ಹಾವೇರಿ : ರಾಜ್ಯದಲ್ಲಿ ಡೆಂಘೀ ಸೋಂಕು ಉಲ್ಭಣಗೊಂಡಿದೆ. ಹಾವೇರಿಯಲ್ಲೂ ಶಂಕಿತ ಡೆಂಘೀಗೆ 9 ವರ್ಷದ ಮಗು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ದ್ಯಾಮಪ್ಪ ಬನ್ನಿಹಟ್ಟಿ ಪುತ್ರಿ ದಿವ್ಯ ದ್ಯಾಮಪ್ಪ ಬನ್ನಿಹಟ್ಟಿ ಮೃತಪಟ್ಟ ಮಗು.
ಮೃತ ಬಾಲಕಿ ದಿವ್ಯ ದ್ಯಾಮಪ್ಪ ಕಳೆದ 12 ದಿನಗಳ ಹಿಂದೆ ಜ್ವರದಿಂದ ಬಳುತ್ತಿದ್ದಳು. ಈ ಹಿನ್ನಲೆಯಲ್ಲಿ ಪಟ್ಟಣದ ಪೂಜಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಆಶ್ರಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಬಳಿಕ ಡೆಂಘೀ ಶಂಕೆಯಿಂದ ದಾವಣಗೆರೆಯ SS ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲೂ ಪರಿಸ್ಥಿತಿ ಸುಧಾರಿಸದೇ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಮಣಿಪಾಲ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಫಲಿಸದೇ 9 ವರ್ಷದ ಮಗು ದಿವ್ಯಾ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ : ದರ್ಶನ್ ಕೇಸ್ನಲ್ಲಿ ಮತ್ತಿಬ್ಬರಿಗೆ ಬುಲಾವ್ – ಮೋಹನ್ ರಾಜ್ ಬೆನ್ನಲ್ಲೇ ಇನ್ನಿಬ್ಬರಿಗೆ ನೋಟಿಸ್ ಜಾರಿ..!
Post Views: 63