Download Our App

Follow us

Home » ಸಿನಿಮಾ » ಮೊದಲ ಹಾಡಿನಲ್ಲೇ ಮೋಡಿ ಮಾಡುತ್ತಿದ್ದಾನೆ ‘chef ಚಿದಂಬರ’ : ಟೈಟಲ್ ಟ್ರ್ಯಾಕ್​​ಗೆ ಅಭಿಮಾನಿಗಳು ಫಿದಾ..!

ಮೊದಲ ಹಾಡಿನಲ್ಲೇ ಮೋಡಿ ಮಾಡುತ್ತಿದ್ದಾನೆ ‘chef ಚಿದಂಬರ’ : ಟೈಟಲ್ ಟ್ರ್ಯಾಕ್​​ಗೆ ಅಭಿಮಾನಿಗಳು ಫಿದಾ..!

ಎಂ.ಆನಂದರಾಜ್ ನಿರ್ದೇಶನದ ಹಾಗೂ ಅನಿರುದ್ದ್ ಜತಕರ್ ನಾಯಕರಾಗಿ ನಟಿಸಿರುವ “chef ಚಿದಂಬರ” ಚಿತ್ರದ ಚಿತ್ರೀಕರಣ ಹಾಗೂ ಪೊಸ್ಟ್ ಪ್ರೊಡಕ್ಷನ್ ವರ್ಕ್ ಪೂರ್ಣವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಆರಂಭದ ಫಸ್ಟ್ ಲುಕ್ ಪೋಸ್ಟರ್​​ನಿಂದಲೇ ಈ ಚಿತ್ರ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಇತ್ತೀಚಿಗೆ ಈ ಚಿತ್ರದ ಟೈಟಲ್ ಟ್ರ್ಯಾಕ್ A2 music ಮೂಲಕ ಬಿಡುಗಡೆಯಾಗಿದೆ.

ಇದು ಬಿಡುಗಡೆಯಾಗುತ್ತಿರುವ ಚಿತ್ರದ ಮೊದಲ ಗೀತೆಯೂ ಹೌದು. ಶ್ರೀಗಣೇಶ್ ಪರಶುರಾಮ್ ಬರೆದು, ರಿತ್ವಿಕ್ ಮುರಳಿಧರ್ ಸಂಗೀತ ನೀಡಿರುವ ಈ ಹಾಡನ್ನು ನಾಯಕ ಅನಿರುದ್ದ್ ಅವರೆ ಹಾಡಿದ್ದಾರೆ. ಅನಿರುದ್ದ್ ಅವರ ಗಾಯನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡಿನ ಕೆಲವು ಭಾಗ RAP ಶೈಲಿಯಲ್ಲಿದ್ದು, ಅದನ್ನು ರೋಹಿತ್ ಅವರು ಹಾಡಿದ್ದಾರೆ. ಮೊದಲ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಿಣೆಯಾಗುತ್ತಿದೆ.

ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, “ವಿಕ್ರಾಂತ್ ರೋಣ” ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ “ಲವ್ ಮಾಕ್ಟೇಲ್” ಖ್ಯಾತಿಯ ರೆಚೆಲ್ ಡೇವಿಡ್‌ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್‌, ಶಿವಮಣಿ ಮುಂತಾದವರು “chef ಚಿದಂಬರ” ಚಿತ್ರದ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಇನ್ನೂ 4 ದಿನ ಭಾರಿ ಮಳೆ ಸಾಧ್ಯತೆ..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here