ಬೆಂಗಳೂರು : ಸೋಶಿಯಲ್ ಮಿಡಿಯಾ ಅಂದ್ರೇನೆ ವೈರಲ್ ಜಗತ್ತು. ಇಂದಿನ ಕಾಲದಲ್ಲಿ ಯಾವುದೇ ಬಿಸಿನೆಸ್ ಪ್ರಾರಂಭಿಸಿ ಲಾಭ ಗಳಿಸುವುದು ಅಷ್ಟು ಸುಲಭವಲ್ಲ. ಹೀಗಿರುವಾಗ ವಿಭಿನ್ನ ರೀತಿಯ ಹೆಸರಿನಿಂದಲೇ ಬೆಂಗಳೂರಿನ ಆರ್ ಟಿ ನಗರದ ಸಣ್ಣ ಚಾಟ್ಸ್ ಸೆಂಟರ್ ಒಂದು ಸೋಶಿಯಲ್ ಮಿಡಿಯಾದಲ್ಲಿ ಭಾರೀ ಸುದ್ದಿಯಲ್ಲಿದೆ. ಈ ಚಾಟ್ ಸೆಂಟರ್ನ ಬೋರ್ಡನ್ನು @dankchikidang ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗಾಗಲೇ ಲಕ್ಷಾಂತರ ನೆಟ್ಟಿಗರನ್ನು ತಲುಪಿದೆ.ಜನವರಿ 29ರಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.
ಚಾಟ್ ಸೆಂಟರ್ ನ ಹೆಸರನ್ನು ಓದಿದ ನಂತರ, ಜನರು ವಿವಿಧ ರೀತಿಯ ಕಾಮೆಂಟ್‌ಗಳನ್ನು ನೀಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಚಾಟ್ಸ್ ಅಂಗಡಿಗೆ ‘ಎಕ್ಸ್ ಗರ್ಲ್‌ಫ್ರೆಂಡ್ ಬಂಗಾರಪೇಟೆ ಚಾಟ್’ ಸೆಂಟರ್ ಎಂದು ಹೆಸರಿಟ್ಟಿರುವುದು ಈಗ ಎಲ್ಲರ ಕುತೂಹಲ ಹೆಚ್ಚಳಕ್ಕೆ ಕಾರಣವಾಗಿದೆ. ಈಗ ಈ ಹೆಸರಿನಿಂದಲೇ ಅದು ಗ್ರಾಹಕರನ್ನು ಸಹ ಸೆಳೆಯುತ್ತಿದೆ.
ಎಕ್ಸ್ ಗರ್ಲ್‌ಫ್ರೆಂಡ್ ಚಾಟ್ ಸೆಂಟರ್’ ವೈರಲ್ ಪೋಟೊ ಇಲ್ಲಿದೆ ನೋಡಿ :
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರು, ‘ಯಾರೂ ತಮ್ಮ ಗೆಳತಿಯೊಂದಿಗೆ ಇಲ್ಲಿಗೆ ಹೋಗಲು ಇಷ್ಟಪಡಲ್ಲ’ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು ‘ಈ ಬೋರ್ಡ್ ನನ್ನ ಮಾಜಿ ಪ್ರೇಯಸಿಯನ್ನೇ ನೆನಪಿಸಿತು’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಬಾಲಿವುಡ್ ನಟಿ ಪೂನಂ ಪಾಂಡೆ ಇನ್ನಿಲ್ಲ- 32 ವರ್ಷಕ್ಕೇ ಕೊನೆಯುಸಿರೆಳೆದ ಬೋಲ್ಡ್ ಬ್ಯೂಟಿ..!