ಚನ್ನಪಟ್ಟಣ : ಕರ್ನಾಟಕ ಉಪಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಚನ್ನಪಟ್ಟಣ ಅಖಾಡದಲ್ಲಿ ನಿಖಿಲ್ ಗಳಗಳನೇ ಕಣ್ಣೀರಿಟ್ಟಿದ್ದಾರೆ.
ಚನ್ನಪಟ್ಟಣ ಅಖಾಡದಲ್ಲಿ ಭಾವುಕಾರದ ನಿಖಿಲ್ ಕುಮಾರಸ್ವಾಮಿ ಅವರು, ನಾನು ರಾಜಕೀಯ ಷಡ್ಯಂತ್ರಕ್ಕೆ ಎರಡು ಬಾರಿ ಬಲಿಯಾದೆ. ಎರಡು ಎಲೆಕ್ಷನ್ಗಳಲ್ಲಿ ನಾನು ಪೆಟ್ಟು ತಿಂದಿದ್ದೇನೆ.
ನಾನು ಬಹಳ ನೋವಿನಲ್ಲಿದ್ದೇನೆ. ಕಾರ್ಯಕರ್ತರಿಗೆ ಬೆಲೆ ಕೊಡುವ ಉದ್ದೇಶ ನಮಗೆ ಇತ್ತು ಎಂದು ಜನರ ಮುಂದೆ ನಿಖಿಲ್ ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ.
ಇನ್ನು ಭಾವುಕ ಮಾತನಾಡಿದ ನಿಖಿಲ್ ಸಂತೈಸಿದ ಚನ್ನಪಟ್ಟಣ ಜನರು, ಅಣ್ಣಾ..ಚನ್ನಪಟ್ಟಣದ ಜನ ನಿಮ್ಮ ಜೊತೆ ಇದ್ದೇವೆ. ನೀವು ಕಣ್ಣೀರು ಹಾಕಬೇಡಿ. ನಾವು ನಿಮ್ಮ ಕೈ ಹಿಡಿಯುತ್ತೇವೆ.
ಮೂರನೇ ಬಾರಿ ಗೆದ್ದೇ ಗೆಲ್ಲುತ್ತೀರೀ ಎಂದು ಸಂತೈಸಿದ್ದಾರೆ.
ಇದನ್ನೂ ಓದಿ : ಬಿಜೆಪಿಯವರು ರಾಜಕೀಯಕ್ಕಾಗಿ ಹೋರಾಟ ಮಾಡ್ತಿದ್ದಾರೆ – ವಕ್ಫ್ ಪ್ರೊಟೆಸ್ಟ್ಗೆ ಸಜ್ಜಾದ ಬಿಜೆಪಿಗೆ ಸಿಎಂ ಸಿದ್ದು ಗುದ್ದು..!