾಗ ನೀಡಿದ್ದು ಸರಿಯಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಯಾವುದೇ ಕ್ಷಣ ಬಳ್ಳಾರಿ ಜೈಲಿಗೆ ದರ್ಶನ್​ ಶಿಫ್ಟ್ – ರಾಜಾತಿಥ್ಯದ ಪರಪ್ಪನ ಅಗ್ರಹಾರದಿಂದ ಪೊರ್ಕಿ ಎತ್ತಂಗಡಿ..!

Leave a Comment

DG Ad

RELATED LATEST NEWS

Top Headlines

ಸಿ.ಟಿ ರವಿ ಅವಾಚ್ಯ ಶಬ್ದ ಬಳಸಿದ್ದು ಸತ್ಯ, ಆ ಪದ ಬಳಸಿದ್ದು ಖಂಡನೀಯ – ಸಿಎಂ ಸಿದ್ದರಾಮಯ್ಯ ಕಿಡಿ..!

ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಆಕ್ಷೇಪಾರ್ಹ ಪದ ಬಳಸಿದ ಆರೋಪದಲ್ಲಿ ಪೊಲೀಸರಿಂದ ಬಂಧಿತರಾಗಿದ್ದ ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ ಅವರಿಗೆ ಕರ್ನಾಟಕ ಹೈಕೋರ್ಟ್‌

Live Cricket

Add Your Heading Text Here