ಉಡುಪಿ : ಕ್ರಿಶ್ಚಿಯನ್ ಧರ್ಮ ಪ್ರಚಾರಕ್ಕೆ ಬಂದವರನ್ನು ಸ್ಥಳೀಯರೊಬ್ಬರು ಅಟ್ಟಾಡಿಸಿಕೊಂಡು ಹೋದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಉಪ್ಪಿನಕೋಟೆಯಲ್ಲಿ ನಡೆದಿದೆ.
ಇಬ್ಬರು ಮಹಿಳೆಯರು ತಮ್ಮ ಧರ್ಮ ಪ್ರಚಾರದ ಹಿನ್ನೆಲೆಯಲ್ಲಿ ಉಪ್ಪಿನಕೋಟೆ ಬಳಿ ಬಂದಿದ್ದರು. ಕ್ರಿಶ್ಚಿಯನ್ ಧರ್ಮದ ಕುರಿತು ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದ ಸಂದರ್ಭ ಸ್ಥಳೀಯರೊಬ್ಬರು ಕೋಪಗೊಂಡು, ಮತಾಂತರ ಮಾಡಲು ಬಂದಿದ್ದೀರ ಎಂದು ಅಕ್ರೋಶ ವ್ಯಕ್ತಪಡಿಸಿ ಆವಾಚ್ ಹಾಕಿದ್ದಾರೆ.
ಬಳಿಕ ಸ್ಥಳೀಯ ವ್ಯಕ್ತಿ ಪ್ರಚಾರಕ್ಕೆ ಬಂದಿದ್ದ ಇಬ್ಬರು ಮಹಿಳೆಯರನ್ನು ದೊಣ್ಣೆ ಹಿಡಿದು ಅಟ್ಟಾಡಿಸಿಕೊಂಡು ಹೋಗಿ, ಇನ್ನೊಮ್ಮೆ ಈ ಭಾಗಕ್ಕೆ ಬಾರದಂತೆ ಗದರಿಸಿ ಓಡಿಸಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ರಾಜಕಾರಣ ನನಗೆ ಗೊತ್ತಿಲ್ಲ, ರಾಜಕೀಯಕ್ಕೆ ನಾನು ಹೋಗುವುದಿಲ್ಲ : ನಟ ಡಾಲಿ ಧನಂಜಯ್ ಸ್ಪಷ್ಟನೆ..!
Post Views: 75