ಚಿತ್ರದುರ್ಗ : ಲೋಕಸಭೆ ಚುನಾವಣಾ ಅಖಾಡ ರಂಗೇರಿದ್ದು, ಚಿತ್ರದುರ್ಗ ಕ್ಷೇತ್ರದಲ್ಲಿ ಇದೀಗ ಭಿನ್ನಮತ ಭುಗಿಲೆದ್ದಿದೆ. ಪ್ರತಿಭಟನೆ ವೇಳೆ ಶಾಸಕ ಚಂದ್ರಪ್ಪ ಅವರ ಕಿರಿಯ ಪುತ್ರನ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ನಗರದ ಬಿಜೆಪಿ ಕಾರ್ಯಾಲಯದ ಬಳಿ ಚಂದ್ರಪ್ಪ ಅವರ ಕಿರಿಯ ಪುತ್ರನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ಅವರ ಎರಡನೇ ಪುತ್ರ ದೀಪ್ ಚಂದನ್ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಸಕ ಚಂದ್ರಪ್ಪ ಪುತ್ರ ರಘುಚಂದನ್ಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಗೋ ಬ್ಯಾಕ್ ಕಾರಜೋಳ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಪ್ರತಿಭಟನೆ ವೇಳೆ ಎಎಸ್ಪಿ ಲಕ್ಷ್ಮಿ ನಾರಾಯಣ್ ಹಾಗೂ ದೀಪ್ ಚಂದನ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಯಾಕೆ ಹೊಡೆಯುತ್ತಿದ್ದೀರಿ ಎಂದು ದೀಪ್ ಚಂದನ್ ಪ್ರಶ್ನೆ ಮಾಡಿದ್ದಾರೆ. ಹಾಗಾಗಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆದಿದೆ.
ಇದನ್ನೂ ಓದಿ : ರಂಗೋಲಿ ಅಳಿಸಿ ಕಿರುಕುಳ ನೀಡ್ತಿದ್ದಾರೆಂದು ಸಿಸಿಟಿವಿ ದೃಶ್ಯ ಸಮೇತ ಪೋಸ್ಟ್ ಮೂಲಕ ಪೊಲೀಸರಿಗೆ ದೂರು ನೀಡಿದ ಮಹಿಳೆ..!