Download Our App

Follow us

Home » ರಾಜ್ಯ » ರಾಜ್ಯ ಪೊಲೀಸ್​ ಅಧಿಕಾರಿಗಳ ಜೊತೆ ಸಿಎಂ ಸಿದ್ದು ಮೆಗಾ ಮೀಟಿಂಗ್ – ದರ್ಶನ್​​​​​ ಕೇಸ್​​ ಸೇರಿ ಸೂಕ್ಷ್ಮ ಪ್ರಕರಣ ಭೇದಿಸಿದ್ದಕ್ಕೆ ಶಹಬ್ಬಾಸ್​ ಗಿರಿ..!

ರಾಜ್ಯ ಪೊಲೀಸ್​ ಅಧಿಕಾರಿಗಳ ಜೊತೆ ಸಿಎಂ ಸಿದ್ದು ಮೆಗಾ ಮೀಟಿಂಗ್ – ದರ್ಶನ್​​​​​ ಕೇಸ್​​ ಸೇರಿ ಸೂಕ್ಷ್ಮ ಪ್ರಕರಣ ಭೇದಿಸಿದ್ದಕ್ಕೆ ಶಹಬ್ಬಾಸ್​ ಗಿರಿ..!

ಬೆಂಗಳೂರು : ರಾಜ್ಯ ಪೊಲೀಸ್​ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಮೆಗಾ ಮೀಟಿಂಗ್​​​ ನಡೆಸುತ್ತಿದ್ದಾರೆ. ಬೆಂಗಳೂರಿನ ನೃಪತುಂಗ ರಸ್ತೆಯ DG-IGP ಅಲೋಕ್​​ಮೋಹನ್​​​ ಕಚೇರಿಯಲ್ಲಿ ನಡೆಯುತ್ತಿರುವ ಪೊಲೀಸ್​ ವಾರ್ಷಿಕ ಸಭೆಗೆ ಈಗಾಗಲೇ  ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ.

ಗಾರ್ಡ್​ ಆಫ್​​ ಆನರ್​ ಸ್ವೀಕರಿಸಿ ಸಭೆಯಲ್ಲಿ ಭಾಗಿಯಾದ ಸಿಎಂ ಸಿದ್ದು ಅವರು, ವಾರ್ಷಿಕ ಸಭೆ ಆರಂಭದಲ್ಲೇ ಪೊಲೀಸರ ಬೆನ್ನುತಟ್ಟಿ ದರ್ಶನ್​​​​​ ಕೇಸ್​​ ಸೇರಿ ಸೂಕ್ಷ್ಮ ಪ್ರಕರಣ ಭೇದಿಸಿ, ಇಡೀ ದೇಶವೇ ಹೆಮ್ಮೆ ಪಡುವಂತ ಕೆಲಸ ಮಾಡಿದ್ದೀರಿ. ಕರ್ನಾಟಕ ಪೊಲೀಸ್​ ಘನತೆಯನ್ನು ಹೆಚ್ಚಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಭೆಯಲ್ಲಿ ಕಳೆದ ಒಂದು ವರ್ಷದ ಪೊಲೀಸ್ ಕಾರ್ಯವೈಖರಿ ಬಗ್ಗೆ ಸಮಾಲೋಚನೆ ನಡೆಯಲಿದ್ದು, ಕಾನೂನು ಸುವ್ಯವಸ್ತೆ, ಪೊಲೀಸರು ಭೇದಿಸಿದ ಸೂಕ್ಷ್ಮ ಪ್ರಕರಣಗಳು ಹಾಗೂ ಒಂದು ವರ್ಷದಲ್ಲಿ ನಡದ ಅಪರಾಧ ಕೃತ್ಯಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ರಿವ್ಯೂ ಮಾಡಲಿದ್ದಾರೆ.

ಇನ್ನು ಈ ಸಭೆಯಲ್ಲಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್​​​​, ಗೃಹ ಇಲಾಖೆ ಕಾರ್ಯದರ್ಶಿ, DG-IGP ಅಲೋಕ್​​ ಮೋಹನ್​​​, ಕಮಿಷನರ್​ ಬಿ.ದಯಾನಂದ್​, ಹಿರಿಯ ಅಧಿಕಾರಿಗಳಾದ ಹೇಮಂತ್​ ನಿಂಬಾಳ್ಕರ್​​​, ರಮಣ್​ ಗುಪ್ತ, ಧರ್ಮೇಂದ್ರ ಕುಮಾರ್​ ಮೀನಾ, ಪ್ರಶಾಂತ್​ಕುಮಾರ್​​​ ಠಾಕೂರ್​​, ಡಾ.ಎಂ.ಎ.ಸಲೀಮ್​​​, ಡಾ.ಕೆ.ರಾಮಚಂದ್ರರಾವ್​ ರಾವ್​​​, ಅಲೋಕ್​ಕುಮಾರ್, ಅರುಣ್​ ಚಕ್ರವರ್ತಿ, ಸೀಮಂತ್​ ಕುಮಾರ್​ ಸಿಂಗ್​​​, ಆರ್​​.ಹಿತೇಂದ್ರ, ಶರತ್​​ಕುಮಾರ್​ ಕೆ.ವಿ.-ಡಾ.ಶರಣಪ್ಪ, ವಂಶಿಕೃಷ್ಣ ಸಿ, ದಿವ್ಯಾ ಗೋಪಿನಾಥ್​​​, ಕಾರ್ತಿಕ್​ ರೆಡ್ಡಿ-ಡಿಸಿಪಿ ಡಿ.ದೇವರಾಜ್​​, ಸಿರಿಗೌರಿ, ಸಿ.ಕೆ.ಬಾಬಾ, ಎಸ್​ಗಿರೀಶ್​ ಸೇರಿ ಹಲವರು ಭಾಗಿಯಾಗಿದ್ದು,  90ಕ್ಕೂ ಹೆಚ್ಚು IPS ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ಹಾವೇರಿಯಲ್ಲೂ ಡೆಂಘೀ ಜ್ವರದ ಕಾಟ – ಶಂಕಿತ ಡೆಂಘೀಗೆ 9 ವರ್ಷದ ಮಗು ಬಲಿ..!

Leave a Comment

DG Ad

RELATED LATEST NEWS

Top Headlines

ಹಾಸನಾಂಬೆ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ..!

ಹಾಸನ : ಹಾಸನದ ಹಾಸನಾಂಬೆ ದೇವಿಯ ಉತ್ಸವ ಆರಂಭವಾಗಿದೆ. ಅಕ್ಟೋಬರ್ 24ರಂದು ದೇಗುಲದ ಬಾಗಿಲು ತೆರೆಯಲಾಗಿದೆ. ನವೆಂಬರ್ 3ರವರೆಗೆ ಉತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ

Live Cricket

Add Your Heading Text Here